'ಮೇಕ್ ಇನ್ ಇಂಡಿಯಾ' ಯೋಜನೆಗೆ ಕೈಜೋಡಿಸಿದ ಬೆಂಝ್

By Nagaraja

ಭಾರತ ಪ್ರಧಾನಿ ನರೇಂದ ಮೋದಿ ಅವರ ಬಹು ನಿರೀಕ್ಷಿತ 'ಮೇಕ್ ಇನ್ ಇಂಡಿಯಾ' ಯೋಜನೆಗೆ ತಮ್ಮ ಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಭಾರತದಲ್ಲಿನ ತನ್ನ ನಿರ್ಮಾಣ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದೆ.

ಇದರಂತೆ ಭಾರತದಲ್ಲಿ ಬೆಂಝ್ ವಾರ್ಷಿಕ ನಿರ್ಮಾಣ ಸಾಮರ್ಥ್ಯ 20,000 ಯುನಿಟ್ ಗಳಿಗೆ ಏರಿಕೆಯಾಗಿದೆ. ಅಷ್ಟೇ ಅಲ್ಲದೆ ಇದೇ ವೇಳೆಯಲ್ಲಿ ಸ್ಥಳೀಯವಾಗಿ ಜೋಡಣೆಯಾಗಿರುವ ಜಿಎಲ್ ಎ ಕ್ರೀಡಾ ಬಳಕೆಯ ವಾಹನವನ್ನು ಬೆಂಝ್ ಬಿಡುಗಡೆಗೊಳಿಸಿದೆ.

ಒಂದರ ಬಳಿಕ ಒಂದರಂತೆ ಹೊಸ ಹೊಸ ಮಾದರಿಗಳನ್ನು ಪರಿಚಯಿಸುತ್ತಿರುವ ಬೆಂಝ್ ಐಕಾನಿಕ್ ಮಾದರಿಗಳೀಗ ಇನ್ನು ಹೆಚ್ಚಿನ ಸ್ಪರ್ಧಾತ್ಮಕ ಬೆಲೆಗಳಲ್ಲಿ ಲಭ್ಯವಾಗಲಿದೆ. ಇದೀಗ ಜಿಎಲ್ ಎ ಸೇರ್ಪಡೆಯೊಂದಿಗೆ ಭಾರತದಲ್ಲಿ ಸ್ಥಳೀಯವಾಗಿ ನಿರ್ಮಿಸುತ್ತಿರುವ ಕಾರುಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

ಬೆಂಝ್ ಭಾರತದಲ್ಲಿ ನಿರ್ಮಾಣ ಮಾಡುತ್ತಿರುವ ಆರು ಮಾದರಿಗಳು ಇಂತಿದೆ

ಬೆಂಝ್ ಭಾರತದಲ್ಲಿ ನಿರ್ಮಾಣ ಮಾಡುತ್ತಿರುವ ಆರು ಮಾದರಿಗಳು ಇಂತಿದೆ

  • ಎಸ್ ಕ್ಲಾಸ್,
  • ಇ ಕ್ಲಾಸ್,
  • ಸಿ ಕ್ಲಾಸ್,
  • ಎಂ ಕ್ಲಾಸ್,
  • ಜಿಎಲ್ ಕ್ಲಾಸ್,
  • ಜಿಎಲ್ ಎ
  • 'ಮೇಕ್ ಇನ್ ಇಂಡಿಯಾ' ಯೋಜನೆಗೆ ಕೈಜೋಡಿಸಿದ ಬೆಂಝ್

    ಪುಣೆಯ ಹೊಸ ಘಟಕವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಾದ್ನವಿಸ್ ಲೋಕಾರ್ಪಣೆಗೈದರು. ಈ ಸಂದರ್ಭದಲ್ಲಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವೇದ್ಕರ್ ಉಪಸ್ಥಿತರಿದ್ದರು.

    'ಮೇಕ್ ಇನ್ ಇಂಡಿಯಾ' ಯೋಜನೆಗೆ ಕೈಜೋಡಿಸಿದ ಬೆಂಝ್

    ಇದರೊಂದಿಗೆ ಜಿಎಲ್ ಎ ಎಸ್‌ಯುವಿ ಬೆಲೆ ಭಾರತದಲ್ಲಿ 1.5 ಲಕ್ಷ ರು.ಗಳಿಂದ 2.5 ಲಕ್ಷ ರು.ಗಳಷ್ಟು ಕಡಿಮೆಯಾಗಲಿದೆ. ಅಂದರೆ ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 32.75 ಲಕ್ಷ ರು.ಗಳಿಂದ 36.9 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

    ಜಿಎಲ್ ಎ ಎಂಜಿನ್ ತಾಂತ್ರಿಕತೆ

    ಜಿಎಲ್ ಎ ಎಂಜಿನ್ ತಾಂತ್ರಿಕತೆ

    2143 ಸಿಸಿ ಇನ್ ಲೈನ್ ಫೋರ್ ಸಿಲಿಂಡರ್ ಡೀಸೆಲ್,

    134.04 ಅಶ್ವಶಕ್ತಿ,

    300 ತಿರುಗುಬಲ,

    7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್

    ವೈಶಿಷ್ಟ್ಯ

    ವೈಶಿಷ್ಟ್ಯ

    ಆರ್ಟಿಕೊ ಲೆಥರ್ ಹೋದಿಕೆ,

    14.7 ಸೆಂಟಿಮೀಟರ್ ಸೆಂಟ್ರಲ್ ಮೀಡಿಯಾ ಪರದೆ ವ್ಯವಸ್ಥೆ,

    ಹರ್ಮಾನ್ ಕರ್ಡಾನ್ ಲಾಜಿಕ್ 7 ಸೌರಂಡ್ ಸೌಂಡ್ ಸಿಸ್ಟಂ.

Article Published On: Thursday, June 11, 2015, 14:44 [IST]
English summary
Mercedes-Benz has started production of the GLA SUV in India. The GLA will be the first new generation car to be locally manufactured in India. The GLA-Class is seeing an increase in demand with Indian customers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+