ಮಹೀಂದ್ರ ಮಿನಿ ಎಸ್‌ಯುವಿ ಎಕ್ಸ್‌ಕ್ಲೂಸಿವ್ ಟೀಸರ್ ಚಿತ್ರ ಬಹಿರಂಗ
ದೇಶದ ಮುಂಚೂಣಿಯ ಸಂಸ್ಥೆಯಾಗಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಸಂಸ್ಥೆಯು ಅತಿ ನೂತನ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ. ಇದಕ್ಕೆ ಸಂಬಂಧಪಟ್ಟಂತೆ ಎಕ್ಸ್ ಕ್ಲೂಸಿವ್ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
ಇದು ಟಿಯುವಿoo ಬಳಿಕ ಮಹೀಂದ್ರ ಬಿಡುಗಡೆ ಮಾಡುತ್ತಿರುವ ಉತ್ಪನ್ನವಾಗಿದ್ದು, ಅತಿ ಹೆಚ್ಚು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಅಲ್ಲದೆ ಟಿಯುವಿoo ರೀತಿಯಲ್ಲೇ ಎಸ್101 ನಾಮಕರಣಕ್ಕಾಗಿ ವಿಶೇಷ ಲೈವ್ ಪ್ರಸಾರ ಕೂಡಾ ಕಂಡುಬರಲಿದೆ.

ಪ್ರಸ್ತುತ ಎಸ್101 ಕೋಡ್ ಪಡೆದುಕೊಂಡಿರುವ ಮಹೀಂದ್ರ ನೂತನ ಕಾಂಪಾಕ್ಟ್ ಎಸ್‌ಯುವಿ ಮೊದಲ ನೋಟಕ್ಕೆ ಎಕ್ಸ್‌ಯುವಿ5OO ಚಿಕ್ಕ ಸೋದರನಂತಿದೆ. ಟೀಸರ್ ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಅದ್ಭುತ ರಸ್ತೆ ಸಾನಿಧ್ಯವನ್ನು ಕಾಪಾಡಿಕೊಂಡಿದೆ.

ನೂತನ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಕ್ಕೆ ಎಕ್ಸ್‌ಯುವಿ1OO ಅಥವಾ ಕೆಯುವಿ1OO ಹೆಸರಿಸಿಕೊಳ್ಳುವ ಸಾಧ್ಯತೆಯಿದೆ. ಇವೆಲ್ಲದಕ್ಕೂ ಡಿಸೆಂಬರ್ 18ರ ವರೆಗೆ ಕಾಯಬೇಕಾಗಿದೆ.

ನೂತನ ಕಾರಿನ ಸ್ಲಿಮ್ ಆದ ಫ್ರಂಟ್ ಗ್ರಿಲ್, ಕ್ರೀಡಾತ್ಮಕ ಹೆಡ್ ಲ್ಯಾಂಪ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ 3+3 ಆಸನ ವ್ಯವಸ್ಥೆಯನ್ನು ನೂತನ ಮಿನಿ ಎಸ್‌ಯುವಿನಲ್ಲಿ ಕೊಡಲಾಗುವುದು.

ಮಹೀಂದ್ರ ಕಾಂಪಾಕ್ಟ್ ಎಸ್‌ಯುವಿ ಆರಂಭಿಕ ಬೆಲೆ ನಾಲ್ಕು ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಅಲ್ಲದೆ ಮುಂದಿನ 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಕಾರಿನಡಿಯಲ್ಲಿ 1.2 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಇರುವ ನಿರೀಕ್ಷೆಯಿದ್ದು, 5 ಸ್ಪೀಡ್ ಜೊತೆಗೆ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ (ಎಎಂಟಿ) ಕಂಡುಬರಲಿದೆ.

ಎಲ್ಲ ಹೊಸ ಫ್ಲ್ಯಾಟ್ ಫಾರ್ಮ್ ನಲ್ಲಿ ನೂತನ ಮಹೀಂದ್ರ ಎಸ್ ಯುವಿ ನಿರ್ಮಾಣವಾಗುತ್ತಿದ್ದು, ಮೊನೊಕಾಕ್ ಸಂರಚನೆಯನ್ನು ಪಡೆಯಲಿದೆ. ಇದಕ್ಕೂ ಮೊದಲು ಎಕ್ಸ್‌ಯುವಿ500 ನಿರ್ಮಾಣದಲ್ಲೂ ಇದೇ ನೀತಿ ಅನುಸರಿಸಲಾಗಿತ್ತು.


Click it and Unblock the Notifications








