ಹೊಸ ಫೋರ್ಡ್ ಎಂಡೀವರ್ ಸಂಪೂರ್ಣ ಸುರಕ್ಷಿತ

By Nagaraja

ಆಸ್ಟ್ರೇಲಿಯಾ ಎನ್‌ಸಿಎಪಿ (ANCAP) ಢಿಕ್ಕಿ ಪರೀಕ್ಷೆಯಲ್ಲಿ ಐದು ನಕ್ಷತ್ರಗಳನ್ನು ಗಿಟ್ಟಿಸಿಕೊಂಡಿರುವ ನೂತನ ಫೋರ್ಡ್ ಎಂಡೀವರ್ ಕ್ರೀಡಾ ಬಳಕೆಯ ವಾಹನವು (ಎಸ್‌ಯುವಿ) ಸಂಪೂರ್ಣ ಸುರಕ್ಷಿತ ಕಾರೆನಿಸಿಕೊಂಡಿದೆ.

ಪ್ರಸ್ತುತ ಎಂಡೀವರ್ ಕಾರು ಆಯ್ದ ಜಾಗತಿಕ ಮಾರುಕಟ್ಟೆಯಲ್ಲಿ ಎವರೆಸ್ಟ್ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಪ್ರಸ್ತುತ ಕಾರು ಭಾರತವನ್ನು ಅತಿ ಶೀಘ್ರದಲ್ಲೇ ಎಂಟ್ರಿ ಕೊಡಲಿದೆ.

ಫೋರ್ಡ್ ಎಂಡೀವರ್

37 ಪಾಯಿಂಟ್ ಗಳಲ್ಲಿ 35.38 ಸೇಫ್ಟಿ ಅಂಕಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಎಂಡೀವರ್ ಯಶಸ್ವಿಯಾಗಿದೆ. ಅಲ್ಲದೆ ಗಂಟೆಗೆ 64 ಕೀ.ಮೀ. ವೇಗದ ಢಿಕ್ಕಿ ಪರೀಕ್ಷೆಯಲ್ಲೂ ಪಂಚ ತಾರೆ ರೇಟಿಂಗ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಫ್ರಂಟ್ ಏರ್ ಬ್ಯಾಗ್, ಸೈಡ್ ಕರ್ಟೈನ್ ಏರ್ ಬ್ಯಾಗ್, ಚಾಲಕ ಮೊಣಕಾಲು ಏರ್ ಬ್ಯಾಗ್, ಸೀಟು ಬೆಲ್ಟ್ ರಿಮೈಂಡರ್, ಎಮರ್ಜನ್ಸಿ ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಜೊತೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಮುಂತಾದ ಭದ್ರತಾ ವೈಶಿಷ್ಟ್ಯಗಳನ್ನು ಎಂಡೀವರ್ ಪಡೆದುಕೊಂಡಿದೆ.

ಅಂದ ಹಾಗೆ 2.2 ಲೀಟರ್ ಹಾಗೂ 3.2 ಲೀಟರ್ ಡೀಸೆಲ್ ಎಂಜಿನ್ ನಿಂದ ಫೋರ್ಡ್ ಎಂಡೀವರ್ ನಿಯಂತ್ರಿಸಲ್ಪಡುತ್ತದೆ. ಅಲ್ಲದೆ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೂ ಇರುತ್ತದೆ. ಅಂತೆಯೇ ಐಚ್ಛಿಕ ರಿಯರ್ ವೀಲ್ ಅಥವಾ 4x4 ಚಾಲನಾ ಆಯ್ಕೆಯೂ ಇರುತ್ತದೆ.

ಇನ್ನು ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ದೇಶವನ್ನು ತಲುಪಲಿರುವ ನೂತನ ಫೋರ್ಡ್ ಎಂಡೀವರ್ 25ರಿಂದ 35 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇದು ಪ್ರಮುಖವಾಗಿಯೂ ಟೊಯೊಟಾ ಫಾರ್ಚ್ಯುನರ್, ಹ್ಯುಂಡೈ ಸಾಂಟಾಫೆ, ಸ್ಯಾಂಗ್ಯೊಂಗ್ ರೆಕ್ಸ್ಟಾನ್, ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಮತ್ತು ಈಗಷ್ಟೇ ಬಿಡುಗಡೆಯಾಗಿರುವ ಷೆವರ್ಲೆ ಟ್ರೈಲ್ ಬ್ಲೇಜರ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಫೋರ್ಡ್ ಎಂಡೀವರ್ ಢಿಕ್ಕಿ ಪರೀಕ್ಷೆ ವೀಕ್ಷಿಸಿ

Article Published On: Tuesday, October 27, 2015, 16:23 [IST]
English summary
Upcoming New Ford Endeavour Secures 5-Star ANCAP Safety Rating
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+