4 ವೆರಿಯಂಟ್ ಗಳಲ್ಲಿ ಬಿಡುಗಡೆಯಾಗಲಿರುವ ಫೋರ್ಡ್ ಫಿಗೊ ಆಸ್ಪೈರ್
ಇನ್ನಷ್ಟೇ ಬಿಡುಗಡೆಯಾಗಲಿರುವ ಫೋರ್ಡ್ ಫಿಗೊ ಆಸ್ಪೈರ್ ನಾಲ್ಕು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ ಎಂಬುದು ತಿಳಿದು ಬಂದಿದೆ. ರಾಜಸ್ತಾನದ ಉದೈಪುರ್ ನಲ್ಲಿ ನಮ್ಮ ಪ್ರತಿನಿಧಿಗಳು ಭಾಗವಹಿಸಿರುವ ಎಕ್ಸ್ ಕ್ಲೂಸಿವ್ ಮೀಡಿಯಾ ಡ್ರೈವ್ ನಲ್ಲಿ ಇದು ಬಯಲಾಗಿದೆ. (ಫೋರ್ಡ್ ಫಿಗೊ ಆಸ್ಪೈರ್ ಮೊದಲ ಚಾಲನಾ ವಿಮರ್ಶೆಯು ಸದ್ಯದಲ್ಲೇ ಪ್ರಕಟಗೊಳ್ಳುವುದು.)
ಫೋರ್ಡ್ ಫಿಗೊ ಆಸ್ಪೈರ್ ನಾಲ್ಕು ವೆರಿಯಂಟ್ ಗಳು ಇಂತಿದೆ.
- ಆಂಬಿಯಂಟ್ (Ambiente)
- ಟ್ರೆಂಡ್ (Trend)
- ಟೈಟಾನಿಯಂ (Titanium)
- ಟೈಟಾನಿಯಂ ಪ್ಲಸ್ (Titanium+)
ಅಷ್ಟೇ ಅಲ್ಲದೆ ಮೂರು ಎಂಜಿನ್ ಆಯ್ಕೆಗಳಲ್ಲಿ ಹೊಸ ಫೋರ್ಡ್ ಆಸ್ಪೈರ್ ಲಭ್ಯವಾಗಲಿದೆ. ಇವೆಲ್ಲದಕ್ಕೂ ಮಿಗಿಲಾಗಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಸೌಲಭ್ಯವನ್ನು ಒದಗಿಸುತ್ತಿರುವುದು ಕಾರಿನ ಬಗ್ಗೆ ಇದ್ದ ಆಸಕ್ತಿಯನ್ನು ಇಮ್ಮಡಿಗೊಳಿಸುವಂತೆ ಮಾಡಿದೆ.

ಆಂಬಿಯಂಟ್
ಕಾರಿನ ಭದ್ರತೆಯ ವಿಚಾರದಲ್ಲಿ ಯಾವುದೇ ರಾಜಿಗೂ ತಯಾರಾಗದ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು, ಬೇಸಿಕ್ ವೆರಿಯಂಟ್ ನಲ್ಲೂ ಡ್ಯುಯಲ್ ಏರ್ ಬ್ಯಾಗ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲು ನಿರ್ಧರಿಸಿದೆ. ಅಲ್ಲದೆ 14 ಇಂಚಿನ ಸ್ಟೀಲ್ ವೀಲ್, ಫ್ಯಾಬ್ರಿಕ್ ಹೋದಿಗೆ, ಮುಂಭಾಗದಲ್ಲಿ ಪವರ್ ವಿಂಡೋ, ಹೊಂದಾಣಿಸಬಹುದಾದ ಸ್ಟೀರಿಂಗ್, ಎಂಜಿನ್ ಇಂಮೊಬಿಲೈಜರ್, ರಿಮೋಟ್ ಲಾಕಿಂಗ್, ಎಸಿ, ರಿಯರ್ ಫಾಗ್ ಲ್ಯಾಂಪ್ ಮತ್ತು ಗೈಡ್ ಮಿ ಹೋಮ್ ಲೈಟ್ಸ್ ಸೇವೆಯಿರಲಿದೆ.

ಟ್ರೆಂಡ್
ಆಂಬಿಯಂಟ್ ವೆರಿಯಂಟ್ ನಲ್ಲಿರುವ ಎಲ್ಲ ಸೌಲಭ್ಯಗಳ ಜೊತೆಗೆ ಹೆಚ್ಚುವರಿಯಾಗಿ ಹಿಂದುಗಡೆ ಪವರ್ ವಿಂಡೋ, ಮ್ಯೂಸಿಕ್ ಸಿಸ್ಟಂ ಜೊತೆ ಯುಎಸ್ ಬಿ, ಆಕ್ಸ್ ಮತ್ತು ಬ್ಲೂಟೂತ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಮೈ ಫೋರ್ಡ್ ಡಾಕ್, ಫ್ರಂಟ್ ಫಾಗ್ ಲ್ಯಾಂಪ್ಸ್, ಬ್ಲ್ಯಾಕ್ ಇಂಟಿರಿಯರ್ ಇಸರ್ಟ್, ಸೆಂಟರ್ ಆರ್ಮ್ ರೆಸ್ಟ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಮಿರರ್, ಟರ್ನ್ ಸಿಗ್ನಲ್ ಮತ್ತು ಟ್ಯಾಕೋಮೀಟರ್ ಸೇವೆಯಿರಲಿದೆ.

ಟೈಟಾನಿಯಂ
ಅಂತೆಯೇ ಟೈಟಾನಿಯಂ ವೆರಿಯಂಟ್ ನಲ್ಲಿ ಹೆಚ್ಚುವರಿಯಾಗಿ ರಿಯರ್ ಡಿಫಾಗರ್, ಕ್ಲೈಮೇಟ್ ಕಂಟ್ರೋಲ್, ಎಬಿಎಸ್ ಜೊತೆ ಇಬಿಡಿ, ಇಎಸ್ ಪಿ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟ್ಯಾರ್ಟ್ ಅಸಿಸ್ಟ್, ಸೀಟ್ ಬೆಲ್ಟ್ ರಿಮೈಂಡರ್, ಸೀಟ್ ಬೆಲ್ಟ್ ಎತ್ತರ ಹೊಂದಾಣಿಕೆ, ಚಾಲಕ ಬದಿಯ ಸೀಟು ಹೊಂದಾಣಿಕೆ ಹಾಗೂ 14 ಇಂಚಿನ ಅಲಾಯ್ ವೀಲ್ ಸೇವೆ ಲಭ್ಯವಿರಲಿದೆ.

ಟೈಟಾನಿಯಂ ಪ್ಲಸ್
ಟಾಪ್ ಎಂಡ್ ಟೈಟಾನಿಯಂ ಪ್ಲಸ್ ವೆರಿಯಂಟ್ ನಲ್ಲಿ ಲೆಥರ್ ಸೀಟು, 4.2 ಇಂಚಿನ ಮಾಹಿತಿ ಮನರಂಜಾನ ಸಿಸ್ಟಂ ಜೊತೆ ಸಿಡಿ/ಎಂಪಿ3 ಪ್ಲೇಯರ್, ಸಿಂಕ್ (SYNC) ಆಪ್ ಲಿಂಕ್, ಫೋರ್ಡ್ ಮೈಕೀ, ಎಮರ್ಜನ್ಸಿ ಅಸಿಸ್ಟ್, ಬದಿ ಹಾಗೂ ಕರ್ಟೈನ್ ಏರ್ ಬ್ಯಾಗ್ ಸೌಲಭ್ಯಗಳಿರಲಿದೆ.

ಪ್ರತಿಸ್ಪರ್ಧಿ
ಸಂಪೂರ್ಣ ಪೂರ್ಣ ತಯಾರಿಯೊಂದಿಗೆ ಮಾರುಕಟ್ಟೆಗೆ ಇಳಿಯಲಿರುವ ನೂತನ ಫೋರ್ಡ್ ಆಸ್ಪೈರ್, ದೇಶದಲ್ಲೇ ಅತಿ ಹೆಚ್ಚು ಮಾರಾಟವಾಗುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಹೋಂಡಾ ಅಮೇಜ್, ಹ್ಯುಂಡೈ ಎಕ್ಸ್ ಸೆಂಟ್, ಷೆವರ್ಲೆ ಸೈಲ್ ಮತ್ತು ಟಾಟಾ ಜೆಸ್ಟ್ ಸವಾಲನ್ನು ಎದುರಿಸಲಿದೆ.


Click it and Unblock the Notifications