ಮರ್ಸಿಡಿಸ್ ಮೇಬ್ಯಾಕ್ ಎಸ್600 ಲಾಂಚ್; ಬೆಲೆ ಜಸ್ಟ್ 2.6 ಕೋಟಿ!
ಡೈಮ್ಲರ್ ಎಜಿ ಅಧೀನತೆಯಲ್ಲಿರುವ ಮರ್ಸಿಡಿಸ್ ಬೆಂಝ್‌ನ ಮಗದೊಂದು ಐಷಾರಾಮಿ ಮೇಬ್ಯಾಕ್ ಕಾರು ಬ್ರಾಂಡ್ ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ. ಅದುವೇ ಮರ್ಸಿಡಿಸ್-ಮೇಬ್ಯಾಕ್ ಎಸ್600.
ಬೆಲೆ ಮಾಹಿತಿ: 2.6 ಕೋಟಿ ರು. (ಎಕ್ಸ್ ಶೋ ರೂಂ ಪುಣೆ)
ಇದು ಪ್ರಸಕ್ತ ಸಾಲಿನಲ್ಲಿ ದೇಶದಲ್ಲಿ 15 ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಮಾತು ಕೊಟ್ಟಿರುವ ಬೆಂಝ್‌ನ 12ನೇ ಮಾಡೆಲ್ ರೂಪದಲ್ಲಿ ದೇಶ ಪ್ರವೇಶಿಸಿದೆ. ಪ್ರಸ್ತುತ ಕಾರು ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ದೇಶವನ್ನು ತಲುಪಲಿದೆ.

ಹಲವಾರು ಕಾರಣಗಳಿಂದಾಗಿ ಮೇಬ್ಯಾಕ್ ಎಸ್600 ಬಿಡುಗಡೆ ಬೆಂಝ್ ಪಾಲಿಗೆ ಸ್ಮರಣೀಯವೆನಿಸಿತ್ತು. ಅದೇನೆಂದರೆ ದೇಶದಲ್ಲಿ ಬೆಂಝ್ ಎತ್ತರಕ್ಕೆ ಬೆಳೆಯುವಲ್ಲಿ ನೇತೃತ್ವ ವಹಿಸಿರುವ ಎಬೆರ್ ಹಾರ್ಡ್ ಕೆರ್ನ್ ತಮ್ಮ ಮೂರು ವರ್ಷಗಳ ಕಾಲಾವಧಿ ಬಳಿಕ ಬೆಂಝ್ ಇಂಡಿಯಾದ ತಮ್ಮ ನಿರ್ದೇಶಕ ಹಾಗೂ ಸಿಇಒ ಸ್ಥಾನವನ್ನು ರೋಲ್ಯಾಂಡ್ ಎಸ್ ಫಾಲ್ಗರ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ.

ಎಂಜಿನ್ ತಾಂತ್ರಿಕತೆ
6.0 ಲೀಟರ್ ಬೈ ಟರ್ಬೊ ವಿ12
523 ಅಶ್ವಶಕ್ತಿ,
830 ಎನ್‌ಎಂ ತಿರುಗುಬಲ
7 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್

ವಿಶಿಷ್ಟತೆ
ಹೊಂದಾಣಿಸಬಹುದಾದ ಸೀಟು ಬ್ಯಾಕ್,
ಮಸಾಜ್ ಸೀಟು,
ಲೆಥರ್ ಹೋದಿಕೆ,
ಚಿಲ್ಡ್ ರಿಯರ್ ಸೆಂಟರ್ ಆರ್ಮ್ ರೆಸ್ಟ್,
ಬರ್ಮ್ ಸ್ಟೆರ್ 3ಡಿ ಆಡಿಯೋ

ಸುರಕ್ಷತೆ
ಆಟೆಕ್ಷನ್ ಅಸಿಸ್ಟ್
ಪ್ರಿ ಸೇಫ್
ಢಿಕ್ಕಿ ತಡೆ ಸಹಾಯಿ
ಬೆಂಝ್ ಎಂಬ್ರೇಸ್
ರಿಯರ್ ಸೀಟು ಬೆಲ್ಟ್ ಏರ್ ಬ್ಯಾಗ್
ಒಂಬತ್ತು ಏರ್ ಬ್ಯಾಗ್


Click it and Unblock the Notifications