ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲೂ ಮಹೀಂದ್ರ ಎಕ್ಸ್‌ಯುವಿ500
ದೇಶದ ಮುಂಚೂಣಿಯ ಕ್ರೀಡಾ ಬಳಕೆಯ ವಾಹನ ಉತ್ಪಾದನಾ ಸಂಸ್ಥೆಯಾಗಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಸಂಸ್ಥೆಯು ತನ್ನ ಜನಪ್ರಿಯ ಎಕ್ಸ್‌ಯುವಿ500, ಸದ್ಯದಲ್ಲೇ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲೂ ಲಭ್ಯವಾಗಲಿದೆ.
ಈ ಬಗ್ಗೆ ಹೇಳಿಕೆ ಕೊಟ್ಟಿರುವ ಮಹೀಂದ್ರ, ಜನಪ್ರಿಯ ಎಕ್ಸ್‌ಯುವಿಗಾಗಿ ಪೆಟ್ರೋಲ್ ಎಂಜಿನ್ ಸಿದ್ಧಪಡಿಸಲಾಗುತ್ತಿದೆ ಎಂದಿದೆ. ಈ ಮೂಲಕ ಮತ್ತಷ್ಟು ಮಾರಾಟ ಏರಿಕೆಯನ್ನು ಗುರುಯಿರಿಸಿಕೊಂಡಿದೆ.

ಆದರೆ ಪೆಟ್ರೋಲ್ ಮಾದರಿಯು ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆಯೇ ಎಂಬುದು ಕುತೂಹಲವೆನಿಸಿದೆ. ಯಾಕೆಂದರೆ ದೇಶದ ಗ್ರಾಹಕರು ಪೆಟ್ರೋಲ್ ಗಿಂತ ಡೀಸೆಲ್ ಎಂಜಿನ್ ಹೆಚ್ಚು ಇಷ್ಟಪಡುತ್ತಾರೆ.
ಮಹೀಂದ್ರ ಸಂಸ್ಥೆಯು ಇದನ್ನೇ ಉಲ್ಲೇಖಿಸಿದ್ದು, ಹಾಗಿದ್ದರೂ ಆಸ್ಟ್ರೇಲಿಯಾ, ಅಮೆರಿಕ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ಪೆಟ್ರೋಲ್ ಎಂಜಿನ್ ಗಳನ್ನು ರಫ್ತು ಮಾಡುವ ಯೋಜನೆಯನ್ನು ಹೊಂದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್ ಎಂಜಿನ್ ಗಳಿಗೆ ಬೇಡಿಕೆಯಿದೆ. ಇದನ್ನೇ ಪರಿಗಣಿಸಿರುವ ಮಹೀಂದ್ರ ಸಂಸ್ಥೆಯು ಹೆಚ್ಚಿನ ಮಾರಾಟವನ್ನು ಗುರಿಯಿರಿಸಿಕೊಂಡಿದೆ.


Click it and Unblock the Notifications








