ದುಬಾರಿಯಾಯ್ತು ಹೋಂಡಾ ಕಾರು; 60,000 ರು. ವರೆಗೆ ಬೆಲೆ ಏರಿಕೆ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕಳೆದ ಕೆಲವು ಸಮಯಗಳಿಂದ ಜಪಾನ್ ಮೂಲದ ಹೋಂಡಾ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಯಾವಾಗ ಮಾರುಕಟ್ಟೆಗೆ ಅಜೇಜ್ ಡೀಸೆಲ್ ಕಾರನ್ನು ಪರಿಚಯಿಸಿತೋ ತದಾ ಬಳಿಕ ಹೋಂಡಾ ಕಾರುಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಲೇ ಇದೆ.

ಅಮೇಜ್ ಹಿಂಬಾಲಿಸಿದ್ದ ಸಿಟಿ ಸೆಡಾನ್ ಹಾಗೂ ಮೊಬಿಲಿಯೊ ಎಂಪಿವಿ ಮುಖಾಂತರ ಜಪಾನ್ ಮೂಲದ ಹೋಂಡಾ ಸಂಸ್ಥೆಯು ದೇಶದಲ್ಲಿ ಹ್ಯಾಟ್ರಿಕ್ ವಿಜಯ ಆಚರಿಸಿಕೊಂಡಿತ್ತು.

honda city

ಆದರೆ ಇದೀಗ ಗ್ರಾಹಕರಿಗೆ ಚಾಟಿಯೇಟು ಬೀಸಿಯಿರುವ ಹೋಂಡಾ ಸಂಸ್ಥೆಯು ತನ್ನೆಲ್ಲ ಮಾದರಿಗಳಿಗೆ ಗರಿಷ್ಠ 60,000 ರು.ಗಳ ವರೆಗೆ ಬೆಲೆ ಏರಿಕೆ ಘೋಷಿಸಿದೆ. ಈ ಮೂಲಕ ತನ್ನ ನಿಕಟ ಪ್ರತಿಸ್ಪರ್ಧಿ ವಾಹನ ತಯಾರಕ ಸಂಸ್ಥೆಗಳ ಅದೇ ನೀತಿಯನ್ನು ಹಿಂಬಾಲಿಸಿದೆ. ಈ ಬಗ್ಗೆ ಹೇಳಿಕೆ ಕೊಟ್ಟಿರುವ ಸಂಸ್ಥೆಯು ನಿರ್ಮಾಣ ವೆಚ್ಚ ಹೆಚ್ಚಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂಬ ಸ್ಪಷ್ಟನೆ ನೀಡಿದೆ.

ಹೋಂಡಾದ ಎಂಟ್ರಿ ಲೆವೆಲ್ ಕಾರಾಗಿರುವ ಬ್ರಿಯೊ ಹ್ಯಾಚ್‌ಬ್ಯಾಕ್ ಮಾದರಿಗೆ 15,000 ರು.ಗಳಿಂದ 18,000 ರು.ಗಳ ವರೆಗೆ ದರ ಏರಿಕೆಗೊಳಿಸಲಾಗಿದೆ. ಈಗ ಬ್ರಿಯೊ ದೆಹಲಿ ಎಕ್ಸ್ ಶೋ ರೂಂ ಬೆಲೆ 4.21 ಲಕ್ಷ ರು.ಗಳಿಂದ 6.30 ಲಕ್ಷ ರು.ಗಳಾಗಿರಲಿದೆ.

ಅದೇ ರೀತಿ ಜನಪ್ರಿಯ ಅಮೇಜ್ ಸೆಡಾನ್ ಕಾರಿನ ಬೆಲೆಯನ್ನು 19,000 ರು.ಗಳಇಂದ 26,000 ವರೆಗೆ ಏರಿಸಲಾಗಿದೆ. ಇನ್ನು ಪೆಟ್ರೋಲ್ ಮಾದರಿಯ ಅಮೇಜ್ ಬೆಲೆಯನ್ನು 19,000 ರು.ಗಳಿಂದ 23,000 ರು.ಗಳ ವರೆಗೆ ಏರಿಸಲಾಗಿದೆ. ಅಮೇಜ್ ಈಗ 5.18 ಲಕ್ಷ ರು.ಗಳಿಂದ 7.78 ಲಕ್ಷ ರು.ಗಳ ವರೆಗೆ ದುಬಾರಿಯಾಗಲಿದೆ.

ಹೋಂಡಾ ಫ್ಲ್ಯಾಗ್ ಶಿಪ್ ಮಾದರಿಯಾಗಿರುವ ಸಿಟಿ ಮಧ್ಯದ ಗಾತ್ರದ ಸೆಡಾನ್ ಕಾರಿನ ಬೆಲೆಯನ್ನು ರು. 48,000 ವರೆಗೆ ವರ್ಧಿಸಲಾಗಿದೆ. ಈ ಪೈಕಿ ಪೆಟ್ರೋಲ್ ಮಾದರಿಯು 33,000 ರು.ಗಳಿಂದ 46,000 ರು.ಗಳ ವರೆಗೂ ಹಾಗೆಯೇ ಡೀಸೆಲ್ ಮಾದರಿ 37,000 ರು.ಗಳಿಂದ 48,000 ರು.ಗಳ ವರೆಗೆ ಬೆಲೆ ಏರಿಕೆ ಮಾಡಲಾಗಿದೆ. ಪ್ರಸ್ತುತ ಕಾರೀಗ ಎಕ್ಸ್ ಶೋ ರೂಂ ಬೆಲೆ 7.53 ಲಕ್ಷ ರು.ಗಳಿಂದ 11.53 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಲಿದೆ.

ಇನ್ನು ಕ್ರೀಡಾ ಬಳಕೆಯ ವಾಹನವಾಗಿರುವ ಸಿಆರ್-ವಿ ಮಾದರಿಗೆ ಗರಿಷ್ಠ 60,000 ರು.ಗಳ ವರೆಗೆ ದರ ಏರಿಕೆ ಮಾಡಲಾಗಿದೆ. ಹೋಂಡಾ ಸಿಆರ್-ವಿ ಈಗ 20.85 ಲಕ್ಷ ರು.ಗಳಿಂಗ 24.96 ಲಕ್ಷ ರು.ಗಳ ವರೆಗೆ ದುಬಾರಿಯಾಗಲಿದೆ.

ಹಾಗಿದ್ದರೂ ಮೊಬಿಲಿಯೊ ಎಂಪಿವಿ ಬೆಲೆ ಏರಿಕೆ ನೀತಿಯನ್ನು ಸಂಸ್ಥೆಯು ಕೂಲಂಕುಷವಾಗಿ ಪರಿಶೋಧನೆ ಮಾಡುತ್ತಿದ್ದು, ಇನ್ನಷ್ಟೇ ಪ್ರಕಟವಾಗಬೇಕಾಗಿದೆ.

More from DriveSpark

Article Published On: Tuesday, January 6, 2015, 9:35 [IST]
English summary
Honda Cars India today increased prices of its vehicles by up to Rs. 60,000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+