ಬೆಂಝ್ ಬಹುಕೋಟಿ ದುಬಾರಿಯ ಶಸ್ತ್ರಸಜ್ಜಿತ ಕಾರು ಬಿಡುಗಡೆ
ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಬಹು ಕೋಟಿ ಬೆಲೆಯ ಶಸ್ತ್ತಸಜ್ಜಿತ ಕಾರೊಂದನ್ನು ಬಿಡುಗಡೆಗೊಳಿಸಿದೆ. ಹೌದು, ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್ ನಲ್ಲಿ ನಡೆದ ಭರ್ಜರಿ ಸಮಾರಂಭದಲ್ಲಿ ಮರ್ಸಿಡಿಸ್ ಬೆಂಝ್ ಎಸ್600 ಗಾರ್ಡ್ ಕಾರು ದೇಶಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ.
ಗಣ್ಯರಿಗೆ ಶ್ರೀರಕ್ಷೆಯಾದ ಟಾಪ್ 10 ಆರ್ಮರ್ಡ್ ಕಾರ್ಸ್
ಅಷ್ಟಕ್ಕೂ ಇದರ ಬೆಲೆ ಎಷ್ಟು ಅಂತೀರಾ? ನೂತನ ಬೆಂಝ್ ಎಸ್600 ಗಾರ್ಡ್ ಬರೋಬ್ಬರಿ 8.9 ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ. ಅಷ್ಟಕ್ಕೂ ಕಾರಿನಲ್ಲಿರುವ ವಿಶೇಷತೆಗಳೇನು? ಮುಂದಕ್ಕೆ ಓದಿ

ಖ್ಯಾತ ಉದ್ಯಮಿ, ರಾಜಕಾರಣಿ ಹಾಗೂ ಅತ್ಯಂತ ಉನ್ನತ ಪದವಿಯಲ್ಲಿರುವ ಸರಕಾರದ ಸಚಿವರುಗಳಿಗೆ ನೂತನ ಬೆಂಝ್ ಕಾರು ಹೆಚ್ಚು ಸೂಕ್ತವೆನಿಸಲಿದೆ.

ಗರಿಷ್ಟ ಸುರಕ್ಷತೆಯನ್ನು ಒದಗಿಸುವುದು ಬೆಂಝ್ ಎಸ್600 ಕಾರಿನ ಗುರಿಯಾಗಿದೆ. ಇದರಲ್ಲಿ ಬಾಂಬ್ ನಿಂದ ಹಿಡಿದು ಗ್ರೇನೇಡ್, ಗುಂಡಿನ ದಾಳಿಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ.

ಬೆಂಝ್ ಎಸ್600 ಗಾರ್ಡ್ ಆರ್ಮರ್ಡ್ ಕಾರು 6.0 ಲಿಟರ್ ವಿ12 ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 530 ಅಶ್ವಶಕ್ತಿ (830 ತಿರುಗುಬಲ) ಉತ್ಪಾದಿಸಲಿದೆ. ಅಲ್ಲದೆ 7ಜಿ ಟ್ರಾನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಇರಲಿದೆ.

ನಿಮಗಿದು ಗೊತ್ತೇ? ಬೆಂಝ್ ಎಸ್600 ಗಾರ್ಡ್ ಆರ್ಮರ್ಡ್ ಕಾರು ಭರ್ಜರಿ 4 ಟನ್ ಗಳಷ್ಟು ಭಾರವನ್ನು ಹೊಂದಿದೆ. ಇದರ ಪ್ರತಿಯೊಂದು ಬಾಗಿಲುಗಳು 80 ಕೆ.ಜಿಗಳಷ್ಟು ಭಾರವನ್ನು ಹೊಂದಿದೆ. ಅಲ್ಲದೆ ಪ್ರತಿಯೊಂದು ಗಾಜುಗಳು 65 ಎಂಎಂಗಳಷ್ಟು ದಪ್ಪವಾಗಿದೆ.

ಸುರಕ್ಷತೆ
ನಿರಂತರ ಪ್ರಯೋಗದ ಬಳಿಕ ಬೆಂಝ್ ಎಸ್600 ಗಾರ್ಡ್ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಗರಿಷ್ಠ ವಿಆರ್9 ಮಟ್ಟದ ಭದ್ರತೆಯನ್ನು ನೀಡಲಾಗಿದೆ. ಇನ್ನು ಇದರ ವಿಶಿಷ್ಟ ದೇಹ ವಿನ್ಯಾಸವು ಗ್ರೇನೆಡ್ ದಾಳಿಯಿಂದಲೂ ಪಾರಾಗುವ ಸಾಮರ್ಥ್ಯ ಹೊಂದಿದೆ.

ಇದರ ಮೊದಲ ಮಾದರಿಯನ್ನು 500ರಷ್ಟು ಗುಂಡಿನ ದಾಳಿಯ ಪರೀಕ್ಷೆ ನಡೆಸಿ ಅಭಿವೃದ್ಧಿಪಡಿಸಲಾಗಿದೆ. ಇನ್ನು ವಿಶೇಷ ಪರಿಣತ ಚಾಲಕರು ಇದಕ್ಕೆ ನೇಮಕ ಮಾಡಲಾಗುವುದು.

ಪ್ರಸ್ತುತ ಕಾರು ಫ್ಲ್ಯಾಟ್ ಟೈರ್ ನಲ್ಲೇ (ಪಂಚರ್ ಆದ ಬಳಿಕವೂ) 19 ಮೈಲ್ ಗಳಷ್ಟು ದೂರ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಕಾರಿಗೆ ಸರ್ಪಗಾವಲಿನಂತೆ 360 ಸುತ್ತುಲೂ ಕ್ಯಾಮೆರಾವನ್ನು ಆಳವಡಿಸಲಾಗುವುದು.

ಇನ್ನುಳಿದಂತೆ ನೈಟ್ ಮೋಡ್ ಸಹಾಯ, ತುರ್ತು ತಾಜಾ ಹವಾ ಸೇವೆ ಇನ್ನು ವೈದ್ಯಕೀಯ ಸೇವೆಗಳು ಲಭ್ಯವಾಗಲಿದೆ.


Click it and Unblock the Notifications