ಏರ್ ಬ್ಯಾಗ್ ಸಮಸ್ಯೆ; 1.5 ದಶಲಕ್ಷ ಫಿಯೆಟ್ ಟ್ರಕ್ ವಾಪಾಸ್
ಏರ್ ಬ್ಯಾಗ್ ಸಮಸ್ಯೆಯ ಹಿನ್ನೆಲೆಯಲ್ಲಿ ಇಟಲಿಯ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಫಿಯೆಟ್ ಕ್ರೈಸ್ಲರ್ 1.5 ದಶಲಕ್ಷಗಳಷ್ಟು ಟ್ರಕ್ ಗಳಿಗೆ ಹಿಂದಕ್ಕೆ ಕರೆ ನೀಡಿದೆ.
ಸೈಡ್ ಇಂಪಾಕ್ಟ್ ಮತ್ತು ಚಾಲಕ ಬದಿಯ ಏರ್ ಬ್ಯಾಗ್ ಗಳಲ್ಲಿ ಸಮಸ್ಯೆ ಕಂಡುಬಂದಿದೆ ಎಂಬುದನ್ನು ಫಿಯೆಟ್ ವಿವರಿಸಿದೆ. ಈ ಪೈಕಿ ಉತ್ತರ ಅಮೆರಿಕದಲ್ಲಿ ಪ್ರಮುಖವಾಗಿಯೂ 1.35 ಮಿಲಿಯನ್ ಗಳಷ್ಟು ರಾಮ್ 1500, 2500, 3500 ಪಿಕಪ್ ಟ್ರಕ್ ಗಳನ್ನು ಮತ್ತು 3500, 4500, 5500 ಚಾಸೀ ಕ್ಯಾಬ್ ಗಳನ್ನು ಹಿಂಪಡೆಯಲಾಗಿದೆ.

ಇವೆಲ್ಲವೂ 2012ರಿಂದ 2014ನೇ ಇಸವಿಯ ಅವಧಿಯಲ್ಲಿ ನಿರ್ಮಾಣವಾದ ವೆರಿಯಂಟ್ ಗಳಾಗಿವೆ ಎಂಬುದು ತಿಳಿದು ಬಂದಿದೆ. ಪ್ರಸ್ತುತ ನಡೆದಿರುವ ಅಪಘಾತದಲ್ಲಿ ಇಬ್ಬರು ಗಾಯಗೊಂಡಿರುವುದಾಗಿ ಸಂಸ್ಥೆ ತಿಳಿಸಿದೆ.
ಪ್ರತಿಯೊಂದು ವಾಹನವನ್ನು ಪರಿಶೋಧಿಸಲಿರುವ ಫಿಯೆಟ್ ಡೀಲರುಗಳು ಸಮಸ್ಯೆ ಬಗೆ ಹರಿಸಿಕೊಡಲಿದೆ. ಎರಡನೇ ರಿಕಾಲ್ ನಲ್ಲಿ 2014 ರಿಂದ 2015ರ ವರೆಗೆ ನಿರ್ಮಾಣವಾದ 188000ರಷ್ಟು ರಾಮ್ ಕ್ವಾಡ್ ಕ್ಯಾಪ್ ಪಿಕಪ್ ಗಳನ್ನು ವಾಪಾಸ್ ಪಡೆಯಲಾಗಿದೆ.


Click it and Unblock the Notifications








