2016 ಆಟೋ ಎಕ್ಸ್ ಪೋದಲ್ಲಿ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಕಾರು ಬಿಡುಗಡೆ

By Nagaraja

ಬಹು ನಿರೀಕ್ಷಿತ ಮಹೀಂದ್ರ ವೆರಿಟೊ ವಿದ್ಯುತ್ ಚಾಲಿತ ಕಾರು ಮುಂದಿನ ವರ್ಷಾರಂಭದಲ್ಲಿ ಬಿಡುಗಡೆಯಾಗಲಿದೆ. ವಾಹನೋದ್ಯಮ ಮೂಲಗಳಿಂದ ಬಂದಿರುವ ಮಾಹಿತಿಗಳ ಪ್ರಕಾರ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಕಾರು 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ.

ಅದೇ ಹೊತ್ತಿಗೆ ಫೆಬ್ರವರಿಯಲ್ಲಿ ನೆರವೇರಲಿರುವ ವಾಹನ ಪ್ರದರ್ಶನ ಮೇಳದಲ್ಲಿ ಮಹೀಂದ್ರ ಮ್ಯಾಕ್ಸಿಮೊ (Maxximo) ಹಗುರ ಭಾರದ ವಾಣಿಜ್ಯ ಎಲೆಕ್ಟ್ರಿಕ್ ವಾಹನ ಸಹ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

2016 ಆಟೋ ಎಕ್ಸ್ ಪೋದಲ್ಲಿ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಕಾರು ಬಿಡುಗಡೆ

2012 ದೆಹಲಿ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿರುವ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ವೆರಿಯಂಟ್ ಡೀಸೆಲ್ ವೆರಿಯಂಟ್ ಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ.

2016 ಆಟೋ ಎಕ್ಸ್ ಪೋದಲ್ಲಿ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಕಾರು ಬಿಡುಗಡೆ

2014ರ ಆಟೋ ಎಕ್ಸ್ ಪೋದಲ್ಲಿ ವೆರಿಟೊ ಫೇಸ್ ಲಿಫ್ಟ್ ಮಾದರಿಯ ತಳಹದಿಯಲ್ಲಿ ಎಲೆಕ್ಟ್ರಿಕ್ ವಾಹನವನ್ನು ಪರಿಚಿಯಿಸಿತ್ತು. ಈಗ ಬಂದಿರುವ ಶುಭ ಸಮಾಚಾರ ಪ್ರಕಾರ 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ.

2016 ಆಟೋ ಎಕ್ಸ್ ಪೋದಲ್ಲಿ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಕಾರು ಬಿಡುಗಡೆ

ಇನ್ನೊಂದೆಡೆ ಮಹೀಂದ್ರ ಮ್ಯಾಕ್ಸಿಮೊ ಎಲೆಕ್ಟ್ರಿಕ್ ವಾಹನ ಮೊದಲ ಬಾರಿಗೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿತ್ತು. ಇದರ ಪರ್ಮನೆಂಟ್ ಮ್ಯಾಗ್ನೆಟ್ ಸೈಕ್ರೋನಸ್ ಮೋಟಾರು 62 ಎನ್‌ಎಂ ತಿರುಗುಬಲದಲ್ಲಿ 20 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

2016 ಆಟೋ ಎಕ್ಸ್ ಪೋದಲ್ಲಿ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಕಾರು ಬಿಡುಗಡೆ

ಇವೆರಡು ಮಹೀಂದ್ರ ಇ2ಒ ವಿದ್ಯುತ್ ಚಾಲಿತ ಕಾರಿನಲ್ಲಿರುವುದಕ್ಕೆ ಸಮಾನವಾದ ರೀತಿಯಲ್ಲಿ ಲಿಥಿಯಂ ಇಯಾನ್ ಬ್ಯಾಟರಿಗಳನ್ನು ಪಡೆಯಲಿದೆ. ಇದನ್ನು ಮಹೀಂದ್ರದ ಎಲೆಕ್ಟ್ರಿಕ್ ವಿಭಾಗವಾದ ರೇವಾ ಅಭಿವೃದ್ಧಿಪಡಿಸಲಿದೆ.

2016 ಆಟೋ ಎಕ್ಸ್ ಪೋದಲ್ಲಿ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಕಾರು ಬಿಡುಗಡೆ

ಬಲ್ಲ ಮೂಲಗಳ ಪ್ರಕಾರ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಕಾರು ಕ್ಯಾಬ್ ಮಾಲಿಕರನ್ನು ಹೆಚ್ಚು ಗುರಿ ಮಾಡಲಿದೆ. ಈ ಬಗೆಗಿನ ತಾಜಾ ಸುದ್ದಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

More from DriveSpark

Article Published On: Wednesday, December 23, 2015, 18:10 [IST]
English summary
Mahindra Verito EV To Be Launched In India During Feb 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+