ಮೊದಲ ತಿಂಗಳಲ್ಲೇ ಇಕೊಸ್ಪೋರ್ಟ್ ಹಿಂದಿಕ್ಕಿದ ಮಹೀಂದ್ರ ಟಿಯುವಿ300

By Nagaraja

ಬಿಡುಗಡೆಯಾಗಿರುವ ಒಂದು ತಿಂಗಳ ಅವಧಿಯೊಳಗೆ ಮಹೀಂದ್ರ ಟಿಯುವಿ300 ಕಾಂಪಾಕ್ಟ್ ಎಸ್‌ಯುವಿ ತನ್ನ ಪ್ರತಿಸ್ಪರ್ಧಿ ಇಕೊಸ್ಪೋರ್ಟ್ ಮಾರಾಟವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ.

Also Read : ಮಹೀಂದ್ರ ಟಿಯುವಿ300 Vs ಫೋರ್ಡ್ ಇಕೊಸ್ಪೋರ್ಟ್: ಯಾವುದು ಅತ್ಯುತ್ತಮ ಕಾರು?

ಯುದ್ಧ ಟ್ಯಾಂಕರ್ ನಿಂದ ಸ್ಪೂರ್ತಿ ಪಡೆದಿರುವ ಮಹೀಂದ್ರ ಟಿಯುವಿ300, 2015 ಸೆಪ್ಟೆಂಬರ್ ತಿಂಗಳಲ್ಲಿ 4,314 ಯುನಿಟ್ ಗಳ ಮಾರಾಟ ಕಾಣುವ ಮೂಲಕ ಪ್ರಭಾವಿ ಎನಿಸಿಕೊಂಡಿದೆ. ಇನ್ನೊಂದೆಡೆ ಇಕೊಸ್ಪೋರ್ಟ್ 3,142 ಯುನಿಟ್ ಗಳಷ್ಟೇ ಮಾರಾಟ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿತ್ತು.

ಮೊದಲ ತಿಂಗಳಲ್ಲೇ ಇಕೊಸ್ಪೋರ್ಟ್ ಹಿಂದಿಕ್ಕಿದ ಮಹೀಂದ್ರ ಟಿಯುವಿ300

ಪ್ರಸ್ತುತ ಕ್ರೀಡಾ ಬಳಕೆಯ ವಾಹನ ವಿಭಾಗವನ್ನು ಹ್ಯುಂಡೈ ಕ್ರೆಟಾ ಮುನ್ನಡೆಸುತ್ತಿದ್ದು, ಒಟ್ಟು 7,320 ಯುನಿಟ್ ಗಳ ಮಾರಾಟ ಕಂಡಿದೆ.

ಮೊದಲ ತಿಂಗಳಲ್ಲೇ ಇಕೊಸ್ಪೋರ್ಟ್ ಹಿಂದಿಕ್ಕಿದ ಮಹೀಂದ್ರ ಟಿಯುವಿ300

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹೀಂದ್ರ ಸಂಸ್ಥೆಯು "ಇವೆಲ್ಲ ಆರಂಭದ ದಿನಗಳು. ಜನರ ನಿರೀಕ್ಷೆ ಮುಟ್ಟುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಹ್ಯಾಚ್ ಬ್ಯಾಕ್ ಅಥವಾ ಸೆಡಾನ್ ಕಾರುಗಳಿಂದ ಅಪ್ ಗ್ರೇಡ್ ಆಗಲು ಬಯಸುವವರಿಗೆ ಇದೊಂದು ಪರಿಪೂರ್ಣ ಆಯ್ಕೆಯಾಗಿರಲಿದೆ" ಎಂದಿದೆ.

ಮೊದಲ ತಿಂಗಳಲ್ಲೇ ಇಕೊಸ್ಪೋರ್ಟ್ ಹಿಂದಿಕ್ಕಿದ ಮಹೀಂದ್ರ ಟಿಯುವಿ300

ಹಾಗಿದ್ದರೂ ಉಪಯುಕ್ತ ವಾಹನ ವಿಭಾಗದಲ್ಲಿ ಮೊದಲ ಆರು ತಿಂಗಳ ಮಾರಾಟದಲ್ಲಿ ಮಹೀಂದ್ರ ಶೇಕಡಾ 5.5ರಷ್ಟು ಇಳಿಕೆ ಕಂಡಿದೆ. ಈ ಅವಧಿಯಲ್ಲಿ 94,582 ಯುನಿಟ್ ಗಳ ಮಾರಾಟವನ್ನಷ್ಟೇ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.

ಎಂಜಿನ್, ಗೇರ್ ಬಾಕ್ಸ್

ಎಂಜಿನ್, ಗೇರ್ ಬಾಕ್ಸ್

1.5 ಲೀಟರ್ ತ್ರಿ ಸಿಲಿಂಡರ್ ಎಂಹಾಕ್80 ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಮಹೀಂದ್ರ ಟಿಯುವಿ300 230 ತಿರುಗುಬಲದಲ್ಲಿ 84 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಮ್ಯಾನುವಲ್ ಹಾಗೂ ಸೆಗ್ಮೆಂಟ್ ನಲ್ಲಿ ಇದೇ ಮೊದಲ ಬಾರಿಗೆ ಆಟೋ ಶಿಫ್ಟ್ ಆಟೋಮೇಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಪರಿಚಯಿಸಲಾಗುತ್ತಿದೆ.

ಆಸನ

ಆಸನ

5+2 ಆಸನ ವ್ಯವಸ್ಥೆಯನ್ನು ಮಹೀಂದ್ರ ಟಿಯುವಿ300 ಹೊಂದಿರಲಿದೆ. ಅಂದರೆ ಏಳು ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಸಂಚರಿಸಬಹುದಾಗಿದೆ. ಈ ಪೈಕಿ ಹಿಂಭಾಗದಲ್ಲಿ ಇಬ್ಬರಿಗೆ ಮುಖಾಮುಖಿ ಸಿಟ್ಟಿಂಗ್ ವ್ಯವಸ್ಥೆಯನ್ನು ಕೊಡಲಾಗಿದೆ. ಇದು ಮಕ್ಕಳಿಗೆ ಹೆಚ್ಚು ಹೊಂದಿಕೆಯಾಗಲಿದೆ.

ಸುರಕ್ಷತೆ

ಸುರಕ್ಷತೆ

ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಹಾಗೂ ಡ್ಯುಯಲ್ ಏರ್ ಬ್ಯಾಗ್ ಗಳ ಭದ್ರತೆಯು ನೆರವಾಗಲಿದೆ.

ಮನರಂಜನೆ

ಮನರಂಜನೆ

ಮನರಂಜನೆಗೂ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, 2 ಡಿನ್ ಮ್ಯೂಸಿಕ್ ಸಿಸ್ಟಂ ಜೊತೆ ದೊಡ್ಡದಾದ ಟಚ್ ಸ್ಕ್ರೀನ್ ಇನ್ಮೋಟೈನ್ಮೆಂಟ್ ಸಿಸ್ಟಂ (ಬ್ಲೂಟೂತ್, ಯುಎಸ್‌ಬಿ, ಆಕ್ಸ್) ಇದರಲ್ಲಿರಲಿದೆ.

ಇವನ್ನೂ ಓದಿ

ಮಹೀಂದ್ರ ಟಿಯುವಿ300; ನೀವು ತಿಳಿದುಕೊಳ್ಳಬೇಕಾದ 8 ಅಂಶಗಳು

More from DriveSpark

Article Published On: Tuesday, October 20, 2015, 16:32 [IST]
English summary
Mahindra TUV300 Achieves Sales Milestone Within One Month
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+