ಪುಂಟೊ ಇವೊ ಸೀಮಿತ ಆವೃತ್ತಿ ಬಿಡುಗಡೆ ಮಾಡಲಿರುವ ಫಿಯೆಟ್
ಈಗಷ್ಟೇ ಭಾರತ ಮಾರುಕಟ್ಟೆಗೆ ಶಕ್ತಿಶಾಲಿ ಅಬಾರ್ತ್ ಪುಂಟೊ ಮತ್ತು ಅಬಾರ್ತ್ ಅವೆಂಚ್ಯುರಾ ಮಾದರಿಗಳನ್ನು ಬಿಡುಗಡೆ ಮಾಡಿರುವ ಇಟಲಿಯ ಮೂಲದ ಪುರಾತನ ಹಾಗೂ ಐಕಾನಿಕ್ ಕಾರು ಸಂಸ್ಥೆ ಫಿಯೆಟ್ ಮಗದೊಂದು ಆಕರ್ಷಕ ಮಾದರಿಯನ್ನು ದೇಶದಲ್ಲಿ ಬಿಡುಗಡೆ ಮಾಡಲಿದೆ.
Also Read: ದೇಶದ ರಸ್ತೆಗಿಳಿದ ಶಕ್ತಿಶಾಲಿ ಅಬಾರ್ತ್ ಪುಂಟೊ, ಅವೆಂಚ್ಯುರಾ ಮುಂದಕ್ಕೆ ಓದಿ

ಚಿತ್ರ ಕೃಪೆ
ಬಲ್ಲ ಮೂಲಗಳ ಪ್ರಕಾರ ಫಿಯೆಟ್ ಪುಂಟೊ ಇವೊ ಸೀಮಿತ ಆವೃತ್ತಿ ಅತಿ ಶೀಘ್ರದಲ್ಲೇ ಬಿಡುಗಡೆ ಭಾಗ್ಯ ಕಾಣಲಿದ್ದು, ಪ್ರಸಕ್ತ ದೀಪಾವಳಿ ಹಬ್ಬದ ವೇಳೆಯಲ್ಲಿ ಮಾರಾಟಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ.
ನೂತನ ಪುಂಟೊ ಸೀಮಿತ ಆವೃತ್ತಿಯು ಪುಂಟೊ ಇವೊ ಸ್ಪೋರ್ಟಿವೊ ಎಂದು ಹೆಸರಿಸಿಕೊಳ್ಳುವ ಸಾಧ್ಯತೆಯಿದೆ. ಇದು ಫಿಯೆಟ್ ಪುಂಟೊ ಇವೊ ಆಕ್ಟಿವ್ ತಳಹದಿಯಲ್ಲಿ ನಿರ್ಮಾಣಗೊಂಡಿದೆ. ಅಲ್ಲದೆ ಕ್ರೀಡಾತ್ಮಕ ವೈಶಿಷ್ಟ್ಯಗಳನ್ನು ವಾಹನ ಪ್ರೇಮಿಗಳು ನಿರೀಕ್ಷೆ ಮಾಡಬಹುದಾಗಿದೆ.
15 ಇಂಚುಗಳ ಅಲಾಯ್ ವೀಲ್, ಅಗಲ ಬಾಡಿ ಕಿಟ್, ರಿಯರ್ ಸ್ಪಾಯ್ಲರ್, ಸ್ಪೋರ್ಟಿ ಡಿಕಾಲ್ಸ್, ಕಾಂಟ್ರಾಸ್ಟ್ ರೂಫ್ ಕಲರ್, ಕ್ರೋಮ್ ಸ್ಪರ್ಶತೆ, ಹೊರಗಿನ ರಿಯರ್ ವ್ಯೂ ಮಿರರ್ ಮುಂತಾದ ವೈಶಿಷ್ಟ್ಯಗಳು ಲಭ್ಯವಾಗಲಿದೆ. ಇನ್ನು ಕಾರಿನೊಳಗೆ ಹೊಸ ಕಾರು ಕವರ್, ಡೋರ್ ಸಿಲ್ ಪ್ಲೇಟ್, ಹೊಸ ಫ್ಲೋರ್ ಮ್ಯಾಟ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಆರು ಇಂಚುಗಳ 6.5 ಇಂಚುಗಳ ಟಚ್ ಸ್ಕ್ರೀನ್ ಮನರಂಜನಾ ವ್ಯವಸ್ಥೆ ಜೊತೆ ನೇವಿಗೇಷನ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಸೌಲಭ್ಯಗಳು ಲಭ್ಯವಾಗಲಿದೆ.
ಪ್ರಸ್ತುತ ಫಿಯೆಟ್ ಪುಂಟೊ ಇವೊ ಆಕ್ಟಿವ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಪೆಟ್ರೋಲ್ 1.2 ಲೀಟರ್ ಎಂಜಿನ್ 4.99 ಲಕ್ಷ ರು. ಹಾಗೂ 1.3 ಲೀಟರ್ ಡೀಸೆಲ್ ಮಲ್ಟಿಜೆಟ್ ಎಂಜಿನ್ ಮಾದರಿಯು 5.95 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ಈಗ ಬರಲಿರುವ ವಿಶೇಷ ಆವೃತ್ತಿಯು ಮತ್ತಷ್ಟು 20ರಿಂದ 30,000 ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.


Click it and Unblock the Notifications








