ಮಹೀಂದ್ರ ಎಕ್ಸ್‌ಯುವಿ500 ಆಟೋಮ್ಯಾಟಿಕ್ ಕಾರು ಬಿಡುಗಡೆ
ದೇಶದ ನಂ.1 ಕ್ರೀಡಾ ಬಳಕೆಯ ವಾಹನ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಕಂಪನಿ, ತನ್ನ ಜನಪ್ರಿಯ ಎಕ್ಸ್‌ಯುವಿ500 ಆಟೋಮ್ಯಾಟಿಕ್ ಮಾದರಿಯನ್ನು ಬಿಡುಗಡೆ ಮಾಡಿದೆ.
ಪ್ರಾರಂಭಿಕ ಬೆಲೆ: 15.36 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)
ಚಿರತೆಯಿಂದ ಸ್ಪೂರ್ತಿ ಪಡೆದ ನೂತನ ಮಹೀಂದ್ರ ಎಕ್ಸ್‌ಯುವಿ500, ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ. ಹೆಚ್ಚಿನ ಮಾಹಿತಿಗಾತಿ ಚಿತ್ರಪುಟದತ್ತ ಮುಂದುವರಿಯಿರಿ.

ನೂತನ ಮಹೀಂದ್ರ ಎಕ್ಸ್‌ಯುವಿ500 ಆಟೋಮ್ಯಾಟಿಕ್ ಕಾರು ಡಬ್ಲ್ಯು 8 ಹಾಗೂ ಡಬ್ಲ್ಯು10 ಮಾದರಿಗಳಲ್ಲಿ ಲಭ್ಯವಾಗಲಿದೆ.

ಜಪಾನ್ ಮೂಲಕ ಘಟಕ ತಯಾರಿಕ ಸಂಸ್ಥೆಯ ಎಯ್ಸಿನ್ ಸೀಕಿ (Aisin Seiki) ಮಹೀಂದ್ರಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಘಟಕವನ್ನು ಒದಗಿಸಲಿದೆ.

ಮುಂಬರುವ ದಿನಗಳಲ್ಲಿ ಸ್ಯಾಂಗ್ಯೊಂಗ್ ಟಿವೊಲಿ ಕಾರಿನಲ್ಲೂ ಇದಕ್ಕೆ ಸಮಾನವಾದ ಗೇರ್ ಬಾಕ್ಸ್ ಕಂಡುಬರುವ ಸಾಧ್ಯತೆಯಿದ್ದು, ನಿಕಟ ಭವಿಷ್ಯದಲ್ಲೇ ಭಾರತಕ್ಕೂ ಕಾಲಿಡಲಿದೆ.

2.2 ಲೀಟರ್ ಎಂಹಾಕ್ ಎಂಜಿನ್ ನಿಂದ ನಿಯಂತ್ರಸ್ಪಡುವ ನೂತನ ಕಾರು 330 ಎನ್ ಎಂ ತಿರುಗುಬಲದಲ್ಲಿ 142 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಇನ್ನುಳಿದಂತೆ ಹಿಲ್ ಸ್ಟ್ಯಾರ್ಟ್ ಅಸಿಸ್ಟ್, ಸ್ಟ್ಯಾರ್ಟ್ ಸ್ಟಾಪ್ ಕ್ರಿಯಾತ್ಮಕತೆಯ ಸೇವೆಯೂ ಲಭ್ಯವಾಗಲಿದೆ. ಇದು ಟ್ರಾಫಿಕ್ ನಲ್ಲಿ ಆಕ್ಸಿಲೇಟರ್ ಗೆ ಕಾಲಿಡದೆಯೇ 10 ಕೀ.ಮೀ. ವೇಗವನ್ನು ಕಾಪಾಡಿಕೊಳ್ಳಲಿದೆ.

ಇಲ್ಲಿ ಡಬ್ಲ್ಯು10 ಮಾದರಿಯಲ್ಲಿ ಆಟೋಮ್ಯಾಟಿಕ್ ಜೊತೆಗೆ ಫ್ರಂಟ್ ವೀಲ್ ಡ್ರೈವ್ ಹಾಗೂ ಆಲ್ ವೀಲ್ ಚಾಲನಾ ಪ್ಯಾಕೇಜ್ ಲಭ್ಯವಿರುತ್ತದೆ.

ಇನ್ನುಳಿದಂತೆ ಎಲೆಕ್ಟ್ರಿಕ್ ಸನ್ ರೂಫ್, ಆರು ವಿಧಗಳಲ್ಲಿ ಹೊಂದಾಣಿಸಬಹುದಾದ ಚಾಲಕ ಸೀಟು, ಸಂಪೂರ್ಣ ಆಟೋಮ್ಯಾಟಿಕ್ ತಾಪಮಾನ ನಿಯಂತ್ರಣ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಡೈನಾಮಿಕ್ ಅಸಿಸ್ಟ್ ಮುಂತಾದ ಸೌಲಭ್ಯಗಳಿರಲಿದೆ.

ವೈಶಿಷ್ಟ್ಯಗಳು
- ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
- ಡೇಟೈಮ್ ರನ್ನಿಂಗ್ ಲೈಟ್ಸ್,
- ಏಳು ಇಂಚುಗಳ ಟಚ್ ಸ್ಕ್ರೀನ್ ಸಿಸ್ಟಂ,
- ಜಿಪಿಎಸ್,
- ಬ್ರೇಕ್ ಎನರ್ಜಿ ರಿಜನರೇಷನ್,
- ಕ್ರೂಸ್ ಕಂಟ್ರೋಲ್
- ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,
- ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್,
- ಆರು ಏರ್ ಬ್ಯಾಗ್,
- ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್



Click it and Unblock the Notifications








