ಬೆಂಗಳೂರು ಐಪಿಎಲ್ ತಂಡಕ್ಕೆ ಟಾಟಾ ಪ್ರಾಯೋಜಕತ್ವ

Written By:

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟ್ವೆಂಟಿ-20 ಟೂರ್ನಮೆಂಟ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಇದರಂತೆ ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಪ್ರಯೋಜಕತ್ವವನ್ನು ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ವಹಿಸಲಿದೆ.

2015 ಎಪ್ರಿಲ್ 08ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಮೆಂಟ್ ನಲ್ಲಿ ಬೆಂಗಳೂರು ತಂಡದ ಆಟಗಾರರ ಜೆರ್ಸಿಯ ಹೃದಯ ಭಾಗದಲ್ಲಿ ಟಾಟಾದ ನೆಚ್ಚಿನ ಕಾರು ಬೋಲ್ಟ್ ಕಾಣಿಸಿಕೊಳ್ಳಲಿದೆ. ಕಳೆದ ವರ್ಷದಿಂದಲೇ ಟಾಟಾ ಸಂಸ್ಥೆಯು ಬೆಂಗಳೂರು ತಂಡಕ್ಕೆ ಪ್ರಾಯೋಜಕತ್ವ ನೀಡುತ್ತಲೇ ಬಂದಿತ್ತು.

tata bolt

ಈ ಸಂಬಂಧ ಟಾಟಾ ಹಾಗೂ ಆರ್ ಸಿಬಿ ಸದ್ಯದಲ್ಲೇ ಅಭಿಯಾನ ಬಿಡುಗಡೆ ಮಾಡಲಿದೆ. ಇದು ಟಾಟಾ ಗ್ರಾಹಕರ ಜೊತೆಗೆ ಆರ್ ಸಿಬಿ ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲಕ್ಕೆ ಕಾರಣವಾಗುವ ನಿರೀಕ್ಷೆಯಿದೆ.

ಟಾಟಾ ಬೋಲ್ಟ್ ಮುಖ್ಯಾಂಶಗಳು:

  • ದೇಶದಲ್ಲೇ ಮೊದಲ ಬಾರಿಗೆ ಮಲ್ಟಿ ಡ್ರೈವ್ ಆಯ್ಕೆ (ಸ್ಪೋರ್ಟ್, ಎಕೊ, ಸಿಟಿ),
  • ಹೊಸತಾದ 1.2 ಲೀಟರ್ ಎಂಪಿಎಫ್‌ಐ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್,
  • ಹೊಸ ಪೀಳಿಗೆಯ ಸುರಕ್ಷತಾ ಕ್ರಮಗಳು
  • ಬಾಷ್ 9ನೇ ಜನಾಂಗದ ಎಬಿಎಸ್ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ),
  • ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ (ಸಿಎಸ್‌ಸಿ),
  • ಮುಂಭಾಗದಲ್ಲಿ ಡ್ಯುಯಲ್ ಏರ್ ಬ್ಯಾಗ್,
  • ಹರ್ಮಾನ್ ಸಂಸ್ಥೆಯ ಅತ್ಯಾಧುನಿಕ ತಂತ್ರಜ್ಞಾನದ ಕನೆಕ್ಟ್ ನೆಕ್ಸ್ಟ್ ಇನ್ಫೋಟೈನ್ಮೆಂಟ್ ಸಿಸ್ಟಂ
English summary
Tata Motors’ Bolt will be principal sponsor for Royal Challengers Bangalore in the eighth season of Indian Premier League
Please Wait while comments are loading...

Latest Photos