ಪುಂಟೊ ಇವೊಗೆ ಅಬಾರ್ತ್ ಬ್ರಾಂಡಿಂಗ್ ಯಶ ತಂದಿತೇ?

Written By:

ಭಾರತದಲ್ಲಿ ತನ್ನ ಶ್ರೇಣಿಯ ವಾಹನಗಳನ್ನು ಇನ್ನಷ್ಟು ಗಟ್ಟಿ ಪಡಿಸಲು ಇಟಲಿಯ ಮೂಲದ ಫಿಯೆಟ್ ಸಂಸ್ಥೆ ನಿರ್ಧರಿಸಿದೆ. ಈಗಾಗಲೇ ಅವೆಂಚ್ಯುರಾಗಳಂತಹ ನಾವೀನ್ಯ ಮಾದರಿಗಳನ್ನು ಬಿಡುಗಡೆ ಮಾಡಿರುವ ಫಿಯೆಟ್ ಸಂಸ್ಥೆಯು ವರ್ಷಾಂತ್ಯದಲ್ಲಿ ಮಗದೊಂದು ಆಕರ್ಷಕ ವೆರಿಯಂಟ್ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಈಗ ಬಂದಿರುವ ತಾಜಾ ಮಾಹಿತಿಗಳಂತೆ ಪ್ರಸಕ್ತ ಸಾಲಿನ ಅಂತ್ಯದಲ್ಲೇ ಫಿಯೆಟ್ ನ ಬಹುನಿರೀಕ್ಷಿತ ಪುಂಟೊ ಇವೊ ಟಿ-ಜೆಟ್ ವೆರಿಯಂಟ್ ಬಿಡುಗಡೆಯಾಗಲಿದೆ. ಅವೆಂಚ್ಯುರಾ ಮಾದರಿಯಲ್ಲೂ ಟಿ-ಜೆಟ್ಪರಿಚರಿಯಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ.

To Follow DriveSpark On Facebook, Click The Like Button
fiat punto

ಪ್ರಸ್ತುತ ಫಿಯೆಟ್ ಇವೊ ಮಾದರಿಗಳು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಪುಂಟೊ ಇವೊಗಾಗಿ 1.4 ಲೀಟರ್ ಎಂಜಿನ್ ಅನ್ನು ವಿಶೇಷವಾಗಿ ಟ್ಯೂನ್ ಮಾಡಲಾಗುವುದು. ಇದು ಟರ್ಬೊ ಚಾರ್ಜರ್ ಜೊತೆ 135 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆ ಎಲ್ಲ ಚಕ್ರಗಳಿಗೂ ಡಿಸ್ಕ್ ಬ್ರೇಕ್ ಜೋಡಣೆಯಾಗಲಿದೆ.

ಅಬಾರ್ತ್ ಲಾಂಛನದೊಂದಿಗೆ ಮಾರಾಟವನ್ನು ಉತ್ತೇಜಿಸುವ ಇರಾದೆಯನ್ನು ಫಿಯೆಟ್ ಹೊಂದಿದೆ. ಅಬಾರ್ತ್ ಬ್ರಾಂಡಿಂಗ್ ನಿಂದಾಗಿ ಖಂಡಿತವಾಗಿಯೂ ಮಾರಾಟ ಹೆಚ್ಚಲಿದೆ ಎಂಬುದು ನಮ್ಮ ನಂಬಿಕೆಯಾಗಿದೆ. ಅಂದ ಹಾಗೆ ಅಬಾರ್ತ್ ಪುಂಟೊ ಇವೊ ಮಾದರಿಯು ಫೋಕ್ಸ್ ವ್ಯಾಗನ್ ಪೊಲೊ ಜಿಟಿಗಳಂತಹ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

Read more on ಫಿಯೆಟ್ fiat
English summary
Abarth has planned to launch their products in India for a while now. They showcased their Abarth 500 model at 2014 Auto Expo and there was talk of a performance Punto as well.
Story first published: Wednesday, April 15, 2015, 7:32 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark