2016 ಮರ್ಸಿಡಿಸ್ ಬೆಂಝ್ ಇ-ಕ್ಲಾಸ್‌ನ ಕ್ಲಾಸಿಕ್ ನೋಟ
ನಿರಂತರ ಅಂತರಾಳದಲ್ಲಿ ಹೊಸ ಹೊಸ ಮಾದರಿಗಳನ್ನು ಪರಿಚಯಿಸುವುದರಲ್ಲಿ ತನ್ನ ಬದ್ದತೆಯನ್ನು ಪ್ರದರ್ಶಿಸುತ್ತಿರುವ ಜರ್ಮನಿಯ ಪ್ರೀಮಿಯಂ ಕಾರು ತಯಾರಿಕ ಸಂಸ್ಥೆಯಾಗಿರುವ ಮರ್ಶಿಡಿಸ್ ಬೆಂಝ್, ಭಾರತೀಯ ಮಾರುಕಟ್ಟೆಯಲ್ಲಿ ಐಷಾರಾಮಿ 2015 ಇ-ಕ್ಲಾಸ್ ಮಾದರಿಯನ್ನು ಬಿಡುಗಡೆಗೊಳಿಸಿದೆ.
2015ನೇ ಸಾಲಿನಲ್ಲಿ ಪರಿಷ್ಕೃತ ಮಾಡೆಲ್ ಸೇರಿದಂತೆ ಒಟ್ಟು 15 ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಬೆಂಝ್ ಹೊಂದಿದೆ. ಇದರಂಗವಾಗಿ ಇ-ಕ್ಲಾಸ್ ಪ್ರವೇಶಿಸಿದ್ದು, ಅತ್ಯುತ್ತಮ ಮಾರಾಟ ತಲುಪುವ ನಿರೀಕ್ಷೆಯಲ್ಲಿದೆ.

30,000 ಯುನಿಟ್ ಗಳ ಮಾರಾಟವನ್ನು ತಲುಪಿರುವ ಸಂಭ್ರಮದ ಅಂಗವಾಗಿ ಹೊಸ ಇ-ಕ್ಲಾಸ್ ಆಗಮನವಾಗುತ್ತಿದೆ. ಇದು ಈಗಾಗಲೇ ಜನ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಇ 200 - 48.50 ಲಕ್ಷ ರು.
- ಇ 250 ಸಿಡಿಐ - 50.70 ಲಕ್ಷ ರು.
- ಇ 350 ಸಿಡಿಐ - 59.90 ಲಕ್ಷ ರು.
ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಲಗ್ಷುರಿ ಸೆಡಾನ್ ಕಾರುಗಳಲ್ಲಿ ಇ-ಕ್ಲಾಸ್ ಗುರುತಿಸಿಕೊಂಡಿದೆ. ಈಗ ಹೊಸ ಮಾದರಿಯ ಪ್ರವೇಶದೊಂದಿಗೆ ತನ್ನ ಸಾನಿಧ್ಯವನ್ನು ಮತ್ತಷ್ಟು ಬಲಪಡಿಸಲಿದೆ.
ಪ್ರಮುಖ ವೈಶಿಷ್ಟ್ಯಗಳು
- ಟೆಲಿಮ್ಯಾಟಿಕ್ಸ್ ಜೊತೆ ನೇವಿ ರೆಡಿ ಕ್ರಿಯಾತ್ಮಕತೆ,
- ಗಾರ್ಮಿನ್ ಪೈಲಟ್ ನೇವಿಗೇಷನ್,
- ಹೊಸ ರಿವರ್ಸ್ ಕ್ಯಾಮೆರಾ


Click it and Unblock the Notifications