ಕಣ್ಣು ಮಿಟುಕಿಸಿದ ಮಾಜ್ದಾ ಆರ್‌ಎಕ್ಸ್ ವಿಷನ್ ಕ್ರೀಡಾ ಕಾರು
ಬಹುನಿರೀಕ್ಷಿತ 2015 ಟೋಕಿಯೋ ಮೋಟಾರು ಶೋದಲ್ಲಿ ಮಗದೊಂದು ಕ್ರೀಡಾ ಕಾರು ಭರ್ಜರಿ ಪ್ರದರ್ಶನ ಕಂಡಿದೆ. ಅದುವೇ,
ಮಾಜ್ದಾ ಆರ್‌ಎಕ್ಸ್-ವಿಷನ್ ಕ್ರೀಡಾ ಕಾರು.
Also Read: ಭಾರತದ ಚೊಚ್ಚಲ ಕ್ರೀಡಾ ಕಾರು ಬಿಡುಗಡೆ ವಿಶಿಷ್ಟತೆಗಳೇನು ?
ಮಾಜ್ದಾ ಆರ್‌ಎಕ್ಸ್-ವಿಷನ್ ಕ್ರೀಡಾ ಕಾರು ಮುಂದಿನ ಜನಾಂಗತ ಸ್ಕೈಆಕ್ಟಿವ್-ಆರ್ ( SKYACTIV-R Rotary) ರೋಟರಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಅಲ್ಲದೆ ಫ್ರಂಟ್ ಎಂಜಿನ್ ಹಾಗೂ ರಿಯರ್ ವೀಲ್ ಚಾಲನಾ ವ್ಯವಸ್ಥೆಯನ್ನು ಪಡೆದುಕೊಳ್ಳಲಿದೆ.

ಈ ಹಿಂದೆ 1967ರ ಮಾಜ್ದಾ ಕೊಸ್ಮೊ ಸ್ಪೋರ್ಟ್ 110ಎಸ್ ಕಾರಿನಲ್ಲಿ ಮೊದಲ ಬಾರಿಗೆ ರೋಟರಿ ಎಂಜಿನ್ ಬಳಕೆ ಮಾಡಲಾಗಿತ್ತು. ಇದು 1978ರಿಂದ 2002ರ ಅವಧಿಯಲ್ಲಿ ಎಂಟು ಲಕ್ಷ ಯುನಿಟ್ ಗಳಷ್ಟು ಮಾರಾಟ ಗಿಟ್ಟಿಸಿಕೊಂಡಿತ್ತು.

ಸದ್ಯಕ್ಕೆ ಮಾಜ್ದಾ ರೋಟರಿ ಎಂಜಿನ್ ಗಳು ಸಂಸ್ಥೆಯ ಅಧ್ಯಯನ ಹಾಗೂ ಅಭಿವೃದ್ಧಿ ಘಟಕದಲ್ಲಿ ತಯಾರಿಸಲಾಗುತ್ತದೆ. ಅಲ್ಲದೆ ವಾಹನ ಪ್ರೇಮಿಗಳಿಗೆ ಸಾಂಪ್ರಾದಾಯಕ ಚಾಲನಾ ವ್ಯವಸ್ಥೆಯ ಅತ್ಯಧಿಕ ಅನುಭವ ನೀಡುವ ಇರಾದೆಯಲ್ಲಿದೆ.

ಅಂದ ಹಾಗೆ ಮಾಜ್ದಾ ಆರ್‌ಎಕ್ಸ್ ವಿಷನ್ ಕ್ರೀಡಾ ಕಾರು 2017ರ ವೇಳೆಯಾಗುವಾಗ ನಿರ್ಮಾಣ ಹಂತಕ್ಕೆ ತಲುಪುವ ಸಾಧ್ಯತೆಯಿದೆ. ಇದು ಮೊದಲ ಬಾರಿಗೆ ರೋಟರಿ ಎಂಜಿನ್ ಪರಿಚಯಿಸಿದ ಬಳಿಕ ಭರ್ತಿ 50 ವರ್ಷಾಚರಣೆಯ ಭಾಗವಾಗಿ ಹೊಸ ಜನಾಂಗದ ಎಂಜಿನ್ ಆಗಮನವಾಗಲಿದೆ.

ಎರಡು ಸೀಟುಗಳ ಈ ಸ್ಪೋರ್ಟ್ಸ್ ಕಾರಿನ ಕುರಿತು ಪ್ರತಿಕ್ರಿಯಿಸಿರುವ ಮಾಜ್ದಾ ಅಧ್ಯಕ್ಷ ಹಾಗೂ ಸಿಇಒ ಮಸಮಿಚಿ ಕೊಗಾಯ್ "ಮುಂದೊಂದು ದಿನ ರೋಟರಿ ಎಂಜಿನ್ ಖಂಡಿತವಾಗಿಯೂ ಮರಳಲಿದೆ" ಎಂದು ಖಚಿತಪಡಿಸಿದೆ.

ರೋಟರಿ ಎಂಜಿನ್ ಸಾಂಪ್ರಾದಾಯಿಕ ಪಿಸ್ತಾನ್ ಗಳ ಬದಲು ಚಕ್ರೀಯವಾಗಿ ಸುತ್ತು ತಿರುಗುವ ಮೂಲಕ ಶಕ್ತಿಯನ್ನು ಉತ್ಪಾದಿಸುತ್ತದೆ.

ಲಂಡನ್ ರಸ್ತೆಯಲ್ಲಿ ಮೇಡ್ ಇನ್ ಇಂಡಿಯಾ ಕಾರಿನ ಕರಾಮತ್ತು


Click it and Unblock the Notifications