15 ವೈಶಿಷ್ಟ್ಯಗಳೊಂದಿಗೆ ಆಲ್ಟೊ 800 ಓಣಂ ಸೀಮಿತ ಆವೃತ್ತಿ ಕಣಕ್ಕೆ

By Nagaraja

'ಓಣಂ' ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿ ಅತಿ ವಿಶೇಷವಾಗಿ ಆಚರಿಸ್ಪಡುವ ಹಬ್ಬವಾಗಿದೆ. ಇದರಂಗವಾಗಿ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ತನ್ನ ಜನಪ್ರಿಯ ಆಲ್ಟೊ 800 ಓಣಂ ಸೀಮಿತ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಮ್ಯೂಸಿಕ್ ಸಿಸ್ಟಂ ಜೊತೆ ಸ್ಪೀಕರ್, ಪವರ್ ಕಾರ್ ಚಾರ್ಜರ್, ಓಣಂ ಗ್ರಾಫಿಕ್ಸ್ ಹಾಗೂ ಡಿಕಾಲ್ಸ್, ವಿಶೇಷ ದಿಂಬು ಮತ್ತು ವಿಶೇಷ ವಿನ್ಯಾಸಿತ ಸೀಟು ಕವರ್ ಸೇರಿದಂತೆ ಮಾರುತಿ ಆಲ್ಟೊ 800 ಓಣಂ ಸೀಮಿತ ಆವೃತ್ತಿಯು 15 ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಇವೆಲ್ಲವನ್ನು 17.350 ರು.ಗಳಲ್ಲಿ ಓಣಂ ವಿಶೇಷ ಪ್ಯಾಕೇಜ್ ರಿಯಾಯಿತಿ ದರಗಳಲ್ಲಿ ಪಡದುಕೊಳ್ಳಬಹುದಾಗಿದೆ. ಅಂದರೆ ನೈಜ ಬೆಲೆಗಿಂತಲೂ ಶೇಕಡಾ 26ರಷ್ಟು ಕಡಿಮೆ ದರದಲ್ಲಿ ಪಡೆದುಕೊಳ್ಳಬಹುದಾಗಿದೆ.

ಮಾರುತಿ ಆಲ್ಟೊ 800

ಎಂಜಿನ್ ತಾಂತ್ರಿಕತೆ
  • ಎಂಜಿನ್: 796 ಸಿಸಿ ಇನ್ ಲೈನ್ ತ್ರಿ ಸಿಲಿಂಡರ್,
  • ಅಶ್ವಶಕ್ತಿ: 47.32,
  • ತಿರುಗುಬಲ: 69 ಎನ್‌ಎಂ
  • ಗೇರ್ ಬಾಕ್ಸ್: 5 ಸ್ಪೀಡ್, ಕೇಬಲ್ ವಿಧದ ಗೇರ್ ಶಿಫ್ಟ್,
  • ಮೈಲೇಜ್: 22.74 kpl

ಈ ಸಂದರ್ಭದಲ್ಲಿ ಮಾತನಾಡಿರುವ ಮಾರುತಿ ದಕ್ಷಿಣ ವಲಯದ ವಾಣಿಜ್ಯ ಮುಖ್ಯಸ್ಥರಾಗಿರುವ ರಾಮ್ ಸುರೇಶ್ ಅಕೆಲ್ಲಾ, "ಕೇರಳ ನಮ್ಮ ಪ್ರಮುಖ ಮಾರಾಟ ಕೇಂದ್ರವಾಗಿದ್ದು ಈ ಪ್ರದೇಶದಲ್ಲಿ ಮಾರುತಿ ಆಲ್ಟೊ 800 ಅತಿ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಳ್ಳುತ್ತಿದೆ" ಎಂದಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಮಲಯಾಳಂ ಕ್ಯಾಲೆಂಡರ್‌ನ ಮೊದಲ ಮಾಸ 'ಚಿಂಗಂ' (Chingam)ಒಂದರಂದು ಮಾರುತಿ ಸಂಸ್ಥೆಯು 3,000ದಷ್ಟು ಮಾದರಿಗಳನ್ನು ಗ್ರಾಹಕರಿಗೆ ಹಸ್ತಾಂತರಿಸಿದೆ. ಈ ಪೈಕಿ 1,000ದಷ್ಟು ಆಲ್ಟೊ 800 ಕಾರುಗಳನ್ನು ಒಳಗೊಂಡಿದ್ದವು.

ಕೆಲವು ದಿನಗಳ ಹಿಂದೆಯಷ್ಟೇ ಫೋಕ್ಸ್ ವ್ಯಾಗನ್ ಸಂಸ್ಥೆಯು ಕೇರಳದ ಗ್ರಾಹಕರಿಗಾಗಿ ಪೊಲೊ ಹಾಗೂ ವೆಂಟೊ ಓಣಂ ವಿಶೇಷ ಆಫರುಗಳನ್ನು ಘೋಷಿಸಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

More from DriveSpark

Article Published On: Wednesday, August 19, 2015, 11:41 [IST]
English summary
Maruti Suzuki has introduced its Alto 800 in a special edition, exclusively for Kerala. It is called as their ‘Onam Edition' and will feature fifteen special features by the manufacturer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+