1.5 ಲಕ್ಷ ಮಾರಾಟ ಮೈಲುಗಲ್ಲನ್ನು ತಲುಪಿದ ಮಹೀಂದ್ರ ಎಕ್ಸ್‌ಯುವಿ500

Written By:

ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಸಂಸ್ಥೆಯು 1.5 ಲಕ್ಷ ಯುನಿಟ್ ಗಳ ಮಾರಾಟ ಮೈಲುಗಲ್ಲನ್ನು ತಲುಪಿದೆ. ಪ್ರಸ್ತುತ ಪ್ರೀಮಿಯಂ ಎಕ್ಸ್‌ಯುವಿ 2011ರಲ್ಲಿ ಮೊದಲಬಾರಿಗೆ ಬಿಡುಗಡೆಗೊಂಡಿತ್ತು.

ಹೊಸ ಮಹೀಂದ್ರ ಎಕ್ಸ್‌ಯುವಿ500 ಕಾರಿನ ವಿಶೇಷತೆಗಳೇನು? ಮುಂದಕ್ಕೆ ಓದಲು ಕ್ಲಿಕ್ಕಿಸಿ

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯ ನಿರ್ವಾಹಕರಾಗಿರುವ ಪ್ರವೀಣ್ ಷಾ, "ಈ ವಿಭಾಗದಲ್ಲಿ ನೂತನ ಗುಣಮಟ್ಟವನ್ನು ಮುಟ್ಟಿರುವ ಅತೀವ ಜನಪ್ರಿಯತೆ ಸಾಧಿಸಿದೆ" ಎಂದಿದ್ದಾರೆ.

To Follow DriveSpark On Facebook, Click The Like Button
ಮಹೀಂದ್ರ ಎಕ್ಸ್‌ಯುವಿ500

ನಿಮ್ಮ ಮಾಹಿತಿಗಾಗಿ ಚೆನ್ನೈಯಲ್ಲಿ ಸ್ಥಿತಗೊಂಡಿರುವ ಮಹೀಂದ್ರದ ರಿಸರ್ವ್ ವ್ಯಾಲಿ (Mahindra Research Valley) ಅಧ್ಯಯನ ಹಾಗೂ ಅಭಿವೃದ್ಧಿ ಘಟಕದಲ್ಲಿ ಎಕ್ಸ್‌ಯುವಿ500 ಸಂಪೂರ್ಣವಾಗಿ ವಿನ್ಯಾಸಗೊಳಿಸಲಾಗಿದೆ.

ಇದರಂತೆ ಹೆಚ್ಚಿನ ಬದಲಾವಣೆಯೊಂದಿಗೆ ನ್ಯೂ ಏಜ್ ಎಕ್ಸ್‌ಯುವಿ500 2015 ಮೇ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಿತ್ತು. ಈ ಮೂಲಕ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಸಾನಿಧ್ಯವನ್ನು ವ್ಯಕ್ತಪಡಿಸಿದೆ.

English summary
Mahindra XUV500 Achieves 1,50,000 Sale Milestone
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark