ಮಹೀಂದ್ರ ಹೊಸ ಎಸ್‌ಯುವಿ 'ಎಕ್ಸ್‌ಯುವಿ 100' ನಾಮಕರಣ ಸಾಧ್ಯತೆ

By Nagaraja

ಮುಂಬರುವ ಸೆಪ್ಟೆಂಬರ್ 10ರಂದು ಬಹುನಿರೀಕ್ಷಿತ ಕಾಂಪಾಕ್ಟ್ ಎಸ್‌ಯುವಿ ಟಿಯುವಿ300 ಬಿಡುಗಡೆ ಸಿದ್ಧತೆಯಲ್ಲಿರುವ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಮಗದೊಂದು ಕ್ರೀಡಾ ಬಳಕೆಯ ವಾಹನದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.

ಎಸ್101 ಕೋಡ್ ಪಡೆದುಕೊಂಡಿರುವ ಮಹೀಂದ್ರ ನೂತನ ಎಸ್‌ಯುವಿ 'ಎಕ್ಸ್‌ಯುವಿ 100' ಎಂದು ಹೆಸರಿಸಿಕೊಳ್ಳುವ ಸಾಧ್ಯತೆಯಿದೆ. ಪ್ರಸ್ತುತ ಸಣ್ಣ ಎಸ್‌ಯುವಿ ಸಹ ವರ್ಷಾಂತ್ಯದೊಳಗೆ ಬಿಡುಗಡೆಯಾಗಲಿದೆ.

ಮಹೀಂದ್ರ ಎಕ್ಸ್‌ಯುವಿ100

ನಾಮಕರಣದಲ್ಲಿ ಅಕ್ಷರ ಹಾಗೂ ಅಂಕಿಗಳ ಮಿಶ್ರಣವು ಮಹೀಂದ್ರ ಎಸ್‌ಯುವಿಗಳ ವಿಶೇಷತೆಯಾಗಿದೆ. ಈ ಹಿಂದೆ ಎಕ್ಸ್‌ಯುವಿ500 ಹಾಗೂ ಮುಂಬರುವ ಟಿಯುವಿ300 ಮಾದರಿಗಳಲ್ಲೂ ಇದನ್ನೇ ಉಳಿಸಿಕೊಂಡಿದೆ.

ಈಗಾಗಲೇ ಹಲವು ಬಾರಿ ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿರುವ ಮಹೀಂದ್ರ ಎಸ್101, 3+3 ಆಸನ ವ್ಯವಸ್ಥೆಯನ್ನು ಪಡೆದುಕೊಳ್ಳುವುದು ಬಹುತೇಕ ಖಚಿತವೆನಿಸಿದೆ. ಅಲ್ಲದೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ನಾಲ್ಕು ಏರ್ ಬ್ಯಾಗ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರೋ (ಇಎಸ್‌ಪಿ) ವ್ಯವಸ್ಥೆಗಳು ಮತ್ತಷ್ಟು ವಿಶಿಷ್ಟವಾಗಿಸಲಿದೆ.

ನೂತನ ಎಕ್ಸ್‌‍ಯುವಿ100 ಕ್ರಾಸೋವರ್ ವಿಭಾಗದಲ್ಲಿ ಗುರುತಿಸಿಕೊಳ್ಳಲಿದೆ. ಈ ಸಂಬಂಧ ಮಹೀಂದ್ರ ಎಕ್ಸ್‌ಯುವಿ100 ಡಾಟ್ ಕಾಮ್ ವೆಬ್ ಸೈಟ್ ಬುಕ್ ಮಾಡಿಕೊಂಡಿರುವುದರ ಬಗ್ಗೆಯೂ ಮಾಹಿತಿಯಿದೆ.

More from DriveSpark

Article Published On: Monday, September 7, 2015, 13:01 [IST]
English summary
Mahindra S101 Mini SUV Could Be Named XUV100
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+