ಹೊಸ ಸ್ವರೂಪದೊಂದಿಗೆ ಬರಲಿರುವ ಮಹೀಂದ್ರ ಕ್ವಾಂಟೊ
ಹೊಸ ಸ್ಕಾರ್ಪಿಯೊ ಹಾಗೂ ಎಕ್ಸ್‌ಯುವಿ500 ಮಾದರಿಗಳನ್ನು ಪರಿಚಯಿಸಿರುವ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಸಂಸ್ಥೆಯು ಸದ್ಯದಲ್ಲೇ ಹೊಸ ಸ್ವರೂಪದ ಕ್ವಾಂಟೊ ಬಿಡುಗಡೆ ಮಾಡಲಿದೆ.
ಹೊಸ ಮಾದರಿಗಳೊಂದಿಗೆ ಈಗಿರುವ ಕಾರುಗಳನ್ನು ಪರಿಷ್ಕೃತಗೊಳಿಸುವುದು ಸಂಸ್ಥೆಯ ಇರಾದೆಯಾಗಿದೆ. ಈ ಮೂಖಾಂತರ ಗರಿಷ್ಠ ಮಾರಾಟವನ್ನು ಗುರಿ ಮಾಡಲಾಗುತ್ತದೆ.

ಉಪಯುಕ್ತ ವಾಹನಗಳ ವಿಭಾಗದಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಕಾಪಾಡಿಕೊಂಡಿರುವ ಮಹೀಂದ್ರ, ಕ್ವಾಂಟೊ ಮುಖಾಂತರ ಮತ್ತಷ್ಟು ಜನಪ್ರಿಯತೆಯನ್ನು ಕಾಪಾಡಿಕೊಳ್ಳಲಿದೆ.
ಪ್ರಸ್ತುತ ಟೆಸ್ಟಿಂಗ್ ಹಂತದಲ್ಲಿರುವ ಮಹೀಂದ್ರ ಕ್ವಾಂಟೊ ಯಾವುದೇ ವೇಳೆಯಾದರೂ ಬಿಡುಗಡೆಯಾಗಲಿದೆ. ಕಾರಿನ ಮುಂಭಾಗದಲ್ಲಿ ಹೆಡ್ ಲ್ಯಾಂಪ್, ಬಂಪರ್ ಹಾಗೂ ಹೊಸ ಗ್ರಿಲ್ ಪಡೆದುಕೊಳ್ಳಲಿದೆ. ಅದೇ ರೀತಿ ಒಳಮೈಯಲ್ಲೂ ಹೆಚ್ಚಿನ ವೈಶಿಷ್ಟ್ಯವನ್ನು ನಿರೀಕ್ಷೆ ಮಾಡಬಹುದಾಗಿದೆ.

ಇದರೊಂದಿಗೆ ಹೊಸ ಎಂಜಿನ್ ಪರಿಚಯಿಸುವ ಸಾಧ್ಯತೆಯಿದ್ದು, ಹೆಚ್ಚು ಪ್ರೀಮಿಯಂ ಚಾಲನಾ ಅನುಭವಕ್ಕೆ ಕಾರಣವಾಗಲಿದೆ.


Click it and Unblock the Notifications








