ಮಹೀಂದ್ರ ಬಹುನಿರೀಕ್ಷಿತ ಮಿನಿ ಎಸ್‌ಯುವಿ 'ಮಹೀಂದ್ರ ಕೆಯುವಿ100'

By Nagaraja

ನಿರೀಕ್ಷೆಯಂತೆಯೇ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ ಸಂಸ್ಥೆಯ 'ಎಸ್101' ಎಂಬ ಕೋಡ್ ಪಡೆದುಕೊಂಡಿದ್ದ ಬಹುನಿರೀಕ್ಷಿತ ಕ್ರೀಡಾ ಬಳಕೆಯ ವಾಹನಕ್ಕೆ 'ಕೆಯುವಿ100' ಎಂಬ ನಾಮಕರಣವಾಗಿದೆ.

ಮುಂದಿನ ವರ್ಷಾರಂಭದಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸಲಿರುವ ಈ ಕಾಂಪಾಕ್ಟ್ ಎಸ್‌ಯುವಿ ಬುಕ್ಕಿಂಗ್ ಪ್ರಕ್ರಿಯೆ ಇನ್ನೇನು ಆರಂಭಗೊಳ್ಳಲಿದೆ. ಇದು ಟಿಯುವಿ100 ಬಳಿಕ ಮಹೀಂದ್ರ ಬಿಡುಗಡೆ ಮಾಡುತ್ತಿರುವ ಅತಿ ನೂತನ ಕಾರಾಗಿದೆ.

ಮುಖ್ಯಾಂಶಗಳು

ಮುಖ್ಯಾಂಶಗಳು

  • ನಾಮಕರಣ: ಮಹೀಂದ್ರ ಕೆಯುವಿ100,
  • ಎಲ್ಲ ಹೊಸತನದ ಎಂಫಾಲ್ಕನ್ (mFALCON) ಎಂಜಿನ್,
  • ಪೆಟ್ರೋಲ್ ಎಂಜಿನ್‌ಗೆ ಮಹೀಂದ್ರ ಎಂಟ್ರಿ
  • ಕೆಯುವಿ1oo ಉಚ್ಚಾರಣೆ ಹೇಗೆ?

    ಕೆಯುವಿ1oo ಉಚ್ಚಾರಣೆ ಹೇಗೆ?

    ಇಲ್ಲಿ 'K' ಎಂಬುದು ಕೂಲ್ (kool), 'UV' ಎಂಬುದು ಎಸ್‌ಯುವಿ ಮತ್ತು '100' ಎಂಬುದು 1 ಹಾಗೂ ಡಬಲ್ oh ಸಂಕೇತಿಸುತ್ತದೆ. ಅಂತೆಯೇ ಯುವ ತಲೆಮಾರಿನ ಜನಾಂಗಕ್ಕೆ ಹೆಚ್ಚು ಪ್ರಿಯವೆನಿಸಲಿದೆ.

    ಮಹೀಂದ್ರ ಬಹುನಿರೀಕ್ಷಿತ ಮಿನಿ ಎಸ್‌ಯುವಿ 'ಕೆಯುವಿ100'

    ಮಹೀಂದ್ರ ಎಕ್ಸ್‌ಯುವಿ500 ಹಾಗೂ ಟಿಯುವಿ100 ಕೆಳ ದರ್ಜೆಯಲ್ಲಿ ಗುರುತಿಸಿಕೊಳ್ಳಲಿರುವ ಕೆಯುವಿ100 ಕಾರಿನಲ್ಲಿ ಅತಿ ನೂತನ ವಿಶಅವ ದರ್ಜೆಯ ಎಂಫಾಲ್ಕನ್ ಎಂಜಿನ್ ಬಳಕೆ ಮಾಡಲಾಗುತ್ತದೆ. ಹಾಗೆಯೇ ಇದೇ ಪೆಟ್ರೋಲ್ ಎಂಜಿನ್ ವಿಭಾಗಕ್ಕೂ ಮಹೀಂದ್ರ ಕಾಲಿಡಲಿದೆ.

    ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್

    ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್

    • ಪೆಟ್ರೋಲ್: mFALCON, G80
    • ಡೀಸೆಲ್: mFALCON, D75
    • 'ಪ್ರೆ' (prey) ಬೇಟೆಹಕ್ಕಿಯ ಹೆಸರನ್ನು ಇದಕ್ಕಿಡಲಾಗಿದೆ.

      ಮಹೀಂದ್ರ ಬಹುನಿರೀಕ್ಷಿತ ಮಿನಿ ಎಸ್‌ಯುವಿ 'ಕೆಯುವಿ100'

      ಇದರ ವಿವಿಟಿ 1.2 ಲೀಟರ್ ಪೆಟ್ರೋಲ್ ಎಂಜಿನ್ 82 ಅಶ್ವಶಕ್ತಿಯನ್ನು ಹಾಗೂ 1.2 ಲೀಟರ್ ಟರ್ಬೊ ಚಾರ್ಜ್ಡ್ ಡೀಸೆಲ್ ಎಂಜಿನ್ 77 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಗರಿಷ್ಠ ಚಾಲನಾ ಅನುಭವ ನೀಡುವಲ್ಲಿ ಯಶಸ್ವಿಯಾಗಲಿದೆ.

      ಮಹೀಂದ್ರ ಬಹುನಿರೀಕ್ಷಿತ ಮಿನಿ ಎಸ್‌ಯುವಿ 'ಕೆಯುವಿ100'

      ಚೆನ್ನೈನ ಮಹೀಂದ್ರ ಸಂಶೋಧನಾ ಘಟಕದಲ್ಲಿ ಅಭಿವೃದ್ಧಿಗೊಂಡಿರುವ ವಿಶ್ವದರ್ಜೆಯ ಎಸ್‌ಯುವಿ ಸುತ್ತಲಿನ ಆಕಾರದ ವಿನ್ಯಾಸ ಹಾಗೂ ವಿಶಿಷ್ಟ ಹೆಡ್ ಲ್ಯಾಂಪ್ ಗಳು ನೂತನ ಆಯಾಮ ಪ್ರದಾನ ಮಾಡಲಿದೆ.

      ಮಹೀಂದ್ರ ಬಹುನಿರೀಕ್ಷಿತ ಮಿನಿ ಎಸ್‌ಯುವಿ 'ಕೆಯುವಿ100'

      ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಮೊನೊಕಾಕ್ ಸಂರಚನೆಯ ಕೆಯುವಿ100 ಗುಟಮಟ್ಟ, ತಾಂತ್ರಿಕತೆ, ನಿರ್ವಹಣೆ ಎಲ್ಲದರಲ್ಲೂ ಅದ್ಭುತ ಚಾಲನಾ ಅನುಭವ ನೀಡಲಿದೆ.

      ಮಹೀಂದ್ರ ಬಹುನಿರೀಕ್ಷಿತ ಮಿನಿ ಎಸ್‌ಯುವಿ 'ಕೆಯುವಿ100'

      ನಿಕಟ ಭವಿಷ್ಯದಲ್ಲಿ ಮಹೀಂದ್ರ ಕೆಯುವಿ100 ಕಾರಿಗೆ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡುವ ಇರಾದೆಯಿದ್ದು, ಇದಕ್ಕಾಗಿ ಇಟಲಿಯ ಮ್ಯಾಗ್ನೆಟ್ಟಿ ಮರೆಲ್ಲಿ ನೆರವು ಪಡೆಯುವ ಸಾಧ್ಯತೆಯಿದೆ.

      ಏಳು ಆಕರ್ಷಕ ಬಣ್ಣಗಳು

      ಏಳು ಆಕರ್ಷಕ ಬಣ್ಣಗಳು

      Fiery Orange,

      Flamboyant Red,

      Dazzling Silver,

      Aquamarine,

      Pearl White,

      Designer Grey,

      Midnight Black


More from DriveSpark

Article Published On: Friday, December 18, 2015, 14:41 [IST]
English summary
Mahindra's much awaited New Compact SUV 'KUV1oo' Revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+