2017ರಿಂದ ಭಾರತದಿಂದಲೇ ಜೀಪ್ ತಯಾರಿ

By Nagaraja

ಐಕಾನಿಕ್ ಜೀಪ್ ಭಾರತ ಪ್ರವೇಶಕ್ಕೆ ಮೀನಾಮೇಷ ಎದುರಿಸುತ್ತಿರುವುದು ಒಂದೆಡೆಯಾದರೆ ಮಗದೊಂದು ಉತ್ಸಾಹಜನಕ ಸುದ್ದಿಯೊಂದರಲ್ಲಿ ಈ ಪ್ರಸಿದ್ಧ ಸಂಸ್ಥೆಯು 2017ರಿಂದ ದೇಶದಿಂದಲೇ ತನ್ನ ತಯಾರಿಯನ್ನು ಆರಂಭಿಸಲಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ.

ನಿಮ್ಮ ಮಾಹಿತಿಗಾಗಿ ಪ್ರಖ್ಯಾತ ಜೀಪ್ ಮಾದರಿಯು ಇಟಲಿಯ ಫಿಯೆಟ್ ಕ್ರೈಸ್ಲರ್ ಆಟೋಮೊಬೈಲ್ಸ್ (ಎಫ್‌ಸಿಎ) ಅಧೀನತೆಯಲ್ಲಿದೆ. ಆದರೆ ಜನಪ್ರಿಯ ಮಾದರಿಗಳು ಯಾವಾಗ ಭಾರತ ಪ್ರವೇಶಸಲಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಜೀಪ್

ವರದಿಗಳ ಪ್ರಕಾರ ಫಿಯೆಟ್ ಕ್ರೈಸ್ಲರ್ ಆಟೋಮೊಬೈಲ್ಸ್ ಜೊತೆ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಕೈಜೋಡಿಸಲಿದೆ. ಭಾರತದಲ್ಲಿ ಯಶ ಸಾಧಿಸಬೇಕಾದ್ದಲ್ಲಿ ಸ್ಥಳೀಯ ನಿರ್ಮಾಣ ಪ್ರಕ್ರಿಯೆಯು ಅತ್ಯಂತ ಮಹತ್ವಪೂರ್ಣವೆನಿಸಿದೆ.

ಭಾರತದಲ್ಲಿ ಬರೋಬ್ಬರಿ 280 ದಶಲಕ್ಷ ಅಮೆರಿಕನ್ ಡಾಲರ್ ಹೂಡಿಕೆ ಮಾಡುವ ಇರಾದೆಯನ್ನು ಫಿಯೆಟ್ ಹೊಂದಿದೆ. ಅಲ್ಲದೆ 2018ರ ಬಳಿಕ ಮಾರಾಟಕ್ಕೆ ಉತ್ತೇಜನ ನೀಡುವ ಭರವಸೆಯನ್ನು ಎಫ್‌ಸಿಎ ಮುಖ್ಯ ಕಾರ್ಯನಿರ್ವಾಹಣಧಿಕಾರಿಯಾಗಿರುವ ಸೆರ್ಗಿಯೊ ಮರ್ಸಿಯೊನ್ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ 2015ರಲ್ಲೇ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಜೀಪ್ ಮಾದರಿಗಳು ಭಾರತ ಪ್ರವೇಶಿಸುವ ಬಗ್ಗೆ ವರದಿಯಾಗಿತ್ತು. ಜೀಪ್ ಜನಪ್ರಿಯ ಮಾದರಿಗಳಾದ ಕೆರೊಕೆ ಹಾಗೂ ವ್ರ್ಯಾಂಗ್ಲರ್ ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿತ್ತು. ಆದರೆ ಈಗ ಈ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

Article Published On: Saturday, July 4, 2015, 10:15 [IST]
English summary
Fiat Chrysler Automobiles(FCA) has several brands under its guidance. For a couple of years now they have been planning to bring its Jeep brand to Indian shores, however, it has not worked out.
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+