ಫಿಯೆಟ್ ಎಗೆಯಾ ಜಾಗತಿಕ ಪಾದಾರ್ಪಣೆ
ಇಟಲಿಯ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಫಿಯೆಟ್, ಮಗದೊಂದು ಆಕರ್ಷಕ ಕಾರನ್ನು ಅನಾವರಣಗೊಳಿಸಿದೆ. ಇಸ್ತಾಂಬುಲ್ ನಲ್ಲಿ ನಡೆಯುತ್ತಿರುವ 2015 ಮೋಟಾರು ಶೋದಲ್ಲಿ ಹೊಚ್ಚ ಹೊಸ ಫಿಯೆಟ್ ಎಗೆಯಾ (Aegea) ಭರ್ಜರಿ ಪಾದಾರ್ಪಣೆಗೈದಿದೆ.
ಪ್ರಸ್ತುತ ಜಾಗತಿಕ ಅನಾವರಣ ಕಂಡಿರುವ ನೂತನ ಫಿಯೆಟ್ ಎಗೆಯಾ ಸದ್ಯದಲ್ಲೇ ಅಂತರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪಲಿದೆ. ಆದರೆ ಭಾರತವನ್ನು ಯಾವಾಗ ತಲುಪಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

2015 ನವೆಂಬರ್ ತಿಂಗಳಲ್ಲೇ ಟರ್ಕಿ ಮಾರುಕಟ್ಟೆಯನ್ನು ತಲುಪಿರುವ ಫಿಯೆಟ್ ಎಗೆಯಾ ಅಲ್ಲಿ ಅರ್ಜಿಯಾ ಎಂದು ಗುರುತಿಸಿಕೊಳ್ಳಲಿದೆ. ಅಲ್ಲದೆ ಜಾಗತಿಕವಾಗಿ 40ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಾಟವಾಗಲಿದೆ.

ಲಿನಿಯಾ ಉತ್ತರಾಧಿಕಾರಿಯಾಗಿ ಫಿಯೆಟ್ ಎಗೆಯಾ ಕಾಣಿಸಿಕೊಳ್ಳಲಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲೂ ಮಾರಾಟವಾಗಲಿದೆ.

ಫಿಯೆಟ್ ಎಗೆಯಾ ನೇರ ಹಾಗೂ ದಿಟ್ಟವಾದ ವಿನ್ಯಾಸ ತಂತ್ರಗಾರಿಕೆಯನ್ನು ಪಡೆದುಕೊಂಡಿದೆ. ಅಲ್ಲದೆ ಮೊದಲ ನೋಟದಲ್ಲಿ ಪ್ರೀಮಿಯಂ ನೋಟ ಕಾಯ್ದುಕೊಂಡಿದೆ. ಇನ್ನು ಕ್ರೀಡಾತ್ಮಕ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿದೆ.

ಕಾರಿನ ಒಳಗಡೆ ಕಪ್ಪು ಹಾಗೂ ಬೆಳ್ಳಿ ಬಣ್ಣದ ಮಿಶ್ರಣವನ್ನು ನೋಡಬಹುದಾಗಿದೆ. ಇದು ಕಾರನ್ನು ಹೆಚ್ಚು ಆಕರ್ಷಕವಾಗಿಸಲಿದೆ.

ನಿಸ್ಸಂಶವಾಗಿಯೂ ಹೊಸ ಫಿಯೆಟ್ ಕಾರು ಭಾರತಕ್ಕೆ ಪ್ರವೇಶಿಸಿದ್ದಲ್ಲಿ ಹೆಚ್ಚು ಬೇಡಿಕೆ ಕಂಡುಬರಲಿದೆ. ಅತ್ಯಂತ ಸೊಗಸಾದ ಡ್ಯಾಶ್ ಬೋರ್ಡ್ ಜೊತೆಗೆ ಇಂಟೇಗ್ರೇಟಡ್ ಸ್ಟೀರಿಂಗ್ ವೀಲ್ ಸೇವೆ ನೀಡಲಾಗಿದೆ.

ಹಿಂದುಗಡೆ ಸಿ ಆಕಾರದ ಟೈಲ್ ಲ್ಯಾಂಪ್ ಹೆಚ್ಚು ಆಕರ್ಷಕವೆನಿಸಿದೆ. ಹೆಚ್ಚಿನ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.


Click it and Unblock the Notifications








