ಫೋರ್ಡ್ ಕಾರುಗಳಿಗೆ ಬೇಸಿಗೆ ಕಾಲದ ಸರ್ವಿಸ್ ಶಿಬಿರ

Written By:

ಅಮೆರಿಕ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್ ತನ್ನೆಲ್ಲ ಶ್ರೇಣಿಯ ವಾಹನಗಳಿಗೆ ಬೇಸಿಗೆ ಕಾಲದ ಸರ್ವಿಸ್ ಸೇವೆಯನ್ನು ಆರಂಭಿಸಿದೆ. ಫೋರ್ಡ್ ಸಮ್ಮರ್ ಸರ್ವಿಸ್ ಕ್ಯಾಂಪ್ 2015 ಮಾರ್ಚ್ 23ರಂದೇ ಆರಂಭವಾಗಿದ್ದು, 29ರ ವರೆಗೆ ನಡೆಯಲಿದೆ.

ಪ್ರಸ್ತುತ ದೇಶದಲ್ಲಿ ಫೋರ್ಡ್ ಸಂಸ್ಥೆಯು ಫಿಗೊ, ಕ್ಲಾಸಿಕ್, ಫಿಯೆಸ್ಟಾ, ಇಕೊಸ್ಪೋರ್ಟ್ ಹಾಗೂ ಎಂಡೀವರ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಗ್ರಾಹಕರು ಫೋರ್ಡ್ ಅಧಿಕೃತ ಸರ್ವಿಸ್ ಸೆಂಟರ್ ಗಳಿಗೆ ತೆರಳಿ ಸೇವೆ ಗಿಟ್ಟಿಸಿಕೊಳ್ಳಬಹುದಾಗಿದೆ.

ford

ಎಕ್ಸ್ ಕ್ಲೂಸಿವ್ ಆಫರ್ ಗಳು

ಉಚಿತ ವಾಹನ ಚೆಕಪ್ ಜೊತೆ ರಿಪೋರ್ಟ್ ಕಾರ್ಡ್,

ಉಚಿತ ಕಾರು ಬಾಡಿ ವಾಶ್,

ಬ್ಯಾಟರಿ ಮೇಲೆ ಆಫರ್,

ಬ್ರೇಕ್ ಫ್ಲೂಯಿಡ್, ಕೂಲಂಟ್, ಎಸಿ ಗ್ಯಾಸ್, ಕಾಯಿಲ್ ಮೇಲೆ ಶೇ.10ರಷ್ಟು ಡಿಸ್ಕೌಂಟ್,

ನಾಲ್ಕು ಚಕ್ರಗಳ ಬದಲಿ ವೇಳೆ 999 ರು.ಗಳ ಉಡುಗೊರೆ,

ಎಲ್ಲ ನಾಲ್ಕು ಚಕ್ರಗಳ ಬದಲಾವಣೆ ವೇಳೆ ಉಚಿತ ಜೋಡಣೆ

ವಿ.ಸೂ: ಪ್ರಸ್ತುತ ಫೋರ್ಡ್ ಸರ್ವಿಸ್ ಕ್ಯಾಂಪ್ ಉತ್ತರ ಭಾರತದಲ್ಲಿ ಆಯೋಜನೆಯಾಗುತ್ತಿದೆ.

English summary
American automobile manufacturer, Ford is organising a ‘Summer Service Camp' for its vehicles in India. The service camp is scheduled for 23rd to 29th of March, 2015.
Story first published: Wednesday, March 25, 2015, 13:46 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark