ಇಸುಝು ಎಂಯು-7 ಆಟೋಮ್ಯಾಟಿಕ್ ಎಸ್‌ಯುವಿ ಬಿಡುಗಡೆ
ಜಪಾನ್‌ನ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಇಸುಝು, ಭಾರತದಲ್ಲಿ ತನ್ನ ಜನಪ್ರಿಯ ಎಂಯು-7 ಮಾದರಿಯ ಆಟೋಮ್ಯಾಟಿಕ್ ವೆರಿಯಂಟ್ ಬಿಡುಗಡೆ ಮಾಡಿದೆ. ಇದರೊಂದಿಗೆ ಮತ್ತಷ್ಟು ಹೊಸ ವೈಶಿಷ್ಟ್ಯಗಳು ಸೇರ್ಪಡೆಯಾಗಿದೆ.
ಬೆಲೆ ಮಾಹಿತಿ: 23.90 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)

ಆಟೋಮ್ಯಾಟಿಕ್ ವ್ಯವಸ್ಥೆಯ ಜೊತೆಗೆ ಕಾರಿನೊಳಗೆ ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್ (ಬೀಜ್/ಬ್ಲ್ಯಾಕ್), 3 ಸ್ಟೀರಿಂಗ್ ವೀಲ್ ಮೌಂಟೆಡ್ ಜೊತೆಗೆ ಆಡಿಯೋ ಕಂಟ್ರೋಲ್, ಕೆನ್ ವುಡ್ 6015 ಬಿಟಿ ಮ್ಯೂಸಿಕ್ ಸಿಸ್ಟಂ ಜೊತೆಗೆ ಸ್ಯಾಟಲೈಟ್ ನೇವಿಗೇಷನ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ವ್ಯೂ ಕ್ಯಾಮೆರಾ ಜೊತೆಗೆ ಟಚ್ ಸ್ಕ್ರೀನ್ ಪರದೆಯ ವ್ಯವಸ್ಥೆಯು ಇರಲಿದೆ.
ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು 2999 ಸಿಸಿ 4 ಸಿಲಿಂಡರ್ ಇಂಟರ್ ಕೂಲ್ಡ್ ವಿಜಿಎಸ್ ಟರ್ಬೊ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 330 ಎನ್ಎಂ ತಿರುಗುಬಲದಲ್ಲಿ 160 ಅಶ್ವಶಕ್ತಿ ಉತ್ಪಾದಿಸಲಿದೆ.

ಅಂದರೆ ಮ್ಯಾನುವಲ್ ವೆರಿಯಂಟ್ ಗಿಂತಲೂ ನೂತನ ಎಂಯು-7 ಆಟೋಮ್ಯಾಟಿಕ್ 2.5 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಸಂಸ್ಥೆಯು ಈಗ ಚೆನ್ನೈಯಲ್ಲಿರುವ ಹಿಂದೂಸ್ತಾನ್ ಮೋಟಾರ್ಸ್ ಘಟಕದಲ್ಲಿ ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಮುಖಾಂತರ ಜೋಡಣೆ ಪ್ರಕ್ರಿಯೆ ಹಮ್ಮಿಕೊಳ್ಳುತ್ತಿದ್ದು, ಬೆಂಗಳೂರು ಸೇರಿದಂತೆ ದೇಶದ 25 ನಗರಗಳಲ್ಲಿ ಸ್ಥಿತಗೊಂಡಿರುವ ಡೀಲರ್ ಶಿಪ್ ಗಳ ಮುಖಾಂತರ ಮಾರಾಟ ಕೈಗೊಳ್ಳುತ್ತಿದೆ.


Click it and Unblock the Notifications








