ಅಪಘಾತ ಪರೀಕ್ಷೆ; ಹೋಂಡಾ ಜಾಝ್‌ಗೆ ಫೈವ್ ಸ್ಟಾರ್ ಹಿರಿಮೆ
ಭಾರತದಲ್ಲಿ ಇನ್ನಷ್ಟೇ ಬಿಡುಗಡೆಯಾಗಲಿರುವ ಹೋಂಡಾ ಜಾಝ್ ಅತಿ ನಿರ್ಣಾಯಕ ಅಡಚಣೆಯೊಂದನ್ನು ನಿವಾರಿಸಿದೆ. ಏಕೆಂದರೆ ಭಾರತದಲ್ಲಿ ನಿರ್ಮಾಣವಾಗಿರುವ ಈ ಬಹುನಿರೀಕ್ಷಿತ ಮಾದರಿಯು ಆಸ್ಟ್ರೇಲಿಯನ್ ನ್ಯೂ ಕಾರ್ ಅಸ್ಸೆಸ್ಮೆಮೆಂಟ್ ಪ್ರೋಗ್ರಾಂನಲ್ಲಿ (ಎಎನ್‌ಸಿಎಪಿ) ಪಂಚತಾರಾ ಗೌರವಕ್ಕೆ ಪಾತ್ರವಾಗಿದೆ.
ಭಾರತದಲ್ಲಿ ನಿರ್ಮಿಸಿದ ಮಾದರಿಗಳೆಲ್ಲ ಸುರಕ್ಷತಾ ಭೀತಿ ಎದುರಿಸುತ್ತಿರುವ ನಡುವೆ ಜಾಝ್ ಅತ್ಯುತ್ತಮ ಸುರಕ್ಷಾ ಕಾಪಾಡಿಕೊಂಡಿರುವುದು ಹೆಚ್ಚಿನ ನಿರೀಕ್ಷೆಗೆ ಎಡೆಮಾಡಿಕೊಟ್ಟಿದೆ.

ಮುಂಭಾಗ ಹಾಗೂ ಬದಿಯ ಢಿಕ್ಕಿ ಪರೀಕ್ಷೆಯಲ್ಲೂ ಜಾಝ್ ಅತ್ಯುತ್ತಮವಾಗಿ ಮೂಡಿ ಬಂದಿದೆ. ಗರಿಷ್ಠ 37 ಅಂಕಗಳ ಪೈಕಿ ಜಾಝ್ 36.58 ಪಾಯಿಂಟ್‌ಗಳನ್ನು ಬಾಚಿಕೊಂಡಿತ್ತು.
ಹೊಸ ಜಾಝ್‌ನಲ್ಲಿ ಸುರಕ್ಷತೆಗೆ ಅತಿ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆರು ಏರ್ ಬ್ಯಾಗ್, ಸ್ಥಿರತೆ ನಿಯಂತ್ರಣ, ರಿವರ್ಸಿಂಗ್ ಕ್ಯಾಮೆರಾ, ಹಿಲ್ ಸ್ಟಾರ್ಟ್ ಅಸಿಸ್ಟ್ ಹಾಗೂ ತುರ್ತು ನಿಲುಗಡೆ ಸಿಗ್ನಲ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಇಷ್ಟೆಲ್ಲ ಆದರೂ ನಿಕಟ ಭವಿಷ್ಯದಲ್ಲೇ ಬಿಡುಗಡೆಯಾಗಲಿರುವ 2015 ಜಾಝ್ ಭಾರತ ಮಾದರಿಯಲ್ಲೂ ಇವೆಲ್ಲ ಸೌಲಭ್ಯಗಳು ಲಭ್ಯವಾಗಲಿದೆಯೇ ಎಂಬುದು ಕುತೂಹಲವೆನಿಸಿದೆ.


Click it and Unblock the Notifications








