ಬೆಂಝ್ ಎಲೆಕ್ಟ್ರಿಕ್ ಎಸ್‌ಯುವಿ ಭಾರತಕ್ಕೆ ಬರುತ್ತಾ?
ಪ್ರತಿಷ್ಠಿತ 66ನೇ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ತವರೂರು ಜರ್ಮನಿಯದ್ದೇ ಸಂಸ್ಥೆ ಆಗಿರುವ ಮರ್ಸಿಡಿಸ್ ಬೆಂಝ್ ಅನೇಕ ನೂತನ ಮಾದರಿಗಳನ್ನು ಪರಿಚಯಿಸಿದೆ. ಇವುಗಳಲ್ಲಿ ವಿದ್ಯುತ್ ಚಾಲಿತ ಕ್ರೀಡಾ ಬಳಕೆಯ ವಾಹನ ಹಾಗೂ ಸೆಡಾನ್ ಕಾರುಗಳು ಪ್ರಮುಖವೆನಿಸಿದೆ.
ವರ್ಷವೊಂದರಲ್ಲಿ 15ರಷ್ಟು ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ ಭಾರತದಂತಹ ವಿಸ್ತಾರವಾದ ಮಾರುಕಟ್ಟೆಯನ್ನು ತನ್ನ ಪ್ರಮುಖ ಮಾರಾಟ ವಲಯವನ್ನಾಗಿ ಮಾರ್ಪಾಡುಗೊಳಿಸುತ್ತಿರುವ ಬೆಂಝ್ ಭವಿಷ್ಯತ್ತಿನ ಮಾದರಿಗಳು ದೇಶದಲ್ಲೂ ಬಿಡುಗಡೆಯಾಗಲಿದೆಯೇ ಎಂಬುದು ಕುತೂಹಲವೆನಿಸಿದೆ.

2015 ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಈ ಬಗ್ಗೆ ತನ್ನ ಯೋಜನೆಯನ್ನು ವ್ಯಕ್ತಪಡಿಸಿರುವ ಬೆಂಝ್ ಅಧಿಕಾರಿಗಳು, ಸಂಪೂರ್ಣ ಎಲೆಕ್ಟ್ರಿಕ್ ಸಾಮರ್ಥ್ಯದ ಕ್ರೀಡಾ ಬಳಕೆಯ ವಾಹನವನ್ನು ನಿಕಟ ಭವಿಷ್ಯದಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಹಾಗಿದ್ದರೂ ಸದ್ಯಕ್ಕಂತೂ ಬೆಂಝ್ ಭವಿಷ್ಯತ್ತಿನ ಕಾರುಗಳು ಭಾರತ ಪ್ರವೇಶ ಸಾಧ್ಯತೆ ಕಡಿಮೆಯಾಗಿದೆ. ಇದಕ್ಕೂ ಮೊದಲು ಮೂಲ ಸೌಕರ್ಯಗಳ ಕೊರತೆ ನಿವಾರಣೆಯಾಗಬೇಕಾಗಿದೆ.


Click it and Unblock the Notifications