ಮಗದೊಂದು ಸಮಸ್ಯೆ; ಫೋರ್ಡ್ ಇಕೊಸ್ಪೋರ್ಟ್ ಹಿಂದಕ್ಕೆ ಕರೆ
ರಿಯರ್ ಟ್ವಿಸ್ಟ್ ಬೀಮ್ ಬೋಲ್ಟ್ ನಲ್ಲಿ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಮೆರಿಕ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್, ತನ್ನ ಜನಪ್ರಿಯ ಇಕೊಸ್ಪೋರ್ಟ್ ಕಾರಿನ 16,444 ಯುನಿಟ್ ಗಳಿಗೆ ಹಿಂದಕ್ಕೆ ಕರೆ ನೀಡಿದೆ.
ಪೋರ್ಡ್ ಚೆನ್ನೈನ ಘಟಕದಲ್ಲಿ 2013 ನವೆಂಬರ್ ತಿಂಗಳಿಂದ 2014 ಎಪ್ರಿಲ್ ತಿಂಗಳ ವರೆಗೆ ನಿರ್ಮಾಣವಾಗಿರುವ ಇಕೊಸ್ಪೋರ್ಟ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಗಳಲ್ಲಿ ದೋಷ ಕಂಡುಬರುವ ಸಾಧ್ಯತೆಯಿದೆ ಎಂದು ಫೋರ್ಡ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದರೊಂದಿಗೆ ಮೂರನೇ ಬಾರಿಗೆ ಇಕೊಸ್ಪೋರ್ಟ್ ಕಾರಿಗೆ ವಾಪಾಸ್ ಕರೆ ನೀಡಿರುವ ಪ್ರಸಂಗ ಎದುರಾಗಿದೆ. ಪ್ರಸ್ತುತ ಮುಂಜಾಗ್ರತಾ ಕ್ರಮವಾಗಿ ಹಿಂದಕ್ಕೆ ಕರೆ ನೀಡಲಾಗಿದ್ದು, ಯಾವುದೇ ರೀತಿಯ ಅಪಘಾತ ಪ್ರಸಂಗಗಳು ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿದೆ.
ರಿಯರ್ ಟ್ವಿಸ್ಟ್ ಬೀಮ್ (ಆರ್‌ಟಿಬಿ) ಬೋಲ್ಟ್ ನಲ್ಲಿ ದೋಷ ಕಂಡುಬಂದ್ದಲ್ಲಿ ಸಂಪೂರ್ಣ ಉಚಿತವಾಗಿ ಸಮಸ್ಯೆ ಬಗೆ ಹರಿಸಿಕೊಡಲಾಗುವುದು. ಇದಕ್ಕಾಗಿ ಗ್ರಾಹಕರು ಫೋರ್ಡ್ ಸ್ಥಳೀಯ ಡೀಲರ್ ಗಳನ್ನು ಸಂಪರ್ಕಿಸಬಹುದಾಗಿದೆ.


Click it and Unblock the Notifications