ಕಿ ಕೀ ಹಾರ್ನ್ ಮಾಡಿ ಬರುತ್ತಾ ಕಿಯಾ ಕಾರು?
ದಕ್ಷಿಣ ಕೊರಿಯಾದ ಮಗದೊಂದು ಆಕರ್ಷಕ ಕಾರು ಬ್ರಾಂಡ್ ಭಾರತದತ್ತ ತನ್ನ ದೃಷ್ಟಿ ನೆಟ್ಟಿದೆ. ಈ ಬಾರಿ ಕಿಯಾ ಮೋಟಾರ್ಸ್ ದೇಶದಲ್ಲಿ ನೂತನ ಘಟಕ ತೆರೆಯುವ ಯೋಜನೆ ಹೊಂದಿದೆ.
ಕಿಯಾ ಭಾರತ ಪ್ರವೇಶದ ವರದಿ ಬಂದ ಬೆನ್ನಲ್ಲೇ ನಿರೀಕ್ಷೆಯೂ ಹೆಚ್ಚಾಗಲು ಕಾರಣಾಗಿದೆ. ಏಕೆಂದರೆ ಭಾರತದಲ್ಲೇ ಈಗಾಗಲೇ ತನ್ನ ಭದ್ರ ತಳಹದಿ ಕಂಡಿರುವ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ ಮೋಟಾರು ಸಂಸ್ಥೆಯು ಕಿಯಾ ಮಾಲಿಕತ್ವವನ್ನು ಹೊಂದಿದೆ.

ಇದು ಭಾರತಕ್ಕೆ ಕಿಯಾ ಪ್ರವೇಶದ ಸಾಧ್ಯತೆಯನ್ನು ಹೆಚ್ಚಿಸಿದೆ. ಮುಂಬರುವ ವರ್ಷಗಳಲ್ಲಿ ಭಾರತದ ಆಗಾಧ ಮಾರುಕಟ್ಟೆ ಸಾಮರ್ಥ್ಯವನ್ನು ಮನಗಂಡಿರುವ ವಿಶ್ವದ ಮುಖ್ಯ ವಾಹನ ತಯಾರಿಕ ಸಂಸ್ಥೆಗಳು ಈಗಾಗಲೇ ದೇಶದತ್ತ ಮುಖ ಮಾಡಿದೆ.
ಇತಿಹಾಸವನ್ನು ಗಮನಿಸಿದಾಗ 1944ನೇ ಇಸವಿಯಲ್ಲೇ ಅಸ್ತಿತ್ವಕ್ಕೆ ಬಂದಿರುವ ಕಿಯಾ ಮೋಟಾರ್ಸ್, ಗುಣಮಟ್ಟದ ಕಾರುಗಳನ್ನು ನಿರ್ಮಾಣ ಮಾಡುವುದರಲ್ಲಿ ಹೆಸರು ಮಾಡಿದೆ. ಇತ್ತೀಚೆಗಷ್ಟೇ ಚೀನಾ ಹಾಗೂ ರಷ್ಯಾ ಪ್ರವೇಶ ಪಡೆದಿರುವ ಕಿಯಾ ಈಗ ತನ್ನ ದೃಷ್ಟಿಯನ್ನು ಭಾರತದತ್ತ ನೆಟ್ಟಿದೆ.

ಹಾಗಿದ್ದರೂ ಕಿಯಾ ಆಡಳಿತ ವರ್ಗದಿಂದ ಇನ್ನಷ್ಟೇ ಅಧಿಕೃತ ಘೋಷಣೆ ಹೊರಬೀಳಬೇಕಾಗಿದೆ. ಆದರೆ ಕಿಯಾ ಮಾಲಿಕತ್ವವನ್ನು ಹ್ಯುಂಡೈ ಹೊಂದಿರುವ ಹಿನ್ನೆಲೆಯಲ್ಲಿ ಇಂತಹದೊಂದು ಬೆಳವಣಿಗೆ ಕಂಡಲ್ಲಿ ಅಚ್ಚರಿಪಡಬೇಕಾಗಿಲ್ಲ.


Click it and Unblock the Notifications








