ಫೆರಾರಿ ಭವಿಷ್ಯದ ಎಫ್1 ಕಾರು ಹೇಗಿರುತ್ತೇ ಗೊತ್ತೇ?
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಫಾರ್ಮುಲಾ ಒನ್ ಎಫ್1 ರೇಸ್‌ನಲ್ಲಿ ಇಟಲಿಯ ಆಟೋಮೊಬೈಲ್ ದೈತ್ಯ ಸಂಸ್ಥೆಯಾಗಿರುವ ಫೆರಾರಿ ತನ್ನದೇ ಆದ ಅಧಿಪತ್ಯವನ್ನು ಸ್ಥಾಪಿಸಿದೆ.
ಈಗ ಇಟಲಿಯ ಈ ಐಕಾನಿಕ್ ಸೂಪರ್ ಕಾರು ಸಂಸ್ಥೆಯು ಭವಿಷ್ಯದ ಎಫ್1 ಕಾರಿನೊಂದಿಗೆ ಮುಂದೆ ಬಂದಿದೆ. ಆಕ್ರಮಣಕಾರಿ ವಿನ್ಯಾಸವನ್ನು ಹೊಂದಿರುವ ಫೆರಾರಿ ಎಫ್1 ಕಾನ್ಸೆಪ್ಟ್ ಕಾರು ಎಲ್ಲ ಹಂತದಲ್ಲೂ ವಿಭಿನ್ನತೆಯನ್ನು ಕಾಯ್ದುಕೊಂಡಿದೆ.

ಹೊಸ ಫೆರಾರಿ ಎಫ್1 ಕಾರು ತಂತ್ರಜ್ಞಾನದಲ್ಲಿ ಮಾತ್ರವಲ್ಲದೆ ಆಕ್ರಮಣಕಾರಿ ನೋಟವನ್ನು ಕಾಪಾಡಿಕೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ ಫೆರಾರಿ ಇಂತಹದೊಂದು ಯೋಜನೆಯನ್ನು ನನಸಾಗಿಸುವ ಇರಾದೆಯನ್ನು ಹೊಂದಿದೆ.

ಕನ್‌ಸ್ಟ್ರಕ್ಚರ್ಸ್ ಚಾಂಪಿಯನ್‌ಶಿಪ್‌ನಲ್ಲಿ 1993ರ ಬಳಿಕ ಮೊದಲ ಬಳಿಕ ರೇಸ್ ಸೋತಿರುವ ಫೆರಾರಿ ಕಳೆದ ವರ್ಷ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದು ಸಂಸ್ಥೆಗೆ ಭಾರಿ ಮುಜುಗರವನ್ನುಂಟು ಮಾಡಿತ್ತು.


Click it and Unblock the Notifications








