ಹ್ಯುಂಡೈ ಸಂಸ್ಥೆ ಮೇಲೆ 420 ಕೋಟಿ ರು.ಗಳ ದಂಡ

By Nagaraja

2002ರ ಸ್ಪರ್ಧಾತ್ಮಕ ಕಾಯಿದೆ (competition law) ಉಲ್ಲಂಘನೆಗೆ ಸಂಬಂಧಪಟ್ಟಂತೆ ದಕ್ಷಿಣ ಕೊರಿಯಾ ಮೂಲದ ಹಾಗೂ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರ್ ಇಂಡಿಯಾ ಸಂಸ್ಥೆಯ ಮೇಲೆ ನ್ಯಾಯೋಚಿತ ವ್ಯಾಪಾರ ನಿಯಂತ್ರಕ ಭಾರತೀಯ ಸ್ಪರ್ಧಾತ್ಮಕ ಆಯೋಗವು (Competition Commission Of India) 420 ಕೋಟಿ ರುಪಾಯಿಗಳ ದಂಡ ವಿಧಿಸಿದೆ.

ಭಾರತೀಯ ಸ್ಪರ್ಧಾತ್ಮಕ ಆಯೋಗವು 2015 ಜುಲೈ 27ರಂದು ಬಿಡುಗಡೆ ಮಾಡಿರುವ ಆದೇಶದಲ್ಲಿ, ಹ್ಯುಂಡೈ ಜೊತೆಗೆ ಮಾರುಕಟ್ಟೆಯಲ್ಲಿ ಆರೋಗ್ಯಕಾರಿ ಸ್ಪರ್ಧೆಗೆ ವಿರುದ್ಧವಾಗಿ ಚಟುವಟಿಕೆಗಳನ್ನು ಮಾಡುತ್ತಿರುವ ಮಹೀಂದ್ರ ರೇವಾ ಎಲೆಕ್ಟ್ರಿಕ್ ಹಾಗೂ ಪ್ರೀಮಿಯರ್ ಕಾರು ಸಂಸ್ಥೆಗಳು ಮೇಲೂ ಕಟ್ಟುನಿಟ್ಟಿನ ನಿರ್ದೇಶವನ್ನು ಜಾರಿ ಮಾಡಿದೆ.

ಕಾರು ಬಿಡಿಭಾಗ

ಮುಕ್ತ ಮಾರುಕಟ್ಟೆಯಲ್ಲಿ ಕಾರಿನ ಬಿಡಿಭಾಗಗಳ ಮಾರಾಟ ನಿರ್ಬಂಧಕ್ಕೆ ಸಂಬಂಧ 2014 ಆಗಸ್ಟ್ 25ರಂದು 14 ಸಂಸ್ಥೆಗಳ ವಿರುದ್ಧ ವಿಧಿಸಿರುವುದರ ಶಿಕ್ಷೆಯ ಮುಂದುವರಿದ ಭಾಗ ಇದಾಗಿದೆ. ಹ್ಯುಂಡೈ, ರೇವಾ ಹಾಗೂ ಪ್ರೀಮಿಯರ್ ಮೇಲಿನ ಆದೇಶವು ನ್ಯಾಯಾಲದಲ್ಲಿ ಇತ್ಯರ್ಥವಾಗದೇ ಉಳಿದಿತ್ತು.

ಸ್ಪರ್ಧಾ ಕಾನೂನು ಉಲ್ಲಂಘನೆಯ ಹಿನ್ನಲೆಯಲ್ಲಿ ದೇಶದ 14 ಕಾರು ತಯಾರಕ ಸಂಸ್ಥೆಗಳ ಮೇಲೆ ಒಟ್ಟು 2,544.65 ಕೋಟಿ ರುಪಾಯಿಗಳ ಭಾರಿ ದಂಡವನ್ನು ಭಾರತೀಯ ಸ್ಪರ್ಧಾ ಆಯೋಗವು ವಿಧಿಸಿತ್ತು.

ಏನಿದು ಭಾರತೀಯ ಸ್ಪರ್ಧಾ ಆಯೋಗ?
2002ರ ಸ್ಪರ್ಧಾ ಕಾಯ್ದೆ ಜಾರಿಗೊಳಿಸಲು ಬದ್ಧವಾಗಿರುವ ಭಾರತೀಯ ಸರಕಾರದ ಭಾಗವಾಗಿರುವ ಭಾರತೀಯ ಸ್ಪರ್ಧಾ ಆಯೋಗವು 2003 ಅಕ್ಟೋಬರ್ 14ರಂದು ಅಸ್ಥಿತ್ವಕ್ಕೆ ಬಂದಿತ್ತು. ಇದರ ಪ್ರಥಮ ಕರ್ತವ್ಯ ಏನೆಂದರೆ ದೇಶದೆಲ್ಲೆಡೆ ಬಳಕೆದಾರರ ಹಕ್ಕುಗಳಿಗೆ ಚ್ಯುತಿ ಬಾರದಂತೆ ನಿಗಾ ವಹಿಸುವುದಾಗಿದೆ. ಇದು 2009ನೇ ಇಸವಿಯಲ್ಲಿ ಸಂಪೂರ್ಣ ಕಾರ್ಯಕ್ಷಮತೆಗೆ ಬಂದಿತ್ತು.

Most Read Articles

Kannada
English summary
CCI imposes Rs 420 crore penalty on Hyundai Motor India
Story first published: Wednesday, July 29, 2015, 14:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X