2016ರಲ್ಲಿ ಹ್ಯುಂಡೈ ಎಂಪಿವಿ ಭಾರತಕ್ಕೆ; ಇನ್ನೋವಾಗೆ ಸವಾಲು

Posted By:

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ, ದೇಶದಲ್ಲಿ ಬಹು ಬಳಕೆಯ ವಾಹನ (ಎಂಪಿವಿ) ವಿಭಾಗದಲ್ಲಿ ಕೊರತೆಯನ್ನು ಅನುಭವಿಸುತ್ತಿದೆ. ಸಣ್ಣ ಕಾರು ವಿಭಾಗದಲ್ಲಿ ಹೆಚ್ಚು ಸಾನಿಧ್ಯ ಹೊಂದಿರುವ ಹ್ಯುಂಡೈ ಈಗ ಎಂಪಿವಿ ವಿಭಾಗದತ್ತವೂ ತನ್ನ ಚಿತ್ತ ಹಾಯಿಸುತ್ತಿದೆ.

ಬಲ್ಲ ಮೂಲಗಳ ಪ್ರಕಾರ ಹ್ಯುಂಡೈ ಬಹು ನಿರೀಕ್ಷಿತ ಎಂಪಿವಿ 2016ನೇ ಸಾಲಿನಲ್ಲಿ ಬಿಡುಗಡೆಯಾಗಲಿದೆ. ಇದು ಪ್ರಮುಖವಾಗಿಯೂ ಈಗಾಗಲೇ ಮಾರುಕಟ್ಟೆಯಲ್ಲಿ ಭದ್ರ ಅಡಿಪಾಯ ಸ್ಥಾಪಿಸಿರುವ ಟೊಯೊಟಾ ಇನ್ನೋವಾಗೆ ಪ್ರತಿಸ್ಪರ್ಧಿಯಾಗಲಿದೆ.

2016ರಲ್ಲಿ ಹ್ಯುಂಡೈ ಎಂಪಿವಿ ಭಾರತಕ್ಕೆ; ಇನ್ನೋವಾಗೆ ಸವಾಲು

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಹ್ಯುಂಡೈ ಅಧಿಕಾರಿಗಳು, ಹೊಸ ಎಂಪಿವಿ ವಿನ್ಯಾಸವನ್ನು ಅಂತಿಮಗೊಳಿಸಲಾಗಿದ್ದು, ಬಹುತೇಕ ಮುಂದಿನ ವರ್ಷ ಬಿಡುಗಡೆ ಮಾಡಲಿರುವುದಾಗಿ ತಿಳಿಸಿದ್ದಾರೆ.

2016ರಲ್ಲಿ ಹ್ಯುಂಡೈ ಎಂಪಿವಿ ಭಾರತಕ್ಕೆ; ಇನ್ನೋವಾಗೆ ಸವಾಲು

ನೂತನ ಏಳು ಸೀಟುಗಳ ಎಂಪಿವಿ, ಭಾರತೀಯ ರಸ್ತೆ ಪರಿಸ್ಥಿತಿ ಹಾಗೂ ಗ್ರಾಹಕರ ಬೇಡಿಕೆಗಾನುಸಾರವಾಗಿ ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ ದೇಶದ ಟ್ಯಾಕ್ಸಿ ವಿಭಾಗಕ್ಕೂ ಎಂಟ್ರಿ ಕೊಡುವ ಇರಾದೆಯನ್ನಿಟ್ಟುಕೊಂಡಿದೆ.

2016ರಲ್ಲಿ ಹ್ಯುಂಡೈ ಎಂಪಿವಿ ಭಾರತಕ್ಕೆ; ಇನ್ನೋವಾಗೆ ಸವಾಲು

ಇತ್ತೀಚೆಗಿನ ಕ್ರೆಟಾ ಹಾಗೂ ಎಲೈಟ್ ಐ20 ಕಾರುಗಳ ಯಶಸ್ಸಿನಿಂದ ಪುಳಕಿತಗೊಂಡಿರುವ ಹ್ಯುಂಡೈ, ದೇಶದ ವಾಹನ ಮಾರುಕಟ್ಟೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.

2016ರಲ್ಲಿ ಹ್ಯುಂಡೈ ಎಂಪಿವಿ ಭಾರತಕ್ಕೆ; ಇನ್ನೋವಾಗೆ ಸವಾಲು

ಪ್ರಸ್ತುತ ನೂತನ ಎಂಪಿವಿ ಯಾವ ತಳಹದಿಯಲ್ಲಿ ಅಥವಾ ವಿನ್ಯಾಸಗಳ ಕುರಿತು ಯಾವುದೇ ಮಾಹಿತಿಗಳು ಹೊರಬಂದಿಲ್ಲ. ಅಲ್ಲದೆ ಗುಟ್ಟು ರಟ್ಟಾಗದಂತೆ ಸಂಸ್ಥೆ ನೋಡಿಕೊಳ್ಳುತ್ತಿದೆ.

2016ರಲ್ಲಿ ಹ್ಯುಂಡೈ ಎಂಪಿವಿ ಭಾರತಕ್ಕೆ; ಇನ್ನೋವಾಗೆ ಸವಾಲು

ಒಟ್ಟಿನಲ್ಲಿ ದೇಶದ ಗ್ರಾಹಕರ ಪಾಲಿಗಂತೂ ನೂತನ ಹ್ಯುಂಡೈ ಎಂಪಿವಿ ಹೂಸ ಅನುಭವವಾಗಲಿದೆ.

English summary
Hyundai to launch new MPV in 2016
Story first published: Thursday, October 15, 2015, 10:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark