ನಿರ್ಮಾಪಕನಿಗೆ ಒದೆ; ಬಿಬಿಸಿಯಿಂದ ಜೆರೆಮಿ ಕ್ಲಾರ್ಕ್‌ಸನ್ ವಜಾ
ನಿರ್ಮಾಪಕನಿಗೆ ಒದೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಹೆಸರಾಂತ ಟಿ.ವಿ ಶೋ ಟಾಪ ಗೇರ್ ನಡೆಸಿಕೊಂಡು ಬರುತ್ತಿರುವ ನಿರೂಪಕ ಜೆರೆಮಿ ಕ್ಲಾರ್ಕ್‌ಸನ್ ಅವರನ್ನು ಬಿಬಿಸಿಯಿಂದ ವಜಾಗೊಳಿಸಲಾಗಿದೆ.
ಇದರ ಮುಂದುವರಿದ ಬೆಳವಣಿಯೆಂಬಂತೆ ಟಾಪ್ ಗೇರ್ ಸೀಸನ್ 22 ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಮುಂದಿನ ಭಾನುವಾರ ಕಾರ್ಯಕ್ರಮ ಪ್ರಸಾರವಾಗುವುದಿಲ್ಲ ಎಂದು ಬಿಬಿಸಿ ತಿಳಿಸಿದೆ.

ಬಿಬಿಸಿ ನಿರ್ಮಾಪಕನಿಗೆ ಜೆರೆಮಿ ಕ್ಲಾರ್ಕ್‌ಸನ್ ಹಲ್ಲೆ ನಡೆಸಿದ್ದಾರೆಂಬ ಆರೋಪವಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ.
ಹಾಗಿದ್ದರೂ ಘಟನೆಯ ಸಂಬಂಧ ಕ್ಲಾರ್ಕ್‌ಸನ್ ಅವರಿಂದ ಇದುವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಬರದಿರುವುದು ವಿಪರ್ಯಾಸಕ್ಕೆ ಕಾರಣವಾಗಿದೆ.
ಈ ನಡುವೆ ಜೆರೆಮಿ ಕ್ಲಾರ್ಕ್‌ಸನ್ ವಜಾ ಕ್ರಮವನ್ನು ಹಿಂಪಡೆಯುವಂತೆ ಅಭಿಮಾನಿಗಳು ಅಭಿಯಾನವೊಂದಕ್ಕೆ ಚಾಲನೆ ನೀಡಿದ್ದು, ಈಗಾಗಲೇ 25,000ಕ್ಕೂ ಹೆಚ್ಚು ಸಹಿಗಳು ದಾಖಲಾಗಿದೆ ಎಂಬುದು ತಿಳಿದು ಬಂದಿದೆ. ಟ್ವಿಟರ್‌ನಲ್ಲಿ ಈ ಕೂಗು #BringBackClarkson ಎಂಬ ಹ್ಯಾಸ್ ಟ್ಯಾಗ್ ಮುಖಾಂತರ ಜೋರಾಗಿ ಕೇಳಿ ಬರುತ್ತಿದೆ.


Click it and Unblock the Notifications








