5 ವರ್ಷದೊಳಗೆ ಗೂಗಲ್ ಚಾಲಕರಹಿತ ಕಾರು ನನಸು
ನಾವು ಈಗಾಗಲೇ ಗೂಗಲ್ ಸ್ವಯಂ ಚಾಲಿತ ಕಾರುಗಳ ಬಗ್ಗೆ ವರದಿ ಮಾಡಿರುತ್ತೇವೆ. ಈಗ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ ಮುಂಬರುವ ಎರಡರಿಂದ ಐದು ವರ್ಷದೊಳಗೆ ಗೂಗಲ್ ಚಾಲಕರಹಿತ ಕಾರು ನನಸಾಗಲಿದೆ.
ಪ್ರಸ್ತುತ ಗೂಗಲ್ ಘಟಕದಲ್ಲಿ ನಿರಂತರ ಅಧ್ಯಯನದಲ್ಲಿ ತೊಡಗಿರುವ ಡ್ರೈವರ್‌ಲೆಸ್ ಕಾರಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ರಿಸ್ ಉರ್ಮ್‌ಸನ್, ಗೂಗಲ್ ಚಾಲಕರಹಿತ ಕಾರು ಇತರ ಕಾರು ಹಾಗೂ ಪಾದಚಾರಿಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಮುಖ್ಯವೆನಿಸುತ್ತದೆ ಎಂದಿದ್ದಾರೆ.

ಅಮೆರಿಕ ತಲಹದಿಯ ಸಂಸ್ಥೆಯು ಸೆನ್ಸಾರ್ ಅಭಿವೃದ್ಧಿಯಲ್ಲಿ ತೊಡಗಿದ್ದು, ರಸ್ತೆ ಚಿಹ್ನೆಗಳನ್ನು ಗ್ರಹಿಸಲಿದೆ. ಸ್ಟೀರಿಂಗ್ ವೀಲ್ ಹಾಗೂ ಪೆಡಲ್ ಇಲ್ಲದ ಕಾರುಗಳು ಕ್ಯಾಲಿಫೋರ್ನಿಯಾದ ಘಟಕದಲ್ಲಿ ಪರೀಕ್ಷೆಯಾಗುತ್ತಿದೆ.
ಒಟ್ಟಿನಲ್ಲಿ ಗೂಗಲ್ ಕಾರು ಆಟೋ ಜಗತ್ತಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣವಾಗಲಿದೆ. ಒಂದೇ ಒಂದು ಅಪಘಾತ ಪ್ರಕರಣಗಳಿಲ್ಲದೆ ಗೂಗಲ್ ಡ್ರೈವರ್ ಲೆಸ್ ಕಾರು ಈಗಾಗಲೇ ಏಳು ಲಕ್ಷ ಮೈಲ್ ದೂರವನ್ನು ದಾಟಿರುವುದು ಇನ್ನಷ್ಟು ನಿರೀಕ್ಷೆಗೆ ಕಾರಣವಾಗಿದೆ.


Click it and Unblock the Notifications








