ಏರ್ ಬ್ಯಾಗ್ ಅಪ್‌ಗ್ರೇಡ್; ಮಹೀಂದ್ರ ಎಕ್ಸ್‌ಯುವಿ500 ಹಿಂದಕ್ಕೆ ಕರೆ
ದೇಶದ ಎಸ್‌ಯುವಿ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ, ಏರ್ ಬ್ಯಾಗ್ ಸಾಫ್ಟ್‌ವೇರ್ ಅಪ್ ಗ್ರೇಡ್ ಹಿನ್ನೆಲೆಯಲ್ಲಿ ತನ್ನ ಜನಪ್ರಿಯ ಎಕ್ಸ್‌ಯುವಿ500 ಮಾದರಿಯನ್ನು ಹಿಂದಕ್ಕೆ ಕರೆಯಿಸಿಕೊಂಡಿದೆ.
ಹಾಗಿದ್ದರೂ ಎಷ್ಟು ಎಕ್ಸ್‌ಯುವಿ500 ಮಾದರಿಗಳಿಗೆ ಹಿಂದಕ್ಕೆ ಕರೆ ನೀಡಲಾಗಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ವರದಿಗಳ ಪ್ರಕಾರ 2014 ಜುಲೈಗಿಂತ ಹಿಂದೆ ತಯಾರಾದ ವಾಹನಗಳನ್ನು ಹಿಂಪಡೆಯಲಾಗುತ್ತಿದೆ.

ಮಹೀಂದ್ರ ಸಂಸ್ಥೆಯ ಪ್ರಕಾರ ಏರ್ ಬ್ಯಾಗ್ ಸಾಫ್ಟ್ ವೇರ್ ಅಪ್‌ಗ್ರೇಡ್ ಅನ್ನು ಸಂಪೂರ್ಣ ಉಚಿತವಾಗಿ ಮಾಡಿಕೊಡಲಾಗುತ್ತಿದೆ. ಅಲ್ಲದೆ ಇದಕ್ಕಾಗಿ ವಾಹನದ ಯಾವುದೇ ಭಾಗವನ್ನು ಬದಲಾಯಿಸಬೇಕಾದ ಅಗತ್ಯವಿರುವುದಿಲ್ಲ.
ನಿಮ್ಮ ಎಕ್ಸ್‌ಯುವಿ500 ಕಾರು ಇದಕ್ಕೆ ಒಳಪಟ್ಟಿದೆಯೇ ಎಂಬುದನ್ನು ತಿಳಿದುಕೊಳ್ಳಲ್ಲು ಇಲ್ಲಿ ಕೊಟ್ಟಿರುವ ಲಿಂಕ್ ಕ್ಲಿಕ್ಕಿಸಿ ಪರೀಶೀಲಿಸಬಹುದಾಗಿದೆ. ಸೈಡ್ ಕರ್ಟೈನ್ ಏರ್ ಬ್ಯಾಗ್ ಒದಗಿಸಲಾಗಿರುವ ಎಕ್ಸ್‌ಯುವಿ500 ಮಾದರಿಯಲ್ಲಿ ಮಾತ್ರ ಈ ಸಮಸ್ಯೆ ಕಾಣಿಸಿಕೊಂಡಿದೆ.
ಅಂದ ಹಾಗೆ 2179 ಸಿಸಿ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸ್ಪಡುವ ಮಹೀಂದ್ರ ಎಕ್ಸ್‌ಯುವಿ500 140 ಅಶ್ವಶಕ್ತಿ (330 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಡಬ್ಲ್ಯು4, ಡಬ್ಲ್ಯು, ಡಬ್ಲ್ಯು8 ಮತ್ತು ಡಬ್ಲ್ಯು8 ಆಲ್ ವೀಲ್ ಡ್ರೈವ್ ಆಯ್ಕೆಗಳಲ್ಲಿ ಲಭವಿರುತ್ತದೆ.
ಅಲ್ಲದೆ ಭಾರತ ವಾಹನ ಅಧ್ಯಯನ ಸಂಸ್ಥೆಯ (ಎಆರ್‌ಎಐ) ಮಾನ್ಯತೆಯ ಪ್ರಕಾರ ಪ್ರತಿ ಲೀಟರ್‌ಗೆ 15.1 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇನ್ನು ಮಹೀಂದ್ರ ಎಕ್ಸ್‌ಯುವಿ500 ಭಾರತದಲ್ಲಿ 11.19 ಲಕ್ಷ ರು.ಗಳಿಂದ 15.05 ಲಕ್ಷ ರು.ಗಳ ವರೆಗೆ (ಎಕ್ಸ್ ಶೋ ರೂಂ ದೆಹಲಿ) ದುಬಾರಿಯೆನಿಸಿದೆ.


Click it and Unblock the Notifications








