ಭಾರತದಲ್ಲಿ ಭಾರಿ ಬೇಡಿಕೆ; ಹ್ಯುಂಡೈ ಕ್ರೆಟಾ ರಫ್ತು ವಿಳಂಬ

Written By:

ಹ್ಯುಂಡೈ ಕ್ರೆಟಾ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಕ್ಕೆ (ಎಸ್‌ಯುವಿ) ಭಾರತದಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಿದೇಶಗಳಿಗೆ ಈ ಬಹುನಿರೀಕ್ಷಿತ ಕಾರಿನ ರಫ್ತು ಪ್ರಕ್ರಿಯೆಯು ವಿಳಂಬವಾಗುತ್ತಿದೆ ಎಂದು ದಕ್ಷಿಣ ಕೊರಿಯಾ ಮೂಲದ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

Also Read: ಹ್ಯುಂಡೈ ಕ್ರೆಟಾಗೆ ಭಾರಿ ಬೇಡಿಕೆ; ಕಾರಣ ಏನು ? ಮುಂದಕ್ಕೆ ಓದಿ

ಭಾರತದಲ್ಲಿ ಬಿಡುಗಡೆಗೂ ಮುನ್ನವೇ 10,000 ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಿಸಿಕೊಂಡಿರುವ ಕ್ರೆಟಾ ಕೆಲವೇ ದಿನಗಳಲ್ಲಿ 40,000ಕ್ಕೂ ಹೆಚ್ಚು ಮುಂಗಡ ಬುಕ್ಕಿಂಗ್ಸ್ ಗಳನ್ನು ಪಡೆದುಕೊಂಡಿತ್ತು. 2015 ಜುಲೈ 21ರಂದು ಬಿಡುಗಡೆಯಾಗಿರುವ ಹ್ಯುಂಡೈ ಕ್ರೆಟಾ ಸೆಪ್ಟೆಂಬರ್ 30ರ ವರೆಗೆ 16,105 ಯುನಿಟ್ ಗಳ ಮಾರಾಟ ಕಂಡಿದೆ. ಅಂದರೆ ತಿಂಗಳಲ್ಲಿ ಸರಾಸರಿ 7,200 ಯುನಿಟ್ ಗಳ ಮಾರಾಟ ಕಾಪಾಡಿಕೊಂಡಿದೆ.

ಹ್ಯುಂಡೈ ಕ್ರೆಟಾ

ಭಾರಿ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ನಂ.1 ಪಟ್ಟ ಆಲಂಕರಿಸಿರುವ ಕ್ರೆಟಾ ನಿರ್ಮಾಣ ಸಾಮರ್ಥ್ಯವನ್ನು ಶೇಕಡಾ 40ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ತಿಂಗಳಲ್ಲಿ 5,000 ಕ್ರೆಟಾ ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿದೆ.

ವಾಹನ ವಲಯಗಳ ಬಲ್ಲ ಮೂಲಗಳ ಪ್ರಕಾರ ಕ್ರೆಟಾ ಬುಕ್ಕಿಂಗ್ ಮಾಡಿದವರು ತಮ್ಮ ಕನಸಿನ ಕಾರಿನ ಆಗಮನಕ್ಕಾಗಿ ಐದರಿಂದ ಆರು ತಿಂಗಳ ವರೆಗೆ ಕಾಯಬೇಕಾಗಿದೆ. ಈಗ ನಿರ್ಮಾಣ ಸಾಮರ್ಥ್ಯ ಹೆಚ್ಚಿಸಿರುವುದರೊಂದಿಗೆ ಕಾಯುವಿಕೆ ಅವಧಿ ಗಣನೀಯವಾಗಿ ಕುಸಿತಗೊಳ್ಳುವ ಸಾಧ್ಯತೆಯಿದೆ.

English summary
Hyundai Creta Exports Delayed Due To Huge Indian Demand
Story first published: Tuesday, October 27, 2015, 8:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark