ಹೋಂಡಾ ಅಮೇಜ್, ಮೊಬಿಲಿಯೊ ಸಂಭ್ರಮದ ಆವೃತ್ತಿ ಬಿಡುಗಡೆ
ಭಾರತ ವಾಹನ ಮಾರುಕಟ್ಟೆಯಲ್ಲಿ ಅತಿ ವೇಗವಾಗಿ ಬೆಳೆದು ಬರುತ್ತಿರುವ ಜಪಾನ್ ಮೂಲದ ಹೋಂಡಾ ಸಂಸ್ಥೆಯು ತನ್ನ ಜನಪ್ರಿಯ ಅಮೇಜ್ ಹಾಗೂ ಮೊಬಿಲಿಯೊ ಮಾದರಿಗಳ ಸಂಭ್ರಮದ ಆವೃತ್ತಿಗಳನ್ನು (Celebration Edition) ಬಿಡುಗಡೆ ಮಾಡಿದೆ.
ಮುಂಬರುವ ಹಬ್ಬದ ಆವೃತ್ತಿಗೂ ಮುಂಚಿತವಾಗಿ ಕಾಂಪಾಕ್ಟ್ ಸೆಡಾನ್ ಅಮೇಜ್ ಹಾಗೂ ಏಳು ಸೀಟುಗಳ ಮೊಬಿಲಿಯೊ ಎಂಪಿವಿಗಳನ್ನು ಬಿಡುಗಡೆ ಮಾಡಲಾಗಿದ್ದು, ಪ್ರಮುಖವಾಗಿಯೂ ನೂತನ ಗ್ರಾಫಿಕ್ಸ್ ಹಾಗೂ ಒಳಮೈಯಲ್ಲಿ ಅಂದತೆಯಲ್ಲಿ ಬದಲಾವಣೆ ಕಂಡುಬರಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹೋಂಡಾ ಕಾರ್ಸ್ ಇಂಡಿಯಾ ಮಾರ್ಕೆಟಿಂಗ್ ಮತ್ತು ಸೇಲ್ಸ್ ಹಿರಿಯ ಉಪಾಧ್ಯಕ್ಷರಾಗಿರುವ ಜ್ಞಾನೇಶ್ವರ್ ಸೆನ್, "ಹೋಂಡಾ ಮೊಬಿಲಿಯೊ ಮತ್ತು ಅಮೇಜ್ ಸೆಲೆಬ್ರೇಷನ್ ಎಡಿಷನ್ ಗಳನ್ನು ಬಿಡುಗಡೆ ಮಾಡಿರುವುದರಲ್ಲಿ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಂಬರುವ ಹಬ್ಬದ ಆವೃತ್ತಿ ಆಚರಿಸಿಕೊಳ್ಳಲು ಗ್ರಾಹಕರಿಗೆ ಯೋಗ್ಯ ಆಯ್ಕೆಯಾಗಿರಲಿದೆ" ಎಂದಿದ್ದಾರೆ.
ಅಮೇಜ್ ಸೆಲೆಬ್ರೇಷನ್ ಕಿಟ್ ಬೆಲೆಯು 12,476 ರು. ಹಾಗೆಯೇ ಮೊಬಿಲಿಯೊ ಕಿಟ್ ಬೆಲೆ 16,820 ರು. ಆಗಿರಲಿದೆ. ಇವೆರಡನ್ನು ಜೋಡಣೆ ಮಾಡಲು ಹೆಚ್ಚುವರಿ ಶುಲ್ಕವೂ ಇರುತ್ತದೆ.


Click it and Unblock the Notifications