ಮಹೀಂದ್ರ ಎಸ್101 ರಹಸ್ಯ ಚಿತ್ರಗಳು ಲೀಕ್

By Nagaraja

ದೇಶದ ಮುಂಚೂಣಿಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಮಗದೊಂದು ಆಕರ್ಷಕ ಕಾರನ್ನು ಬಿಡುಗಡೆ ಮಾಡಲಿರುವ ಬಗ್ಗೆ ನಾವೀಗಲೇ ವರದಿ ಮಾಡಿರುತ್ತೇವೆ. ಈ ನಡುವೆ ನೂತನ ಕಾರಿನ ಜಾಹೀರಾತು ಚಿತ್ರಿಕರಣದ ವೇಳೆ ರಹಸ್ಯ ಚಿತ್ರಗಳನ್ನು ಸೆರೆ ಹಿಡಿಯುವುದರಲ್ಲಿ ಇಂಡಿಯನ್ ಆಟೋಸ್‌ಬ್ಲಾಗ್ ಯಶ ಕಂಡಿದೆ.

Also Read: ನಿರೀಕ್ಷೆಗೂ ಮೊದಲೇ ಮಹೀಂದ್ರ ಹೊಸ ಕಾರು ರಸ್ತೆಗೆ ?

ಈ ಆಕರ್ಷಕ ಚಿತ್ರಗಳನ್ನು ವಾಹನ ಪ್ರೇಮಿಗಳಿಗಾಗಿ ಡ್ರೈವ್ ಸ್ಪಾರ್ಕ್ ಹಂಚಿಕೊಳ್ಳುತ್ತಿದೆ. ನಿಮ್ಮ ಮಾಹಿತಿಗಾಗಿ ಎಸ್101 ಎಂಬ ಕೋಡ್ ಪಡೆದುಕೊಂಡಿರುವ ಈ ಕಾರು ಮಹೀಂದ್ರದ ಪ್ರಸಿದ್ಧ ಎಕ್ಸ್‌ಯುವಿ500 ಕಾರಿನ ಸಣ್ಣ ರೂಪವಾಗಿರಲಿದ್ದು, ಎಕ್ಸ್‌ಯುವಿ100 ಎಂದು ಹೆಸರಿಸಿಕೊಳ್ಳುವ ಸಾಧ್ಯತೆಯಿದೆ.

ಮಹೀಂದ್ರ ಎಸ್101 ರಹಸ್ಯ ಚಿತ್ರಗಳು ಲೀಕ್

2016 ಜನವರಿ ತಿಂಗಳಲ್ಲಿ ಬಿಡುಗಡೆ ನಿರೀಕ್ಷೆ ಹೊಂದಿರುವ ಮಹೀಂದ್ರ ಎಸ್101 ಕಾರಿನ ಪ್ರಚಾರಾರ್ಥವಾಗಿ ಜಾಹೀರಾತು ಚಿತ್ರಿಕರಣದ ವೇಳೆ ಆಕರ್ಷಕ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.

ಮಹೀಂದ್ರ ಎಸ್101 ರಹಸ್ಯ ಚಿತ್ರಗಳು ಲೀಕ್

ಕ್ರಾಸೋವರ್ ಶೈಲಿಯಿಂದ ಸ್ಪೂರ್ತಿ ಪಡೆದಿರುವ ವಿನ್ಯಾಸ ಹೊಂದಿರುವ ನೂತನ ಎಕ್ಸ್‌ಯುವಿ100, ಮಾರುತಿ ವ್ಯಾಗನಾರ್ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಮಹೀಂದ್ರ ಎಸ್101 ರಹಸ್ಯ ಚಿತ್ರಗಳು ಲೀಕ್

ಅಲಾಯ್ ವೀಲ್, ರೂಫ್ ರೈಲ್, ರಿಯರ್ ವೈಪರ್, ವಾಶರ್, ಡೋರ್ ಹ್ಯಾಂಡಲ್, ಸ್ವಭಾವ ರೇಖೆ, ಹಿಂದುಗಡೆ ಬ್ಲ್ಯಾಕ್ ಬಂಪರ್ ಸೇರಿದಂತೆ ಒಟ್ಟಾರೆ ವಿನ್ಯಾಸವು ಪರಿಣಾಮಕಾರಿಯೆನಿಸಿದೆ.

ಮಹೀಂದ್ರ ಎಸ್101 ರಹಸ್ಯ ಚಿತ್ರಗಳು ಲೀಕ್

1.2 ಪೆಟ್ರೋಲ್ ಹಾಗೂ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗುವ ನಿರೀಕ್ಷೆ ಹೊಂದಿರುವ ಮಹೀಂದ್ರ ಎಕ್ಸ್‌ಯುವಿ100, 5 ಸ್ಪೀಡ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳಲ್ಲಿ ಲಭ್ಯವಾಗಲಿದೆ.

ಮಹೀಂದ್ರ ಎಸ್101 ರಹಸ್ಯ ಚಿತ್ರಗಳು ಲೀಕ್

ಒಟ್ಟಿನಲ್ಲಿ ಟಿಯುವಿ300 ಯಶಸ್ಸಿನ ಬಳಿಕ ಮಗದೊಂದು ಆಕರ್ಷಕ ಕಾರಿನ ಬಿಡುಗಡೆಗೆ ಮಹೀಂದ್ರ ಮುಂದಾಗುತ್ತಿದ್ದು, ಈ ಬಗ್ಗೆ ಅನಿಸಿಕೆಗಳನ್ನು ನಮ್ಮ ಜೊತೆ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯದಿರಿ.

ಇವನ್ನೂ ಓದಿ

ಆನಂದ್ ಮಹೀಂದ್ರ ಅವರ ಆರ್ಮಡ್ ಬಾಡಿ ಕಿಟ್ ಗಾಡಿ ನೋಡಿದ್ರಾ?

ಚಿತ್ರ ಕೃಪೆ: ಇಂಡಿಯನ್ ಆಟೋಸ್ ಬ್ಲಾಗ್

More from DriveSpark

Article Published On: Wednesday, December 2, 2015, 14:26 [IST]
English summary
Mahindra S101 Spied During Ad Shoot In Mumbai Sans Camo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+