ಜಿನೆವಾದಲ್ಲಿ ಮಿಟ್ಸುಬಿಸಿ ಹೊಸ ಕಾನ್ಸೆಪ್ಟ್ ಅನಾವರಣ
ಈ ಬಾರಿಯ ಜಿನೆವಾ ಮೋಟಾರು ಶೋ ಹಲವು ಕಾರಣಗಳಿಂದಾಗಿ ಹೆಚ್ಚಿನ ಮಾಧ್ಯಮ ಗಮನಕ್ಕೆ ಪಾತ್ರವಾಗುತ್ತಿದೆ. ಏಕೆಂದರೆ ಐತಿಹಾಸಿಕ 85ನೇ ಆವೃತ್ತಿ ಜಿನೆವಾ ಮೋಟಾರು ಶೋ 2015 ಮಾರ್ಚ್ 5ರಿಂದ 15ರ ವರೆಗೆ ಆಯೋಜನೆಯಾಗಲಿದೆ.
ಇದರಂತೆ ಜಗತ್ತಿನ ಪ್ರಮುಖ ವಾಹನ ತಯಾರಿಕ ಸಂಸ್ಥೆಗಳನ್ನು ತನ್ನ ಹೊಸ ಹೊಸ ಪರಿಕಲ್ಪನೆಗಳನ್ನು ಪ್ರದರ್ಶಿಸುವುದಕ್ಕಾಗಿ ತುದಿಗಾಲಲ್ಲಿ ನಿಂತಿದೆ. ಇದರಿಂದ ಜಪಾನ್‌ನ ಮಿಟ್ಸುಬಿಸಿ ಕೂಡಾ ಹೊರತಲ್ಲ.

ಈಗ ಈ ಬಾರಿಯ ಜಿನೆವಾ ಮೋಟಾರು ಶೋದಲ್ಲಿ ಮಿಟ್ಸುಬಿಸಿ ಹೊಸತಾದ ಕ್ರಾಸೋವರ್ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಲಿದೆ. ಈ ಸಂಬಂಧ ಆಕರ್ಷಕ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
ಮೊದಲ ನೋಟದಲ್ಲೇ ಎಚ್‌ಆರ್-ವಿಎಚ್‌ಇವಿ ಕಾನ್ಸೆಪ್ಟ್‌ಗೆ ಸಮಾನತೆ ಪಡೆದುಕೊಂಡಿರುವ ಮಿಟ್ಸುಬಿಸಿ ಹೊಸ ಕಾನ್ಸೆಪ್ಟ್ ಕಾರು ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದೆ. ಅಲ್ಲದೆ ಟೀಸರ್ ಚಿತ್ರದಲ್ಲಿ ಹಿಂದುಗಡೆಯ ಟೈಲ್ ಗೇಟ್ ಪ್ರಮುಖ ಆಕರ್ಷಣೆಗೆ ಕಾರಣವಾಗಿದೆ.

ಮಿಟ್ಸುಬಿಸಿ ಹೊಸ ಮಾದರಿಯು ನಿರ್ವಹಣಾ ಕ್ರಾಸೋವರ್ ಆಗಿರಲಿದೆ ಎಂಬುದು ತಿಳಿದು ಬಂದಿದೆ. ಈ ಹಿಂದೆ 2013 ಟೊಕಿಯೊ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿದ್ದ ಎಚ್‌ಆರ್-ವಿಎಚ್‌ಇವಿ ಕಾನ್ಸೆಪ್ಟ್ 1.1 ಲೀಟರ್ ಟರ್ಬೊಚಾರ್ಜ್ಡ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಸಹ ಲಗತ್ತಿಸಲಾಗಿತ್ತು. ಇವೆರಡು ಜಂಟಿಯಾಗಿ 134 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.


Click it and Unblock the Notifications








