ಮಹೀಂದ್ರದಲ್ಲಿ ಲೀನವಾಗಲಿರುವ ಇಟಲಿಯ ಐಕಾನಿಕ್ ಡಿಸೈನ್ ಸಂಸ್ಥೆ
ಐಕಾನಿಕ್ ವಿನ್ಯಾಸ ಸಂಸ್ಥೆಯೊಂದು ಸದ್ಯದಲ್ಲೇ ದೇಶದ ಮುಂಚೂಣಿಯ ವಾಹನ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರದಲ್ಲಿ ಲೀನವಾಗಲಿದೆ. ಅದುವೇ ಇಟಲಿಯ ಐಕಾನಿಕ್ ಡಿಸೈನ್ ಬ್ರಾಂಡ್ ಪಿನಿನ್ ಫರಿನಾ.
ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಇದೇ ಮುಂದಿನ ಮೇ ತಿಂಗಳಲ್ಲಿ ಇದಕ್ಕೆ ಮುಹೂರ್ತ ಸಿದ್ಧವಾಗಲಿದೆ. ನಿಮಗಿದು ಗೊತ್ತೇ? ಫೆರಾರಿ, ಆಲ್ಪಾ ರೊಮಿಯೋ, ಹೋಂಡಾಗಳಂತಹ ಪ್ರಖ್ಯಾತ ಸಂಸ್ಥೆಗಳೊಂದಿಗೆ ವಿನ್ಯಾಸ ಹಂಚಿಕೊಂಡಿರುವ ಪಿನಿನ್ ಫರಿನಾ ಜಾಗತಿಕ ಮಟ್ಟದಲ್ಲಿ ಭಾರಿ ಹೆಸರು ಮಾಡಿದೆ.

ಹಾಗಾಗಿ ಮಹೀಂದ್ರ ಪಾಲಿಗಿದು ದೊಡ್ಡ ಸಾಧನೆಯಾಗಿರಲಿದೆ. ಭವಿಷ್ಯದಲ್ಲಿ ಆಗಮನವಾಗಲಿರುವ ಮಹೀಂದ್ರ ವಾಹನಗಳಲ್ಲಿ ಇದು ಪ್ರತಿಫಲಿಸಲಿದೆ ಎಂಬುದರಲ್ಲಿ ಸಂಶಯವೇ ಬೇಡ. ಇತರ ಪ್ರಮುಖ ವಾಹನ ತಯಾರಕ ಸಂಸ್ಥೆಗಳಿಗೆ ವಿನ್ಯಾಸ ಹಂಚಿಕೊಳ್ಳುತ್ತಿದ್ದರೂ ಪಿನಿನ್ ಫರಿನಾ ನಷ್ಟದಲ್ಲಿ ಓಡುತ್ತಿದೆ. ಅಲ್ಲದೆ ಸಹಾಯದ ನಿರೀಕ್ಷೆಯಲ್ಲಿದೆ.
ಈಗಗಾಲೇ ದಕ್ಷಿಣ ಕೊರಿಯಾದ ಸ್ಯಾಂಗ್ಯೊಂಗ್ ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ಎಸ್ ಯುವಿ ದೈತ್ಯ ಮಹೀಂದ್ರ ಇಟಲಿಯ ಐಕಾನಿಕ್ ಪ್ಯೂಜೊ ದ್ವಿಚಕ್ರ ಬ್ರಾಂಡ್ ಅನ್ನು ತನ್ನದಾಗಿಸಿಕೊಂಡಿತ್ತು. ಈಗ ಪಿನಿನ್ ಫರಿನಾ ಮೇಲೆ ತನ್ನ ಬಲೆ ಬೀಸಿದೆ.


Click it and Unblock the Notifications








