ಫೆರಾರಿ ಎಫ್12 ಬರ್ಲಿನೆಟ್ಟಾ ವಿಶೇಷ ಆವೃತ್ತಿ ಪರಿಚಯ
ಇಟಲಿಯ ಐಕಾನಿಕ್ ಸೂಪರ್ ಕಾರು ತಯಾರಿಕ ಸಂಸ್ಥೆಯಾಗಿರುವ ಫೆರಾರಿ ಅತಿ ನೂತನ ಎಫ್12 ಬರ್ಲಿನೆಟ್ಟಾ ಟೂರ್ ಡೆ ಫ್ರಾನ್ಸ್ ವಿಶೇಷ ಆವೃತ್ತಿಯನ್ನು (Ferrari F12 Berlinetta Tour de France Special Edition) ಪರಿಚಯಿಸಿದೆ. ಪ್ರಸ್ತುತ ಕಾರು ಸೀಮಿತ 799 ಯುನಿಟ್ ಗಳಷ್ಟು ಮಾತ್ರ ನಿರ್ಮಾಣವಾಗಲಿದೆ.
ಎಂಜಿನ್ ತಾಂತ್ರಿಕತೆ
- 6262 ಸಿಸಿ ವಿ12 ಎಂಜಿನ್
- 769.32 ಅಶ್ವಶಕ್ತಿ
- 705 ಎನ್ಎಂ ತಿರುಗುಬಲ

- ಗರಿಷ್ಠ ವೇಗ: ಗಂಟೆಗೆ 340 ಕೀ.ಮೀ.
- ಗಂಟೆಗೆ 0-100 ಕೀ.ಮೀ.: 2.9 ಸೆಕೆಂಡು

ಸ್ಟ್ಯಾಂಡರ್ಡ್ ಎಫ್13 ಬರ್ಲಿನೆಟ್ಟಾ ಮಾದರಿಗೆ ಹೋಲಿಸಿದಾಗ ಎಫ್12 ಬರ್ಲಿನೆಟ್ಟಾ ಟೂರ್ ಡೆ ಫ್ರಾನ್ಸ್ ವಿಶೇಷ ಆವೃತ್ತಿ ವಿಶೇಷ ರೂಪವನ್ನು ಪಡೆದುಕೊಂಡಿದೆ. ಅಲ್ಲದೆ ಕಾರಿನ ಒಟ್ಟಾರೆ ಭಾರದಲ್ಲಿ ಗಣನೀಯ ಇಳಿಕೆ ಕಂಡಿದೆ. ಇದು 110 ಕೆ.ಜಿ ಗಳಷ್ಟು ಕಡಿಮೆ ಭಾರವನ್ನು ಹೊಂದಿರಲಿದೆ.

ಒಟ್ಟಿನಲ್ಲಿ ಐಷಾರಾಮಿ ಕಾರು ಪ್ರೇಮಿಗಳಿಗೆ ನೂತನ ಬರ್ಲಿನೆಟ್ಟಾ ಪರಿಪೂರ್ಣ ಚಾಲನಾ ಅನುಭವ ನೀಡಲಿದೆ.


Click it and Unblock the Notifications








