ಮರ್ಸಿಡಿಸ್ ಬೆಂಝ್ ನೂತನ ಶೋ ರೂಂ ಬೆಂಗಳೂರಿನಲ್ಲಿ ಆರಂಭ

By Nagaraja

ದಕ್ಷಿಣ ಭಾರತದಲ್ಲಿ ತನ್ನ ಸಾನಿಧ್ಯವನ್ನು ಮತ್ತಷ್ಟು ಬಲಪಡಿಸಿರುವ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಬೆಂಗಳೂರಿನಲ್ಲಿ ನೂತನ ಶೋ ರೂಂ ಆರಂಭಿಸಿದೆ.

ಬೆಂಗಳೂರಿನ ಅಕ್ಷಯ ಮೋಟಾರ್ಸ್ ಡೀಲರ್ ಶಿಪ್ ಉದ್ಘಾಟನೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿರುವ ಎಬೆರ್ ಹಾರ್ಡ್ ಕೆರ್ನ್ ನಿರ್ವಹಿಸಿದರು. ಇದರೊಂದಿಗೆ ಉದ್ಯಾನಗರಿಯಲ್ಲಿ ಬೆಂಝ್ ಮೂರನೇಯ ಹಾಗೂ ಅಕ್ಷಯ ಮೋಟಾರ್ಸ್‌ನ ಎರಡನೇ ಶೋ ರೂಂ ತೆರೆದುಕೊಂಡಿದೆ.

ಮರ್ಸಿಡಿಸ್ ಬೆಂಝ್ ನೂತನ ಶೋ ರೂಂ ಬೆಂಗಳೂರಿನಲ್ಲಿ ಆರಂಭ

4350 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ನೂತನ ಸ್ಟೇಟ್ ಆಫ್ ಆರ್ಟ್ ಶೋ ರೂಂ ಬೆಂಗಳೂರಿನ ಕೋರಮಂಗಲದ ನಾಲ್ಕನೇ ಬ್ಲಾಕ್ ನಲ್ಲಿರುವ 80 ಅಡಿ ರಸ್ತೆಯ ನಂ.107/3 ವಿಳಾಸದಲ್ಲಿದೆ.

ಮರ್ಸಿಡಿಸ್ ಬೆಂಝ್ ನೂತನ ಶೋ ರೂಂ ಬೆಂಗಳೂರಿನಲ್ಲಿ ಆರಂಭ

ಬೆಂಗಳೂರಿನ ಅಕ್ಷಯ ಮೋಟರ್ಸ್ ನಲ್ಲಿ ಗ್ರಾಹಕರು ಮರ್ಸಿಡಿಸ್-ಬೆಂಝ್‌ನ ಎಲ್ಲ ಮಾದರಿಯ ಕಾರುಗಳ ಶ್ರೇಣಿಗಳನ್ನು ಪಡೆಯಬಹುದಾಗಿದೆ. ಹಾಗೆಯೇ ಶೋ ರೂಂ ಆವರಣದಲ್ಲಿ ಎಕ್ಸಿಕ್ಲೂಸಿವ್ ಮರ್ಸಿಡಿಸ್ ಕೆಫೆ ಕೂಡಾ ಇರಲಿದ್ದು, ಗ್ರಾಹಕರಿಗೆ ಐಷಾರಾಮಿ ಅನುಭೂತಿ ಒದಗಿಸಲಿದೆ.

ಮರ್ಸಿಡಿಸ್ ಬೆಂಝ್ ನೂತನ ಶೋ ರೂಂ ಬೆಂಗಳೂರಿನಲ್ಲಿ ಆರಂಭ

ಈ ಸಂದರ್ಭದಲ್ಲಿ ಮಾತನಾಡಿದ ಅಕ್ಷಯ ಮೋಟಾರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಪಿ.ಶ್ಯಾಮ್, ಕೋರಮಂಗಲದ ಪ್ರತಿಷ್ಠಿತ ವಸತಿ ಪ್ರದೇಶದಲ್ಲಿ ನಮ್ಮ ಬೆಂಗಳೂರಿನ ಎರಡನೇ ಬೆಂಝ್ ಶೋರೂಂ ಆರಂಭಿಸುತ್ತಿರುವುದಕ್ಕೆ ಸಂತಸವಾಗಿದೆ ಎಂದಿದ್ದಾರೆ. ಅಲ್ಲದೆ ಹೆಚ್ಚುತ್ತಿರುವ ಬೆಂಝ್ ಗ್ರಾಹಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.

ಮರ್ಸಿಡಿಸ್ ಬೆಂಝ್ ನೂತನ ಶೋ ರೂಂ ಬೆಂಗಳೂರಿನಲ್ಲಿ ಆರಂಭ

ಒಟ್ಟಿನಲ್ಲಿ ನಿರಂತರ ಅಂತರಾಳದಲ್ಲಿ ನೂತನ ಮಾದರಿಗಳನ್ನು ಪರಿಚಯಿಸಿರುವ ಮರ್ಸಿಡಿಸ್ ಬೆಂಝ್, ಮುಂಬರುವ ದಿನಗಳಲ್ಲಿ ಮತ್ತಷ್ಟು ಮಾರಾಟನವನ್ನು ಕುದುರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

More from DriveSpark

Article Published On: Thursday, June 18, 2015, 10:42 [IST]
English summary
Mercedes-Benz have inaugurated a new showroom in Bangalore, to strengthen their presence in South India. Eberhard Kern, the MD & CEO of Mercedes-Benz India was present to inaugurate the new world class Akshaya Motors dealership.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+