ಫೋರ್ಡ್ ದೀಪಾವಳಿ ಆಫರ್; ಹೊಸ ಫಿಗೊ, ಆಸ್ಪೈರ್ ಕಾರಿಗೂ ಡಿಸ್ಕೌಂಟ್

By Nagaraja

ದೀಪಾವಳಿ ಹಬ್ಬದ ಆವೃತ್ತಿಯ ವೇಳೆಯಲ್ಲಿ ಗರಿಷ್ಠ ಮಾರಾಟ ಗುರಿಯಾಗಿರಿಸಿಕೊಂಡಿರುವ ಅಮೆರಿಕ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆ ಫೋರ್ಡ್, ಆಕರ್ಷಕ ಆಫರ್ ಗಳನ್ನು ಒದಗಿಸುತ್ತಿದೆ. ಇಲ್ಲಿ ಅಚ್ಚರಿಯ ವಿಷಯಯೆಂಬಂತೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹೊಸ ಫೋರ್ಡ್ ಫಿಗೊ ಹಾಗೂ ಆಸ್ಪೈರ್ ಕಾರುಗಳಿಗೂ ಆಫರ್ ಗಳನ್ನು ನೀಡಲಾಗುತ್ತಿದೆ.

Also Read: ಸ್ವಿಫ್ಟ್ ಡಿಜೈರ್ ಹಿಮ್ಮೆಟಿಸಿತೇ ಫಿಗೊ ಆಸ್ಪೈರ್? ಇಲ್ಲಿದೆ 10 ಕಾರಣಗಳು

ಫಿಗೊ ಹ್ಯಾಚ್ ಬ್ಯಾಕ್, ಆಸ್ಪೈರ್ ಸೆಡಾನ್ ಕಾರಿನ ಜೊತೆಗೆ ಇಕೊಸ್ಪೋರ್ಟ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಗಳಿಗೂ ಆಫರ್ ಅನ್ವಯವಾಗಲಿದೆ. ಈ ಬಗ್ಗೆ ಸಮಗ್ರ ಮಾಹಿತಿಗಾಗಿ ನಮ್ಮ ಚಿತ್ರಪುಟದತ್ತ ಕಣ್ಣಾಯಿಸಿರಿ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

6.80 ಲಕ್ಷ ರು.ಗಳ ದೆಹಲಿ ಎಕ್ಸ್ ಶೋ ರೂಂಗಳ ಬೆಲೆ ಹೊಂದಿರುವ ಫೋರ್ಡ್ ಕಾರಿನ ಮೇಲೆ 7.99 ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತಿದೆ. ಇದಲ್ಲದೆ 25,000 ರು.ಗಳ ಎಕ್ಸ್ ಚೇಂಜ್ ಬೋನಸ್, 8,000 ರು.ಗಳ ನಗದು ರಿಯಾಯಿತಿ ಹಾಗೂ ಲಾಯಲ್ಟಿ ಬೋನಸ್ ಗಳು ಲಭ್ಯವಾಗಲಿದೆ.

ಫೋರ್ಡ್ ಫಿಗೊ ಆಸ್ಪೈರ್

ಫೋರ್ಡ್ ಫಿಗೊ ಆಸ್ಪೈರ್

ಐಚ್ಛಿಕ ಪ್ರಯೋಜನಗಳೊಂದಿಗೆ ಆಸ್ಪೈರ್ ನೀಡಲಾಗುತ್ತಿದೆ. ಇದರಲ್ಲಿ ಗ್ರಾಹಕರು ಉಚಿತ ವಿಮೆ, ಮೂರನೇ ವರ್ಷದ ವರ್ಧಿತ ವಾರಂಟಿ, 25,000 ರು.ಗಳ ಎಕ್ಸ್ ಚೇಂಜ್ ಬೋನಸ್ ಅಥವಾ 7.99 ಬಡ್ಡಿದರಗಳ ಹಣಕಾಸು ನೆರವನ್ನು ಆಯ್ಕೆ ಮಾಡಬಹುದಾಗಿದೆ. ಇದರ ಬೇಸ್ ವೆರಿಯಂಟ್ 4.89 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ದೆಹಲಿ) ದುಬಾರಿಯೆನಿಸುತ್ತದೆ.

ಫೋರ್ಡ್ ಫಿಗೊ ಹ್ಯಾಚ್ ಬ್ಯಾಕ್

ಫೋರ್ಡ್ ಫಿಗೊ ಹ್ಯಾಚ್ ಬ್ಯಾಕ್

ಈಗಷ್ಟೇ ಬಿಡುಗಡೆಯಾಗಿರುವ ಫೋರ್ಡ್ ಫಿಗೊ ಹ್ಯಾಚ್ ಬ್ಯಾಕ್ ಕಾರಿಗೆ ಯಾವುದೇ ಹೆಚ್ಚುವರಿ ಆಫರ್ ಗಳು ಲಭ್ಯವಾಗುವುದಿಲ್ಲ. ಆದರೆ ಬೇಸ್ ವೆರಿಯಂಟ್ ವಿಶೇಷ 4.29 ಲಕ್ಷ ರು.ಗಳಲ್ಲಿ (ಎಕ್ಸ್ ಶೋ ರೂಂ ದೆಹಲಿ) ನೀಡಲಾಗುತ್ತಿರುವುದು ಗಮನಾರ್ಹವೆನಿಸಿದೆ.

ಫೋರ್ಡ್ ದೀಪಾವಳಿ ಆಫರ್; ಹೊಸ ಫಿಗೊ, ಆಸ್ಪೈರ್ ಕಾರಿಗೂ ಡಿಸ್ಕೌಂಟ್

ಆಸಕ್ತ ಗ್ರಾಹಕರು ದೇಶದ್ಯಾಂತ ಸ್ಥಿತಗೊಂಡಿರುವ ಯಾವುದೇ ಫೋರ್ಡ್ ಡೀಲರ್ ಶಿಪ್ ಬಳಿ ತೆರಳಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಪ್ರಸ್ತುತ ಆಫರ್ ನವೆಂಬರ್ 01 ರಿಂದ 30ರ ವರೆಗೆ ಮಾತ್ರ ಚಾಲ್ತಿಯಲ್ಲಿರಲಿದೆ.

ಇಲ್ಲಿದೆ ಓದಿ

ಇಲ್ಲಿದೆ ಓದಿ

01. ನಿಮ್ಮ ಅಭಿಲಾಷೆಗೆ ತಕ್ಕ ಕಾರು: ಫೋರ್ಡ್ ಫಿಗೊ ಆಸ್ಪೈರ್ ಸಮಗ್ರ ವಿಮರ್ಶೆ

02. ಫೋರ್ಡ್ ಫಿಗೊ: ಮೊದಲ ಚಾಲನಾ ವಿಮರ್ಶೆ; ಸ್ವಿಫ್ಟ್ ಗಡಗಡ!

Article Published On: Wednesday, November 11, 2015, 16:32 [IST]
English summary
Ford Diwali Offer & Discount On EcoSport, Figo, & Aspire
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+