ಬೆಂಝ್ ಮಗದೊಂದು ಮ್ಯಾಜಿಕ್; ಎಸ್‌ಎಲ್‌ಸಿ ಐಷಾರಾಮಿ ಕಾರು

By Nagaraja

ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆ ಮರ್ಸಿಡಿಸ್ ಬೆಂಝ್, ಅತಿ ನೂತನ ಎಸ್‌ಎಲ್‌ಸಿ ರೋಡ್ ಸ್ಟರ್ ಕಾರನ್ನು ಅನಾರಣಗೊಳಿಸಿದೆ. ಪ್ರಸ್ತುತ ಕಾರು ಉತ್ತರ ಅಮೆರಿಕದ ಡೆಟ್ರಾಯ್ಟ್ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಆಟೋ ಶೋದಲ್ಲಿ ಅಧಿಕೃತ ಪ್ರವೇಶ ಪ ಡೆಯಲಿದೆ.

ನಿಮ್ಮ ಮಾಹಿತಿಗಾಗಿ ನೂತನ ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಸಿ ರೋಡ್ ಸ್ಟರ್ ಮಾದರಿಯು ಎಸ್‌ಎಲ್‌ಕೆ ಕ್ಲಾಸ್ ಮಾದರಿಗೆ ನೇರ ಬದಲಿ ಆಯ್ಕೆಯಾಗಿರಲಿದೆ. ಅಲ್ಲದೆ ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಂಡಿದೆ.

ಬೆಂಝ್ ಮಗದೊಂದು ಮ್ಯಾಜಿಕ್; ಎಸ್‌ಎಲ್‌ಸಿ ಐಷಾರಾಮಿ ಕಾರು

ನೂತನ ಎಸ್‌ಎಲ್‌ಸಿ ರೋಡ್ ಸ್ಟರ್ ಐದು ವಿಭಿನ್ನ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ,

  • ಎಸ್‌ಎಲ್‌ಸಿ180,
  • ಎಸ್‌ಎಲ್‌ಸಿ200,
  • ಎಸ್‌‍ಎಲ್‌ಸಿ250ಡಿ,
  • ಎಸ್‌ಎಲ್‌ಸಿ300,
  • ಎಸ್ಎಲ್‌ಸಿ43ಎಎಂಜಿ.
  • ಬೆಂಝ್ ಮಗದೊಂದು ಮ್ಯಾಜಿಕ್; ಎಸ್‌ಎಲ್‌ಸಿ ಐಷಾರಾಮಿ ಕಾರು

    ಈ ಪೈಕಿ ಎಸ್‌ಎಲ್‌ಸಿ43ಎಎಂಜಿ ಟಾಪ್ ಎಂಡ್ ಶ್ರೇಣಿಯಲ್ಲಿ ಗುರುತಿಸಿಕೊಳ್ಳಲಿದ್ದು, ಗರಿಷ್ಠ ಎಂಜಿನ್ ಸಾಮರ್ಥ್ಯವನ್ನು ಪಡೆದುಕೊಳ್ಳಲಿದೆ.

    ಬೆಂಝ್ ಮಗದೊಂದು ಮ್ಯಾಜಿಕ್; ಎಸ್‌ಎಲ್‌ಸಿ ಐಷಾರಾಮಿ ಕಾರು

    ಇಲ್ಲಿ ಮರ್ಸಿಡಿಸ್ ಎಸ್‌ಎಲ್‌ಸಿ180 ಹಾಗೂ ಎಸ್‌ಎಲ್‌ಸಿ200 ಹೊರತಾಗಿ ಇತರೆಲ್ಲ ಮಾದರಿಗಳು ನೈನ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ. ಅದೇ ಹೊತ್ತಿಗೆ ಎಸ್‌ಎಲ್‌ಸಿ180 ಹಾಗೂ ಎಸ್‌ಎಲ್‌ಸಿ200 ಮಾದರಿಗಳಲ್ಲಿ ಸಿಕ್ಸ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರಲಿದೆ.

    ಎಂಜಿನ್ ತಾಂತ್ರಿಕತೆ

    ಎಂಜಿನ್ ತಾಂತ್ರಿಕತೆ

    • ಎಸ್‌ಎಲ್‌ಸಿ180: 1.6 ಲೀಟರ್ ಫೋರ್ ಸಿಲಿಂಡರ್ ಟರ್ಬೊಚಾರ್ಜ್ಡ್, 154 ಅಶ್ವಶಕ್ತಿ, 250 ಎನ್‌ಎಂ ತಿರುಗುಬಲ.
    • ಎಸ್‌ಎಲ್‌ಸಿ200: 1.9 ಟರ್ಬೊ ಚಾರ್ಜ್ಡ್ ಫೋರ್ ಪೊಟ್, 181 ಅಶ್ವಶಕ್ತಿ, 300 ಎನ್‌ಎಂ ತಿರುಗುಬಲ.
    • ಎಸ್‌ಎಲ್‌ಸಿ300: 1.9 ಟರ್ಬೊ ಚಾರ್ಜ್ಡ್ ಫೋರ್ ಪೊಟ್, 241 ಅಶ್ವಶಕ್ತಿ, 370 ಎನ್‌ಎಂ ತಿರುಗುಬಲ.
    • ಎಸ್‌ಎಲ್‌ಸಿ250: 2.1 ಲೀಟರ್ ಟರ್ಬೊ ಚಾರ್ಜ್ಡ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್, 201 ಅಶ್ವಶಕ್ತಿ, 500 ಎನ್‌ಎಂ ತಿರುಗುಬಲ.
    • ಎಂಜಿನ್ ತಾಂತ್ರಿಕತೆ

      ಎಂಜಿನ್ ತಾಂತ್ರಿಕತೆ

      • ಎಸ್‌ಎಲ್‌ಸಿ43ಎಎಂಜಿ: ತ್ರಿ ಲೀಟರ್ ವಿ6 ಟರ್ಬೊಚಾರ್ಜ್ಡ್ ಎಂಜಿನ್, 362 ಅಶ್ವಶಕ್ತಿ. 520 ಎನ್‌ಎಂ ತಿರುಗುಬಲ.
      • ವೇಗವರ್ಧನೆ: 4.7 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ.
      • ಗರಿಷ್ಠ ವೇಗ: ಗಂಟೆಗೆ 250 ಕೀ.ಮೀ.
      • ಬೆಂಝ್ ಮಗದೊಂದು ಮ್ಯಾಜಿಕ್; ಎಸ್‌ಎಲ್‌ಸಿ ಐಷಾರಾಮಿ ಕಾರು

        ಇನ್ನು ಶೈಲಿ ಬಗ್ಗೆ ಮಾತನಾಡುವುದಾದ್ದಲ್ಲಿ ನೂತನ ಎಸ್‌ಎಲ್‌ಸಿ ಹೊಸತಾದ ಫ್ರಂಟ್ ಬಂಪರ್ ಜೊತೆ ಎಂಜಿನ್ ಕೂಲಿಂಗ್ ಗಾಗಿ ದೊಡ್ಡದಾದ ಏರ್ ಇಂಟೇಕ್ ಪಡೆಯಲಿದೆ. ಪರಿಷ್ಕೃತ ಗ್ರಿಲ್ ಜೊತೆ ಡೈಮಂಡ್ ಆಕಾರದ ಇಂಸರ್ಟ್ ಡಿಸೈನ್, ಹೊಸತಾದ ಹೆಡ್ ಲೈಡ್ ಜೊತೆ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಮುಂತಾದ ಸೌಲಭ್ಯಗಳಿರಲಿದೆ.

        ಬೆಂಝ್ ಮಗದೊಂದು ಮ್ಯಾಜಿಕ್; ಎಸ್‌ಎಲ್‌ಸಿ ಐಷಾರಾಮಿ ಕಾರು

        ಕಾರಿನ ಹಿಂದುಗಡೆಯೂ ಗಮನಾರ್ಹ ಬದಲಾವಣೆಗಳು ಕಂಡುಬರಲಿದ್ದು, ಹೊಸತಾದ ಎಲ್‌ಇಡಿ ಟೈಲ್ ಲೈಟ್ ಗ್ರಾಫಿಕ್ಸ್, ಟೈಲ್ ಪೈಪ್ ಮುಂತಾದ ವೈಶಿಷ್ಟ್ಗಳು ಪ್ರಮುಖವಾಗಿಯೂ ಎದ್ದು ಕಾಣಿಸಲಿದೆ.

        ಬೆಂಝ್ ಮಗದೊಂದು ಮ್ಯಾಜಿಕ್; ಎಸ್‌ಎಲ್‌ಸಿ ಐಷಾರಾಮಿ ಕಾರು

        ಹಾಗಿದ್ದರೂ ಕಾರಿನ ಒಳಮೈ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುವುದಿಲ್ಲ. ಮುಖ್ಯವಾಗಿಯೂ ನಾಲ್ಕು ಇಂಚುಗಳ ಮಾಹಿತಿ ಮನರಂಜನಾ ಪರದೆ ಜೊತೆಗೆ ತೆರೆಯಬಹುದಾದ ರೂಫ್ ಆರಾಮದಾಯಕ ಚಾಲನೆಯನ್ನು ನೀಡಲಿದೆ. ಗಂಟೆಗೆ 40 ಕೀ.ಮೀ. ವೇಗದಲ್ಲೂ ಇದು ಕಾರ್ಯ ನಿರ್ವಹಿಸಲಿದೆ.

        ಬೆಂಝ್ ಮಗದೊಂದು ಮ್ಯಾಜಿಕ್; ಎಸ್‌ಎಲ್‌ಸಿ ಐಷಾರಾಮಿ ಕಾರು

        ಅಂತಿಮವಾಗಿ ಬೆಲೆಯ ಬಗ್ಗೆ ವಿವರಗಳು ಬಿಡುಗಡೆ ವೇಳೆಯಷ್ಟೇ ಲಭ್ಯವಾಗಲಿದೆ. ಅತಿ ನೂತನ ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಸಿ ರೋಡ್ ಸ್ಟರ್ 2016 ಮಾರ್ಚ್ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

Article Published On: Tuesday, December 22, 2015, 15:10 [IST]
English summary
Mercedes Reveals SLK Replacement - The SLC Class - Photos
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+