ಮಹೀಂದ್ರ ಜೀತೋ ಮಿನಿ ಟ್ರಕ್ ಭರ್ಜರಿ ಬಿಡುಗಡೆ

By Nagaraja

ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ಎಲ್ಲ ಹೊಸತನದಿಂದ ಜೀತೋ ಮಿನಿ ಟ್ರಕ್ ಪರಿಚಯಿಸಿದೆ.

ಇದರ ಬೆಂಗಳೂರು ಪ್ರಾರಂಭಿಕ ಬೆಲೆ 2.40 ಲಕ್ಷ ರು.ಗಳಾಗಿರಲಿದೆ. ಇದು ಸಣ್ಣ ವಾಣಿಜ್ಯ ವಿಭಾಗದ ಮಾರಾಟದಲ್ಲಿ ಹೊಸ ಅಧ್ಯಾಯ ತೆರಯುವ ನಿರೀಕ್ಷೆ ಹೊಂದಿದೆ.

ಮಹೀಂದ್ರ ಜೀತೋ ಮಿನಿ ಟ್ರಕ್ ಭರ್ಜರಿ ಬಿಡುಗಡೆ

ವಾಣಿಜ್ಯ ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶಿಷ್ಟತೆಯೊಂದಿಗೆ ಗುರುತಿಸಿಕೊಳ್ಳಲಿರುವ ಜೀತೋ, ಎಸ್, ಎಲ್ ಹಾಗೂ ಎಕ್ಸ್ ಶ್ರೇಣಿಗಳಲ್ಲಿ ಒಟ್ಟು ಎಂಟು ವೆರಿಯಂಟ್ ಗಳನ್ನು ಪರಿಚಯಿಸಿದೆ. ಇದು 3 ವಿಧದ ಆಯಾಮ, 2 ವಿಧದ ಎಂಜಿನ್ ಪವರ್ ಹಾಗೂ 2 ಭಾರ ಹೊರುವ ವಿಧಗಳಲ್ಲಿ ಲಭ್ಯವಿರಲಿದೆ.

ಮಹೀಂದ್ರ ಜೀತೋ ಮಿನಿ ಟ್ರಕ್ ಭರ್ಜರಿ ಬಿಡುಗಡೆ

ತನ್ನ ಸಮೀಪದ ಸ್ಪರ್ಧಿಗಿಂತಲೂ ಶೇಕಡಾ 30ರಷ್ಟು ಹೆಚ್ಚು ಗಳಿಸುವ ಅವಕಾಶ ಹೊಂದಿರುವ ಜೀತೋ, ಎಸ್6-11 ಹಾಗೂ ಎಲ್6-11 ಮಾದರಿಗಳು ಪ್ರತಿ ಲೀಟರ್ ಗೆ ಗರಿಷ್ಠ 37.6 ಕೀ.ಮೀ. ಮೈಲೇಜ್ ನೀಡಲಿದೆ.

ಮಹೀಂದ್ರ ಜೀತೋ ಮಿನಿ ಟ್ರಕ್ ಭರ್ಜರಿ ಬಿಡುಗಡೆ

ಇನ್ನು ಹೋಲಿಕೆಯಿಲ್ಲದ ಸುರಕ್ಷತೆಯನ್ನು ಕಾಪಾಡಿಕೊಂಡಿರುವ ಜೀತೋ ಸೆಮಿ ಫಾರ್ವರ್ಡ್ ವಿನ್ಯಾಸ, ದೃಢವಾದ ಕವಚ ಹಾಗೂ ಉನ್ನತ ಗುಣಮಟ್ಟದ ವಿಸ್ತಾರವಾದ ಚಕ್ರಗಳನ್ನು ಹೊಂದಿದೆ. ಅಂತಿಮವಾಗಿ ಎರಡು ವರ್ಷ/40,000 ಕೀ.ಮೀ.ಗಳ ವಾರಂಟಿ ಸೌಲಭ್ಯವೂ ಲಭ್ಯವಿರಲಿದೆ.

ಮಹೀಂದ್ರ ಜೀತೋ ಮಿನಿ ಟ್ರಕ್ ಭರ್ಜರಿ ಬಿಡುಗಡೆ

ಜೀತೋ ವಾಹನದಲ್ಲಿ ಎಂ-ಡ್ಯುರಾ ಎಂಜಿನ್, ಸಂಪೂರ್ಣ ನೂತನ ಡೈರಕ್ಟ್ ಇಂಜೆಕ್ಷನ್ (ಡಿಐ) ಡೀಸೆಲ್ ಎಂಜಿನ್ ಅನ್ನು ಆಳವಡಿಸಲಾಗಿದ್ದು, ಅತ್ಯುತ್ತಮ ಇಂಧನ ಕ್ಷಮತೆ ಮತ್ತು ನಿರ್ವಹಣೆಯ ದೃಷ್ಟಿಯಲ್ಲಿ ವಿನ್ಯಾಸ ಮಾಡಲಾಗಿದೆ.

ಎಸ್6-11

ಎಸ್6-11

ಬೆಲೆ: 2.4 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಸಾಮರ್ಥ್ಯ - 600 ಕೆ.ಜಿ

ಶಕ್ತಿ - 11 ಅಶ್ವಶಕ್ತಿ (8.2 ಕೆಡಬ್ಲ್ಯು)

ಆಯಾಮ: 1630 ಎಂಎಂ (5.5 ಅಡಿ)

ವರ್ಗ - ಔಷಧ ಮತ್ತು ಸರಕು ಸಾಗಣೆ

ಯಾವುದಕ್ಕೆ ಸೂಕ್ತ - ಹಗುರ ಭಾರ

ಎಸ್6-16

ಎಸ್6-16

ಬೆಲೆ: 2.50 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಸಾಮರ್ಥ್ಯ - 600 ಕೆ.ಜಿ

ಶಕ್ತಿ - 16 ಅಶ್ವಶಕ್ತಿ (11.9 ಕೆಡಬ್ಲ್ಯು)

ಆಯಾಮ: 1630 ಎಂಎಂ (5.5 ಅಡಿ)

ವರ್ಗ - ಕೊರಿಯರ್, ಇ ಕಾಮರ್ಸ್

ಯಾವುದಕ್ಕೆ ಸೂಕ್ತ - ಹಗುರ ಭಾರ, ತ್ವರಿತ ಸಾಗಾಣೆ

ಎಲ್6-11

ಎಲ್6-11

ಬೆಲೆ: 2.40 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಸಾಮರ್ಥ್ಯ - 600 ಕೆ.ಜಿ

ಶಕ್ತಿ - 11 ಅಶ್ವಶಕ್ತಿ (8.2 ಕೆಡಬ್ಲ್ಯು)

ಆಯಾಮ: 1780 ಎಂಎಂ (6 ಅಡಿ)

ವರ್ಗ - ಬೇಕರಿ ಪೌಲ್ಟ್ರಿ

ಯಾವುದಕ್ಕೆ ಸೂಕ್ತ - ಹಗುರ ಭಾರ, ಅಧಿಕ ಸರಕು

ಎಲ್6-16

ಎಲ್6-16

ಬೆಲೆ: 2.65 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಸಾಮರ್ಥ್ಯ - 600 ಕೆ.ಜಿ

ಶಕ್ತಿ - 11.9 ಅಶ್ವಶಕ್ತಿ (11.9 ಕೆಡಬ್ಲ್ಯು)

ಆಯಾಮ: 1780 ಎಂಎಂ (6 ಅಡಿ)

ವರ್ಗ - ನಿರ್ಮಾಣ ಸರಕು, ಆಟೋ ಬಿಡಿಭಾಗ

ಯಾವುದಕ್ಕೆ ಸೂಕ್ತ - ಅಧಿಕ ಸರಕು ತ್ವರಿತ ವಿಲೇವಾರಿ

ಎಲ್7-11

ಎಲ್7-11

ಬೆಲೆ: 2.65 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಸಾಮರ್ಥ್ಯ - 700 ಕೆ.ಜಿ

ಶಕ್ತಿ - 11 ಅಶ್ವಶಕ್ತಿ (8.2 ಕೆಡಬ್ಲ್ಯು)

ಆಯಾಮ: 1780 ಎಂಎಂ (6 ಅಡಿ)

ವರ್ಗ - ಪೇಪರ್ ಉತ್ಪನ್ನಗಳು, ಮೊಬೈಲ್ ಆಹಾರ

ಯಾವುದಕ್ಕೆ ಸೂಕ್ತ - ಅಧಿಕ ಸರಕು

 ಎಲ್7-16

ಎಲ್7-16

ಬೆಲೆ: 2.76 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಸಾಮರ್ಥ್ಯ - 700 ಕೆ.ಜಿ

ಶಕ್ತಿ - 11 ಅಶ್ವಶಕ್ತಿ (11.9 ಕೆಡಬ್ಲ್ಯು)

ಆಯಾಮ: 1780 ಎಂಎಂ (6 ಅಡಿ)

ವರ್ಗ - ಸಿಮೆಂಟ್, ಸಾಫ್ಟ್ ಸರಕು

ಯಾವುದಕ್ಕೆ ಸೂಕ್ತ - ಅಧಿಕ ಸರಕು, ತ್ವರಿತ ವಿಲೇವಾರಿ

ಎಕ್ಸ್7-11

ಎಕ್ಸ್7-11

ಬೆಲೆ: 2.76 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಸಾಮರ್ಥ್ಯ - 700 ಕೆ.ಜಿ

ಶಕ್ತಿ - 11 ಅಶ್ವಶಕ್ತಿ (8.2 ಕೆಡಬ್ಲ್ಯು)

ಆಯಾಮ: 1930 ಎಂಎಂ (6.5 ಅಡಿ)

ವರ್ಗ - ಪ್ಲಾಸ್ಟಿಕ್ ಉತ್ಪನ್ನ, ಎಫ್ ಎಂಸಿಜಿ ಉತ್ಪನ್ನ

ಯಾವುದಕ್ಕೆ ಸೂಕ್ತ - ಅಧಿಕ ಸರಕು, ತ್ವರಿತ ವಿಲೇವಾರಿ

ಎಕ್ಸ್7-16

ಎಕ್ಸ್7-16

ಬೆಲೆ: 2.86 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಸಾಮರ್ಥ್ಯ - 700 ಕೆ.ಜಿ

ಶಕ್ತಿ - 11 ಅಶ್ವಶಕ್ತಿ (11.9 ಕೆಡಬ್ಲ್ಯು)

ಆಯಾಮ: 1930 ಎಂಎಂ (6 ಅಡಿ)

ವರ್ಗ - ಗ್ಯಾಸ್ ಸಿಲಿಂಡರ್ಸ್, ಮಿನರಲ್ ವಾಟರ್

ಯಾವುದಕ್ಕೆ ಸೂಕ್ತ - ಅಧಿಕ ಸರಕು, ತ್ವರಿತ ವಿಲೇವಾರಿ

ಸ್ಟೈಲಿಷ್ ಲುಕ್

ಸ್ಟೈಲಿಷ್ ಲುಕ್

  • ಸುಂದರ ಡಿಸೈನ್
  • ವಿಭಿನ್ನ ವ್ಯಕ್ತಿತ್ವ ನೀಡುವ ಆಕರ್ಷಕ ಗ್ರಿಲ್,
  • ಆಧುನಿಕ ಡ್ಯಾಶ್ ಬೋರ್ಡ್,
  • ಆಕರ್ಷಕ ಡ್ಯುಯಲ್ ಟೋನ್ ಒಳಮೈ,
  • 5 ಮೋಹಕ ಬಣ್ಣಗಳು
  • ಕಾರಿನಂತಹ ಆರಾಮ

    ಕಾರಿನಂತಹ ಆರಾಮ

    • ಹೆಚ್ಚು ಹೆಡ್ ರೂಂ ಮತ್ತು ಲೆಗ್ ರೂಂ, ಯಥೇಚ್ಛ ಸ್ಥಳಾವಕಾಶ ಹೊಂದಿರುವ ಕ್ಯಾಬಿನ್,
    • ವಾಹನವನ್ನು ಏರುವುದು ಇಳಿಯುವುದು ತುಂಬಾ ಸುಲಭ,
    • ಆರಾಮದಾಯಕ ಸೀಟು, ಆಯಾಸರಹಿತ ದೀರ್ಘ ಪಯಣ,
    • ಕಾರಿನಂತಹ ಸುಲಭ ಗಿಯರ್ ಶಿಫ್ಟ್
    • ಸಾಟಿಯಿಲ್ಲದ ಸುರಕ್ಷೆ

      ಸಾಟಿಯಿಲ್ಲದ ಸುರಕ್ಷೆ

      • ಸೆಮಿ ಫಾರ್ವರ್ಡ್ ಡಿಸೈನ್, ಹೆಚ್ಚು ಸುರಕ್ಷೆ
      • ವಿಶಾಲವಾದ ವಿಂಡ್ ಶೀಲ್ಡ್, ಮುಂದಿನ ನೋಟ ಸ್ಪಷ್ಟ,
      • ಗಟ್ಟಿಮುಟ್ಟಾದ ಬಾಡಿ, ಶಕ್ತಿಶಾಲಿ ಚಾಸೀ,
      • ದೊಡ್ಡ ವೀಲ್ ಬೇಸ್, ಇದರಿಂತ ಸಂತುಲನೆ ದೊರೆಯುತ್ತದೆ
      • ನಗರದ ಅತ್ಯುತ್ತಮ ಮಿನಿಟ್ರಕ್

        ನಗರದ ಅತ್ಯುತ್ತಮ ಮಿನಿಟ್ರಕ್

        • ನಗರದ ಓಣಿಗಳಲ್ಲಿ ಸುಲಭವಾಗಿ ಸಾಗುತ್ತದೆ,
        • ಸ್ಟೀರಿಂಗ್ ತುಂಬಾ ಸುಲಭವಾಗಿ ತಿರುಗುತ್ತದೆ (ಪವರ್ ಸ್ಟೀರಿಂಗ್ ನಂತೆ),
        • ಅಮೋಘ ಪಿಕಪ್ ಮತ್ತು ವೇಗವರ್ಧನೆ,
        • ಕಾಂಪಾಕ್ಟ್ ಆಕಾರ, ಕಡಿಮೆ ಸ್ಥಳದಲ್ಲಿ ಸುಲಭವಾಗಿ ಪಾರ್ಕಿಂಗ್
        • ಉತ್ತಮ ಆದಾಯ

          ಉತ್ತಮ ಆದಾಯ

          • 30% ದ ವರೆಗೆ ಅದಿಕ ಆದಾಯ,
          • ಶ್ರೇಣಿಯಲ್ಲಿ ಅತ್ಯುತ್ತಮ ಮೈಲೇಜ್ 37.6 km/l,
          • ನಿರ್ವಹಣೆ ವೆಚ್ಚ ಕಡಿಮೆ,
          • ಶ್ರೇಣಿಯಲ್ಲೇ ಅತ್ಯುತ್ತಮ ವಾರಂಟಿ - 2 ವರ್ಷ ಅಥವಾ 40,000 ಕೀ.ಮೀ.
          • ಅತ್ಯುತ್ತಮ ನಿರ್ವಹಣೆ

            ಅತ್ಯುತ್ತಮ ನಿರ್ವಹಣೆ

            • ಹೆಚ್ಚು ಪವರ್ ಮತ್ತು ಟಾರ್ಕ್, ಇದರಿಂದ ಭಾರವಾದ ಲೋಡ್ ಸುಲಭವಾಗಿ ಹೊತ್ತೊಯ್ಯಬಹುದು.
            • ತನ್ನ ಶ್ರೇಣಿಯಲ್ಲೇ ಅತ್ಯುತ್ತಮ ಪಿಕಪ್,
            • ವಾಹನ ನಡೆಸುವ ಅಮೋಘ ಅನುಭವ,
            • ಲೋಡ್ ನೊಂದಿಗೆ ಏರು ಮಾರ್ಗದಲ್ಲಿ ಸಾಗುವ ಉತ್ತಮ ಕ್ಷಮತೆ

More from DriveSpark

Article Published On: Wednesday, June 24, 2015, 15:32 [IST]
English summary
Mahindra Jeeto Launched in Bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+