ಜುಲೈನಲ್ಲಿ ಬಹುನಿರೀಕ್ಷಿತ ಹೋಂಡಾ ಜಾಝ್ ಬಿಡುಗಡೆ

By Nagaraja

ಕೊನೆಗೂ ಕಾಯುವಿಕೆ ಅಂತ್ಯಗೊಂಡಿದ್ದು, ಬಹುನಿರೀಕ್ಷಿತ ಹೋಂಡಾ ಜಾಝ್ 2015 ಜುಲೈ 08ರಂದು ಬಿಡುಗಡೆಯಾಗಲಿದೆ. ಇದು ಪ್ರಮುಖವಾಗಿಯೂ ದೇಶದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗು ಮಾರುತಿ ಸುಜುಕಿ ಸ್ವಿಫ್ಟ್, ಹ್ಯುಂಡೈ ಎಲೈಟ್ ಐ20 ಹಾಗೂ ಫೋಕ್ಸ್ ವ್ಯಾಗನ್ ಪೊಲೊ ಮಾದರಿಗಳ ಸವಾಲುಗಳನ್ನು ಎದುರಿಸಲಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಹೊಸ ಜಾಝ್ ಲಭ್ಯವಾಗಲಿದೆ. ಇದರಲ್ಲಿ 1.5 ಲೀಟರ್ ಐಡಿಟೆಕ್ ಹಾಗೂ 1.2 ಲೀಟರ್ ಐವಿಟೆಕ್ ಎಂಜಿನ್ ಜೋಡಣೆಯಾಗಲಿದೆ. ಇದು ಪ್ರೀಮಿಯಂ ವಿಭಾಗದಲ್ಲಿ ಹೋಂಡಾ ಪಾಲಿಗೆ ಹೆಚ್ಚು ನಿರೀಕ್ಷೆಯನ್ನುಂಟು ಮಾಡಿದೆ.

honda jazz

ಈ ಹಿಂದೆ 2009ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಹೋಂಡಾ ಜಾಝ್ ಅಂತದ್ದೇನು ಸದ್ದು ಮಾಡಿರಲಿಲ್ಲ. ಬಳಿಕ 2011ರಲ್ಲಿ ಹೊಸ ರೂಪವನ್ನು ಕಲ್ಪಿಸಿದ್ದರೂ ಗ್ರಾಹಕರನ್ನು ಮೆಚ್ಚಿಸುವಲ್ಲಿ ವಿಫಲವಾಗಿತ್ತು.

ಹೋಂಡಾ ಜಾಝ್ ಮಾದರಿಯು ತವರೂರಾದ ಜಪಾನ್‌ನಲ್ಲಿ ಭಾರಿ ಯಶಸ್ಸನ್ನು ಕಂಡಿದೆ. ಇದರ ಹೈಬ್ರಿಡ್ ಮಾದರಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಆದರೆ ಸದ್ಯಕ್ಕೆ ಭಾರತದಲ್ಲಿ ಹೈಬ್ರಿಡ್ ಮಾದರಿ ಬಿಡುಗಡೆಯಾಗುತ್ತಿಲ್ಲ.

More from DriveSpark

Article Published On: Thursday, May 14, 2015, 14:05 [IST]
English summary
The Japanese manufacturer is keen on introducing its premium hatchback for India. It is now confirmed that Honda will officially be launching its all new Jazz on the 8th of July, 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+