ಫಿಯೆಟ್‌ನ ಪರಿಪೂರ್ಣ ಕಾರು - 2015 ಡೊಬ್ಲೊ

By Nagaraja

ಇಟಲಿಯ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಫಿಯೆಟ್ ಆಧುನಿಕತೆಗೆ ತಕ್ಕಂತೆ ವಾರದ ಏಳು ದಿನವೂ ಬಳಕೆ ಮಾಡಬಹುದಾದ 2015 ಡೊಬ್ಲೊ ಕಾರನ್ನು ಪರಿಚಯಿಸಿದೆ. ಈ ನಾಲ್ಕನೇ ತಲೆಮಾರಿನ 'ಆಕ್ಟಿವ್ ಫ್ಯಾಮಿಲಿ ಸ್ಪೇಸ್' ಕಾರನ್ನು ವಾರಂತ್ಯದಲ್ಲಿ ಮಾತ್ರವಲ್ಲದೆ ಕೆಲಸದ ದಿನಗಳಲ್ಲೂ ಬಳಕೆ ಮಾಡಬಹುದಾಗಿದೆ.

ಈ ಹಿಂದೆ 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಪರಿಚಯವಾಗಿದ್ದ ಫಿಯೆಟ್ ಡೊಬ್ಲೊ 2005 ಹಾಗೂ 2010ರಲ್ಲಿ ಪರಿಷ್ಕೃತಗೊಂಡಿತ್ತು. ಈಗ ಸಂಪೂರ್ಣ ಪರಿಸರ ಸ್ನೇಹಿ ಅಗತ್ಯಗಳ ಜೊತೆಗೆ ಆರಾಮದಾಯಕ ಹಾಗೂ ಭವಿಷ್ಯದ ಸಂಚಾರವನ್ನು ಸೃಷ್ಟಿ ಮಾಡುವುದರಲ್ಲಿ ಬದ್ಧವಾಗಿದೆ.

2015 Fiat Doblo

ಫಿಯೆಟ್ ಹೊಸ ಚೈತನ್ಯ ವ್ಯಕ್ತಪಡಿಸುವ ನಿಟ್ಟಿನಲ್ಲಿ ಹೊಸ ಡೊಬ್ಲೊ ಸಂಪೂರ್ಣವಾಗಿ ಪರಿಷ್ಕೃತಗೊಳಿಸಲಾಗಿದ್ದು, ಬಳಕೆದಾರ ಸ್ನೇಹಿ ಎನಿಸಿಕೊಂಡಿದೆ. ಈ ಪೈಕಿ ಹೊಸತಾದ 5 ಇಂಚಿನ ಯುಕನೆಕ್ಟ್ ಮಲ್ಟಿಮೀಡಿಯಾ ಟಚ್ ಸ್ಕ್ರೀನ್ ಸಿಸ್ಟಂ ಮಹತ್ವದೆನಿಸಲಿದ್ದು, ಐಚ್ಛಿಕ ಇಂಟೇಗ್ರೇಟಡ್ ನೇವಿಷನ್ ಸಿಸ್ಟಂ ಮತ್ತು ಡಿಜಿಟಲ್ ರೆಡಿಯೋ (ಡಿಎಬಿ) ಇರಲಿದೆ.
2015 Fiat Doblo

ಇನ್ನು ಕಾರಿನೊಳಗೂ ಅತ್ಯಂತ ಹೆಚ್ಚು ಸ್ಥಳಾವಕಾಶ ಇರಲಿದೆ. ಇದರಲ್ಲಿ ಟಾಪ್ ಕ್ಲಾಸ್ 790 ಲೀಟರ್ ಬೂಟ್ ಸ್ಪೇಸ್ ಹೊಂದಿರುವ ಸಾಧ್ಯತೆಯಿದೆ. ಜೊತೆಗೆ 60/40 ವಿಭಜಿತ ಸೀಟು ಪಡೆಯಲಿದೆ. ಅಷ್ಟೇ ಯಾಕೆ ಹೊಚ್ಚ ಹೊಸ ಡೊಬ್ಲೊದಲ್ಲಿರುವ ಬೈ-ಲಿಂಕ್ ಸಸ್ಪೆಷನ್ ಅತ್ಯುತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡಲಿದೆ. ಇನ್ನು ಟಾಪ್ ಕ್ಲಾಸ್ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಏರ್ ಬ್ಯಾಗ್, ಇಎಸ್‌ಪಿ ಸಿಸ್ಟಂ ಮತ್ತು ಹಿಲ್ ಹೋಲ್ಡರ್ ಫಂಕ್ಷನ್ ಸ್ಟ್ಯಾಂಡರ್ಡ್ ಆಗಿ ಲಭ್ಯವಾಗಲಿದೆ.
2015 Fiat Doblo

ಅಂದ ಹಾಗೆ 1.4ರಿಂದ 2.0 ಲೀಟರ್ ಸಾಮರ್ಥ್ಯದ ವರೆಗಿನ ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ಮಾದರಿಗಳನ್ನು ಹೊಸ ಏಳು ಸೀಟಿನ ಡೊಬ್ಲೊ ಪಡೆಯಲಿದೆ. ಒಟ್ಟಿನಲ್ಲಿ ಇದು ಭಾರತಕ್ಕೂ ಬರಲಿದೆಯೇ ಎಂಬುದು ವಾಹನ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.

More from DriveSpark

Article Published On: Wednesday, February 4, 2015, 16:46 [IST]
English summary
The new Doblo retains its biggest former USP-large, flexible interior space with up to 7 seats and a segment-best 790-litre boot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+