ತ.ನಾಡಿನಲ್ಲಿ ಮಹೀಂದ್ರ ಹೊಸ ಘಟಕಕ್ಕೆ 4,000 ಕೋಟಿ ರು. ಹೂಡಿಕೆ
ದೇಶದ ಎಸ್‌ಯುವಿ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ತಮಿಳನಾಡಿನಲ್ಲಿ ನೂತನ ಘಟಕವೊಂದನ್ನು ತೆರೆಯುವ ಯೋಜನೆ ಹೊಂದಿದೆ. ಅಷ್ಟೇ ಯಾಕೆ ಈ ನೂತನ ಘಟಕಕ್ಕೆ ಬರೋಬ್ಬರಿ 4,000 ಕೋಟಿ ರುಪಾಯಿ ಹೂಡಿಕೆ ಮಾಡುವ ಯೋಜನೆ ಹೊಂದಿದೆ.
ಸಂಸ್ಥೆಯ ಭವಿಷ್ಯದ ವಾಹನಗಳನ್ನು ತಮಿಳುನಾಡಿನಿಂದಲೇ ಹೊರತರುವುದು ಮಹೀಂದ್ರ ಇರಾದೆಯಾಗಿದೆ. ಇದರಂತೆ ಹಂತ ಹಂತವಾಗಿ ಮುಂದಿನ ಏಳು ವರ್ಷಗಳಲ್ಲಾಗಿ 4,000 ಕೋಟಿ ರು.ಗಳನ್ನು ಹೂಡಿಕೆ ಮಾಡಲಿದೆ.

ಯೋಜನೆಯ ಪ್ರಾಥಮಿಕ ಹಂತವಾಗಿ ಟೆಸ್ಟ್ ಟ್ರ್ಯಾಕ್ ಘಟಕವನ್ನು ತೆರೆಯಲಾಗುವುದು. ಎರಡನೇಯದ್ದು ಆಟೋಮೋಟಿವ್ ಘಟಕವಾಗಿರಲಿದೆ ಎಂದು ಆಟೋಮೊಬೈಲ್ ವಿಭಾಗದ ಕಾರ್ಯ ನಿರ್ವಾಹಕ ನಿರ್ದೇಶಕರಾಗಿರುವ ಪವನ್ ಗೋನ್ಖಾ ತಿಳಿಸಿದ್ದಾರೆ.
ಇದಕ್ಕೂ ಮೊದಲು ಮಹೀಂದ್ರದ ಹೊಸ ಘಟಕ ನಿರ್ಮಾಣಕ್ಕಾಗಿ ಕಾಂಚೀಪುರಂ ಜಿಲ್ಲೆಯ ಚೆಯ್ಯಾರ್‌ನಲ್ಲಿ 255 ಎಕರೆ ಜಾಗವನ್ನು ನೀಡುವುದಾಗಿ ತಮಿಳುನಾಡು ಸರಕಾರ ಘೋಷಿಸಿತ್ತು. ಇದು ವಾಹನ ಚಟುವಟಿಕೆಗಳ ಕೇಂದ್ರ ಸ್ಥಾನ ಪುಣೆಯ ಹೊರಗಡೆ ತೆರೆಯಲಿರುವ ಅತಿ ದೊಡ್ಡ ಘಟಕವೆನಿಸಲಿದೆ.


Click it and Unblock the Notifications








