ಬಂದೇ ಬಿಡ್ತು ರೆನೊ ಲೊಡ್ಜಿ; ಬೆಲೆ ಎಷ್ಟು ಗೊತ್ತೇ?

By Nagaraja

ಡಸ್ಟರ್ ನಂತಹ ಜನಪ್ರಿಯ ಮಾದರಿಗಳನ್ನು ಪರಚಯಿಸಿರುವ ಫ್ರಾನ್ಸ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ ಇಂಡಿಯಾವು, ಇದೀಗ ದೇಶದ ಮಾರುಕಟ್ಟೆಗೆ ರೆನೊ ಲೊಡ್ಜಿ ಬಹು ಬಳಕೆಯ ವಾಹನ (ಎಂಪಿವಿ) ಬಿಡುಗಡೆ ಮಾಡುವ ಮೂಲಕ ತನ್ನ ಸಾನಿಧ್ಯವನ್ನು ಮತ್ತಷ್ಟು ವಿಸ್ತರಿಸಿದೆ.

ಇದು ರೆನೊದಿಂದ ದೇಶದಲ್ಲಿ ಬಿಡುಗಡೆಯಾಗಿರುವ ಮೊದಲ ಎಂಪಿವಿ ಮಾದರಿಯಾಗಿದ್ದು, ಡಸ್ಟರ್ ನ ಅದೇ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುವ ನಿರೀಕ್ಷೆಯಲ್ಲಿದೆ. ಈ ಸಂಬಂಧ ಬೆಲೆ, ಇತ್ಯಾದಿ ಅಗತ್ಯ ಮಾಹಿತಿಗಳಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

 ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

85 ಪಿಎಸ್ ಸ್ಟ್ಯಾಂಡರ್ಡ್ 8,19 ಲಕ್ಷ ರು.

85 ಪಿಎಸ್ ಆರ್xಇ 8,99 ಲಕ್ಷ ರು.

85 ಪಿಎಸ್ ಆರ್xಎಲ್ 9,59 ಲಕ್ಷ ರು.

85 ಪಿಎಸ್ ಆರ್xಝಡ್ 10,89 ಲಕ್ಷ ರು.

110 ಪಿಎಸ್ ಆರ್xಎಲ್ 10,09 ಲಕ್ಷ ರು.

110 ಪಿಎಸ್ ಆರ್xಝಡ್ (8 ಸೀಟು) 11,49 ಲಕ್ಷ ರು.

110 ಪಿಎಸ್ ಆರ್xಝಡ್ (7 ಸೀಟು) 11,79 ಲಕ್ಷ ರು.

ಡೀಸೆಲ್ ಎಂಜಿನ್ ಮಾತ್ರ

ಡೀಸೆಲ್ ಎಂಜಿನ್ ಮಾತ್ರ

ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ರೆನೊ ಲೊಡ್ಜಿ ಡೀಸೆಲ್ ಎಂಜಿನ್ ನಲ್ಲಿ ಮಾತ್ರ ಲಭ್ಯವಾಗಲಿದೆ. ಇದು 1.5 ಲೀಟೀರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 85 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಅಂತೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರಲಿದೆ. ಇನ್ನು ಇದೇ ಎಂಜಿನ್ ಅನ್ನು ಹೆಚ್ಚು ಶಕ್ತಿಶಾಲಿ ರೂಪದಲ್ಲಿ ಟ್ಯೂನ್ ಮಾಡಲಾಗಿದ್ದು, 110 ಅಶ್ವಶಕ್ತಿ ಉತ್ಪಾದಿಸಲಿದೆ. ಇದು 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

ಸುರಕ್ಷತೆ

ಸುರಕ್ಷತೆ

ಎಬಿಎಸ್ ಜೊತೆ ಇಬಿಡಿ

ಡ್ಯುಯಲ್ ಫ್ರಂಟ್ ಏರ್ ಬ್ಯಾಗ್,

ರಿಯರ್ ವ್ಯೂ ಕ್ಯಾಮೆರಾ ಜೊತೆ ಪಾರ್ಕಿಂಗ್ ಸೆನ್ಸಾರ್,

ಓಪನ್ ಡೋರ್ ಎಚ್ಚರಿಕೆ ಪರದೆ,

ಎಂಜಿನ್ ಇಂಮೊಬಿಲೈಜರ್

ಆಸನ ವ್ಯವಸ್ಥೆ

ಆಸನ ವ್ಯವಸ್ಥೆ

ಏಳು ಹಾಗೂ ಎಂಟು ಸೀಟುಗಳ ವ್ಯವಸ್ಥೆಯಲ್ಲಿ ಆಗಮವಾಗಿರುವ ಹೊಸ ರೆನೊ ಲೊಡ್ಜಿ ಕಾರಲ್ಲಿ ಮೂರು ಸಾಲಿನ ಆಸನ ವ್ಯವಸ್ಥೆಯಿದ್ದು, ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸುತ್ತಿದೆ. ಈ ಮೂಲಕ ಪರಿಪೂರ್ಣ ಫ್ಯಾಮಿಲಿ ಕಾರೆಂಬ ಪಟ್ಟ ಕಟ್ಟಿಕೊಂಡಿದೆ.

ಬೂಟ್ ಸ್ಪೇಸ್

ಬೂಟ್ ಸ್ಪೇಸ್

275 ಲೀಟರ್ ಬೂಟ್ ಸ್ಪೇಸ್ ಒದಗಿಸುವ ರೆನೊ ಲೊಡ್ಜಿ ಸೀಟನ್ನು ಮಡಚಿದಾಗ ಗರಿಷ್ಠ 1861 ಲೀಟರ್ ಢಿಕ್ಕಿ ಜಾಗವನ್ನು ಹೊಂದಿರುವುದು ಹೆಚ್ಚಿನ ಮೆಚ್ಚುಗೆಗೆ ಪಾತ್ರವಾಗಿದೆ.

ಟಾಪ್ ಎಂಡ್ ಸೌಲಭ್ಯ

ಟಾಪ್ ಎಂಡ್ ಸೌಲಭ್ಯ

ಡಸ್ಟರ್ ತರಹನೇ ರೆನೊ ಲೊಡ್ಜಿ ಟಾಪ್ ಎಂಡ್ ವೆರಿಯಂಟ್ ಬ್ಲೂಟೂತ್, ಮನರಂಜನೆಗಾಗಿ ಯುಎಸ್ ಬಿ ಸಂಪರ್ಕಿತ ಮೀಡಿಯಾನೇವ್ ( MEDIANAV) ಸಿಸ್ಟಂ, ನೇವಿಗೇಷನ್ ಮತ್ತು ಸಂವಹನ ಕ್ರಿಯಾತ್ಮಕತೆಗಳನ್ನು ನಿಭಾಯಿಸಲಿದೆ. ಇನ್ನು ಕ್ರೂಸ್ ಕಂಟ್ರೋಲ್, ವೇಗ ಮಿತಿ, ಡ್ಯುಯಲ್ ಎಜಿ ಜೊತೆ ಎರಡನೇ ಹಾಗೂ ಮೂರನೇ ಸಾಲಿನಲ್ಲಿ ಏರ್ ವೆಂಟ್ಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಜೊತೆ ಎಬಿಎಸ್, ಇಬಿಡಿ ಮತ್ತು ಬ್ರೇಕ್ ಅಸಿಸ್ಟ್ ಸೇವೆ ಲಭ್ಯವಿರಲಿದೆ.

More from DriveSpark

Article Published On: Thursday, April 9, 2015, 15:33 [IST]
English summary
Renault has launched its Lodgy MPV in India on the 9th of April, 2015. This new model is being projected as the next best-seller for the French manufacturer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+